Husband Murder: ಗಂಡನನ್ನ ಬೆಂಗಳೂರಲ್ಲಿ ಕೊಲೆ ಮಾಡಿ ಮಂಡ್ಯದಲ್ಲಿ ಸಿಕ್ಕಿ ಬಿದ್ದ ಖತರ್ನಾಕ್ ಹೆಂಡತಿ!

ಗಂಡನನ್ನು ಬೆಂಗಳೂರಿನಲ್ಲಿ ಕೊಲೆಗೈದ ಪತ್ನಿ ಮಂಡ್ಯದಲ್ಲಿ ತಗ್ಲಾಕೊಂಡ ಘಟನೆ ನಡೆದಿದೆ. ಮಂಡ್ಯದಲ್ಲಿ ಅಂತ್ಯಸಂಸ್ಕಾರದ ವೇಳೆ ಅನುಮಾನಗೊಂಡು ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಪಿಟ್ಸ್ ರೋಗದ ಕಥೆ ಹೆಣೆದಿದ್ದ ಚಾಲಾಕಿ ಹೆಂಡ್ತಿ ಅರೆಸ್ಟ್ ಆಗಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗಂಡ ಮತ್ತು ಹೆಂಡತಿ (Husband And Wife) ಜೋಡಿಯನ್ನು ಏಳೇಳು ಜನ್ಮಗಳ ಜೋಡಿ ಅಂತಾ ಹೇಳ್ತಾರೆ. ಆದರೆ ಇಂದಿನ ಕಾಲದಲ್ಲಿ ಈ ಜೋಡಿ (Pair) ಒಂದು ಜನ್ಮಕ್ಕೆ ಚೆನ್ನಾಗಿ ಇದ್ದರೆ ಸಾಕು ಎನ್ನಿಸಿಬಿಟ್ಟಿದೆ. ಪತ್ನಿಯೇ ಕೊಲೆ ಮಾಡೋದು, ಪತಿ ಹತ್ಯೆ ಮಾಡೋದು ಈಗಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಇಲ್ಲೊಬ್ಬ ಖತರ್ನಾಕ್ ಹೆಂಡ್ತಿ ತಾಳಿ ಕಟ್ಟಿದ (Marriage) ಗಂಡನನ್ನೇ ಕೊಲೆ (Murder) ಮಾಡಿದ್ದಾಳೆ. ಇನ್ನೂ ಥ್ರಿಲ್ಲರ್ ಅಂದ್ರೆ, ಈಕೆ ಬೆಂಗಳೂರಿನಲ್ಲಿ (Bengaluru) ಗಂಡನನ್ನು ಕೊಲೆಗೈದು ಮಂಡ್ಯದಲ್ಲಿ ಪೊಲೀಸರ (Police) ಕೈಗೆ ತಗ್ಲಾಕೊಂಡಿದ್ದಾಳೆ. ಗಂಡ ಪಿಟ್ಸ್ ಬಂದು ಸಾವನ್ನಪ್ಪಿದ್ದ ಅಂತಾ ಹೆಂಡ್ತಿ ಕಥೆ ಕಟ್ಟಿದ್ದಳು. ಇದೀಗ ಆಕೆಯ ಬಣ್ಣ ಬಯಲಾಗಿದೆ.

ಗಂಡನನ್ನು ಬೆಂಗಳೂರಿನಲ್ಲಿ ಕೊಲೆಗೈದ ಪತ್ನಿ ಮಂಡ್ಯದಲ್ಲಿ ತಗ್ಲಾಕೊಂಡ ಘಟನೆ ನಡೆದಿದೆ. ಮಂಡ್ಯದಲ್ಲಿ ಅಂತ್ಯಸಂಸ್ಕಾರದ ವೇಳೆ ಅನುಮಾನಗೊಂಡು ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಪಿಟ್ಸ್ ರೋಗದ ಕಥೆ ಹೆಣೆದಿದ್ದ ಚಾಲಾಕಿ ಅರೆಸ್ಟ್ ಆಗಿದ್ದಾಳೆ.

ಹೆಂಡತಿ ಶಿಲ್ಪಾ ಹಾಗೂ ಸಂಬಂಧಿಯಿಂದ ಕೃತ್ಯ
ಹೆಂಡತಿ ಶಿಲ್ಪಾ ಎನ್ನುವಾಕೆಯೇ ಕೊಲೆಗೈದ ಪತ್ನಿ. ಮಹೇಶ್ ಕೊಲೆಯಾದ ಗಂಡ. ಮಹೇಶ್ನನ್ನು ಹೆಂಡತಿ ಶಿಲ್ಪಾ ಹಾಗೂ ಆಕೆಯ ಸಂಬಂಧಿ ಕೊಲೆಗೈದಿದ್ದಾರೆ. ಗಂಡ-ಹೆಂಡತಿ ಇಬ್ಬರೂ ಮಂಡ್ಯ ಮೂಲದವರು. ಶಿಲ್ಪಾಳನ್ನ ಮಹೇಶ್ ಕಳೆದ 8 ವರ್ಷಗಳ ಹಿಂದೆ ಮದುವೆಯಾಗಿದ್ದ. ಮದುವೆಯಾದ ಬಳಿಕ ಬೆಂಗಳೂರಿನ ಕೋಣನಕುಂಟೆಯಲ್ಲಿ ವಾಸಿಸುತ್ತಿದ್ದರು.

criminal wife caught in Mandya after killing her husband in Bengaluru
ಕೊಲೆಯಾದ ಮಹೇಶ್​


ಹೆಂಡ್ತಿ ಬೆಂಗಳೂರಿನಲ್ಲಿ, ಗಂಡ ಮಂಡ್ಯದಲ್ಲಿ!
ಶಿಲ್ಪಾ ಬೆಂಗಳೂರಿನಲ್ಲಿ ವಾಸವಿದ್ರೆ, ಗಂಡ ಮಹೇಶ್ ಮಂಡ್ಯದಲ್ಲಿ ವಾಸವಿದ್ದ. ಮಹೇಶ್ ಆಗಾಗ ಬೆಂಗಳೂರಿಗೆ ಬಂದು ಹೋಗ್ತಿದ್ದ. ಹೀಗೆ ಬ‌ಂದಾಗಲೆಲ್ಲಾ ಮಹೇಶ್ ಕುಡಿದು ಜಗಳ ಮಾಡ್ತಿದ್ದ. ಅನೈತಿಕ ಸಂಬಂಧದ ಅನುಮಾನದಿಂದ ಗಲಾಟೆ ಮಾಡ್ತಿದ್ದ.

ಇದನ್ನೂ ಓದಿ: ದಯಮಾಡಿ ಕ್ಷಮಿಸಿ ನನಗೆ ಬದುಕುವುದಕ್ಕೆ ಇಷ್ಟವಿಲ್ಲ, ಕೈಕುಯ್ದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ!

ಬುದ್ದಿ ಹೇಳಲು ಹೋಗಿ ಹತ್ಯೆ
ಪತಿ ಮಹೇಶ್ನ ಜಗಳದ ಬಗ್ಗೆ ಶಿಲ್ಪಾ ತನ್ನ ಮನೆಯವರಿಗೆ ಹೇಳಿದ್ದಳು. ನಂತರ ಈ ಬಗ್ಗೆ ಬುದ್ದಿ ಹೇಳಲು ಸಂಬಂಧಿಕರು ಆಗಮಿಸಿದ್ದರು. ಆಗಲೂ ಜಗಳವಾಗಿದೆ. ಬುದ್ಧಿ ಹೇಳಲು ಹೋಗಿ ಶಿಲ್ಪಾ ಮತ್ತು ಸಂಬಂಧಿಗಳು, ಮಹೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಮಹೇಶ್ ಮೃತಪಟ್ಟಿದ್ದಾರೆ.

ಪಿಟ್ಸ್ ಬಂದಿದೆ ಎಂದು ಕಥೆ ಕಟ್ಟಿದ್ದ ಪತ್ನಿ!
ಬೆಂಗಳೂರಿನ ಕೋಣನಕುಂಟೆಯಲ್ಲಿ ಘಟನೆ ನಡೆದಿದೆ. ನಂತರ ಪಿಟ್ಸ್ ಬಂದು ಮಹೇಶ್ ಸಾವನ್ನಪ್ಪಿದ್ದಾನೆ ಎಂದು ಮೃತದೇಹ ಹುಟ್ಟೂರಿಗೆ ತೆಗೆದುಕೊಂಡು ಹೋಗಿದ್ದಳು. ಆಗ ಅನುಮಾನಗೊಂಡು ಮಹೇಶ್ ಪೋಷಕರು ಮೃತದೇಹವನ್ನು ಪರೀಕ್ಷಿಸಿದ್ದಾರೆ.

ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆ.
ಮೃತದೇಹ ಪರೀಕ್ಷಿಸಿದಾಗ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದೆ. ಆಗ ಪೋಷಕರು ಮಂಡ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣವನ್ನ ಮಂಡ್ಯ ಪೊಲೀಸರು ಕೋಣನಕುಂಟೆ ಠಾಣೆಗೆ ವರ್ಗಾಯಿಸಿದ್ದು, ಕೋಣನಕುಂಟೆ ಪೊಲೀಸರು ಶಿಲ್ಪಾ ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯನ್ನು ಅಪಹರಿಸಿ ಅತ್ಯಾಚಾರ; ಕ್ಯಾಬ್ ಚಾಲಕರಿಬ್ಬರು ಅರೆಸ್ಟ್

ಪ್ರೀತಿಸಿದ ಯುವತಿಯನ್ನ ಮದ್ವೆಯಾದ ಗೆಳೆಯನ ಮರ್ಡರ್!
ಅವರಿಬ್ಬರು ಒಳ್ಳೆಯ ಗೆಳೆಯರು. ಇಬ್ಬರು ಒಂದೇ ಕಡೆ ಕೆಲಸ ಮಾಡ್ಕೊಂಡಿದ್ರು. ಆದ್ರೆ ಇಬ್ಬರು ಒಂದೇ ಹುಡುಗಿಯನ್ನ ಲವ್ ಮಾಡ್ತಿದ್ದರು. ಇದೀಗ ಈ ಪ್ರೇಮ ಕಥನ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಹಳೆ ಬೈಯಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ರಾಕೇಶ್ ಮತ್ತು ಸತೀಶ್ ಇಬ್ಬರು ಗೆಳೆಯರು. ಇದೀಗ ಸತೀಶ್ ತನ್ನ ಸ್ನೇಹಿತ ರಾಕೇಶ್ನಿಂದ ಕೊಲೆಯಾಗಿದ್ದಾನೆ. ರಾಕೇಶ್ ಗೆಳೆಯನನ್ನ ಚಾಕುವಿನಿಂದ ಚುಚ್ಚಿ ಕೊಂದ ಆರೋಪಿ. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Thara Kemmara
First published: