ರಮೇಶ್​​ ಜಾರಕಿಹೊಳಿ, ಮಹೇಶ್​​ ಕುಮಟಳ್ಳಿ ಅನರ್ಹತೆ?; ಸಂಜೆ ವೇಳೆಗೆ ಸ್ಪೀಕರ್​​ ಮಹತ್ವದ ಆದೇಶ

ಸದ್ಯ ಅತೃಪ್ತರ ರಾಜೀನಾಮೆ ಅಂಗೀಕಾರ ವಿಚಾರವಾಗಿ ಗುರುವಾರ ಹೈಡ್ರಾಮಾ ನಡೆಯುತ್ತಿದೆ. ಶಾಸಕಾಂಗ ವರ್ಸಸ್ ನ್ಯಾಯಾಂಗ ನಡುವಣ ಸಮರಕ್ಕೆ ಈ ವಿಚಾರ ವೇದಿಕೆಯಾಗುವ ಸೂಚನೆ ನೀಡಿದೆ.

Ganesh Nachikethu | news18
Updated:July 11, 2019, 4:10 PM IST
ರಮೇಶ್​​ ಜಾರಕಿಹೊಳಿ, ಮಹೇಶ್​​ ಕುಮಟಳ್ಳಿ ಅನರ್ಹತೆ?; ಸಂಜೆ ವೇಳೆಗೆ ಸ್ಪೀಕರ್​​ ಮಹತ್ವದ ಆದೇಶ
ರಮೇಶ್​​ ಜಾರಕಿಹೊಳಿ, ಮಹೇಶ್​​ ಕುಮಟಳ್ಳಿ
 • News18
 • Last Updated: July 11, 2019, 4:10 PM IST
 • Share this:
ಬೆಂಗಳೂರು(ಜುಲೈ.11): ಅತೃಪ್ತ ಶಾಸಕರ ವಿಚಾರಣೆ ಬಳಿಕ ಸ್ಪೀಕರ್​​ ರಮೇಶ್​​ ಕುಮಾರ್​​ ಅವರು, ಮಹತ್ವದ ಆದೇಶವೊಂದು ಹೊರಡಿಸಲಿದ್ದಾರೆ. ಕಾಂಗ್ರೆಸ್​​ನ ಗೋಕಾಕ್​​ ಶಾಸಕ ರಮೇಶ್​​ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ್​​ ಕುಮಟಳ್ಳಿ ಅವರನ್ನೂ ಅನರ್ಹತೆಗೊಳಿಸಿ ಸಂಜೆಯೇ ಆದೇಶ ಹೊರಡಿಸಲಾಗುವುದು. ಬಳಿಕ ಅನರ್ಹತೆ ಆದೇಶ ಪ್ರತಿ ಸುಪ್ರೀಂಕೋರ್ಟ್​ಗೆ ಕಳಿಸಲಾಗುವುದು ಎಂದು ನ್ಯೂಸ್​​-18 ಕನ್ನಡಕ್ಕೆ ಉನ್ನತ ಮೂಲಗಳು ತಿಳಿಸಿವೆ.

ಹಿಂದಿನಿಂದಲೂ ರಮೇಶ್​​ ಜಾರಕಿಹೊಳಿ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಮುಂದುವರೆಸಿದ್ದರು. ಇತ್ತೀಚೆಗೆ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿತ್ತು. ಸಚಿವ ಸತೀಶ್​​ ಜಾರಕಿಹೊಳಿ ಮತ್ತು ಶಾಸಕ ರಮೇಶ್​​ ಜಾರಕಿಹೊಳಿ ಸಹೋದರರ ನಡುವೆ ಸತತವಾಗಿ ವಾಕ್ಸಮರ ಮುಂದುವರಿದಿತ್ತು.ಇಬ್ಬರು ಪರಸ್ಪರ ಏಕವಚನದಲ್ಲೇ ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿದ್ದರು. ಜಾರಕಿಹೊಳಿ ಸಹೋದರರ ಈ ನಡೆ ಸರ್ಕಾರಕ್ಕೆ ಅಪಾಯ ತಂದೊಡ್ಡುವ ಸುಳಿವು ನೀಡಿದೆ.

'ಅತ್ತ ಸತೀಶ್​ ಗೋಮುಖ ವ್ಯಾಘ್ರ. ಅವನಿಂದಲೇ ನಾನು ಮೋಸ ಹೋದೆ' ಎಂದು ಕಾಂಗ್ರೆಸ್​​ ಬಂಡಾಯ ಶಾಸಕ ರಮೇಶ ಜಾರಕಿಹೊಳಿ ನೇರ ವಾಗ್ಧಾಳಿ ನಡೆಸಿದರೇ, ಇತ್ತ'ರಮೇಶ ಒಬ್ಬ ಬೇಜವಾಬ್ದಾರಿ ಶಾಸಕ. ನನ್ನ ಮೇಲೆ ತಾನು ಮಾಡಿರುವ ಆರೋಪ ನಿರಾಧಾರ. ಯಾವುದೋ 'ವಸ್ತು' ಕಳೆದುಕೊಂಡಿದ್ದಕ್ಕೆ ಹೀಗೆ ಹತಾಶರಾಗಿದ್ದಾನೆ' ಎಂದು ಸತೀಶ್​​​ ಪ್ರತಿದಾಳಿ ನಡೆಸಿದ್ದರು.

ಇದನ್ನೂ ಓದಿ: ಬೆಂಗಳೂರಿನತ್ತ ಅತೃಪ್ತರು: ಸಿದ್ದರಾಮಯ್ಯ ರೆಬೆಲ್ಸ್​​ ಮನವೊಲಿಕೆ ಸಾಧ್ಯತೆ; ಬಿಎಸ್​ವೈ ಸಿಎಂ ಕನಸು ಭಗ್ನ?

ಹಾಗೆಯೇ ನನ್ನ ರಾಜೀನಾಮೆ ಸುಮಾರು ಜನ ಬಯಸುತ್ತಿದ್ಧಾರೆ. ನಾನೂ ಅದನ್ನು ಒಪ್ಪುತ್ತೇನೆ. ಒಬ್ಬನೇ ರಾಜೀನಾಮೆ ನೀಡುವುದು ಬೇಡ. ಒಂದಷ್ಟು ಜನ ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಕಾದಿದ್ದೇವೆ. ಸದ್ಯದಲ್ಲೇ ರಾಜೀನಾಮೆ ನೀಡುತ್ತೇವೆ ಎಂದರು. ಈ ಮೂಲಕ ತಾನು ಆಪರೇಷನ್​​​ ಕಮಲಕ್ಕೆ ಬಲಿಯಾಗಿರುವುದಾಗಿ ಪರೋಕ್ಷ ಒಪ್ಪಿಕೊಂಡಿದ್ದರು.

ಈ ಬೆನ್ನಲ್ಲೇ ರಮೇಶ್​​ ಜಾರಕಿಹೊಳಿ ಜೊತೆಗೆ ಅಥಣಿ ಶಾಸಕ ಮಹೇಶ್​​ ಕುಮಟಳ್ಳಿ ಕಾಣಿಸಿಕೊಂಡಿದ್ದರು. ನಂತರ ಹಲವು ಕಾಂಗ್ರೆಸ್​​ ಶಾಸಕಾಂಗ ಸಭೆಗಳಿಗೂ ಗೈರಾಗಿದ್ದರು. ಬಿ.ನಾಗೇಂದ್ರ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ರಮೇಶ್, ಸಮೂಹಿಕ ರಾಜೀನಾಮೆ ನೀಡುತ್ತೇವೆ ಎನ್ನುತ್ತಿದ್ದರು.

ಇದನ್ನೂ ಓದಿ: ನಮಗೆ ನ್ಯಾಯ ಕೊಡಿಸಿ; ಸ್ಪೀಕರ್​​ ವಿರುದ್ಧ ಅತೃಪ್ತ ಶಾಸಕರು ಸುಪ್ರೀಂಕೋರ್ಟ್​​ ಮೊರೆಸದ್ಯ ಅತೃಪ್ತರ ರಾಜೀನಾಮೆ ಅಂಗೀಕಾರ ವಿಚಾರವಾಗಿ ಗುರುವಾರ ಹೈಡ್ರಾಮಾ ನಡೆಯುತ್ತಿದೆ. ಶಾಸಕಾಂಗ ವರ್ಸಸ್ ನ್ಯಾಯಾಂಗ ನಡುವಣ ಸಮರಕ್ಕೆ ಈ ವಿಚಾರ ವೇದಿಕೆಯಾಗುವ ಸೂಚನೆ ನೀಡಿದೆ. ರೆಬೆಲ್ಸ್​ ತಮ್ಮ ರಾಜೀನಾಮೆ ಅರ್ಜಿ ವಿಚಾರವಾಗಿ ಸ್ಪೀಕರ್ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ, ಸುಪ್ರೀಂ ಇಂದು ಸಂಜೆ 6 ಗಂಟೆಯೊಳಗೆ ಒಂದು ನಿರ್ಧಾರ ಕೈಗೊಳ್ಳುವಂತೆ ಆದೇಶ ಹೊರಡಿಸಿದೆ. ರಾಜೀನಾಮೆ ಅಂಗೀಕಾರ ಅಥವಾ ತಿರಸ್ಕಾರದ ಕುರಿತ ನಿರ್ಣಯ  ಪ್ರಕಟಿಸುವಂತೆ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನಿರ್ದೇಶನ ನೀಡಿದೆ.

(ವರದಿ: ಚಿದಾನಂದ ಪಟೇಲ್​)
--------------
First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,201,656

   
 • Total Confirmed

  1,675,005

  +71,353
 • Cured/Discharged

  371,866

   
 • Total DEATHS

  101,483

  +5,791
Data Source: Johns Hopkins University, U.S. (www.jhu.edu)
Hospitals & Testing centres