• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ರೆಸಾರ್ಟ್, ಹೊಟೇಲ್ ಗಳಲ್ಲಿ ಹೊಸ ವರ್ಷಾಚರಣೆ ವೇಳೆ ಕೋವಿಡ್ ಪ್ರಕರಣ ಕಂಡು ಬಂದಲ್ಲಿ ಕ್ರಿಮಿನಲ್ ಕೇಸ್

ರೆಸಾರ್ಟ್, ಹೊಟೇಲ್ ಗಳಲ್ಲಿ ಹೊಸ ವರ್ಷಾಚರಣೆ ವೇಳೆ ಕೋವಿಡ್ ಪ್ರಕರಣ ಕಂಡು ಬಂದಲ್ಲಿ ಕ್ರಿಮಿನಲ್ ಕೇಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೊಸ ವರ್ಷಾಚರಣೆ ವೇಳೆ ಸಂದರ್ಭದಲ್ಲಿ ರಾತ್ರಿ ವೇಳೆ, ಡಿಜೆ ಸೌಂಡ್, ಡ್ಯಾನ್ಸ್, ಪಟಾಕಿ ಸಿಡಿಸುವುದು ಹಾಗ ವಿಶೇಷ ಪಾರ್ಟಿ ನಿಷೇಧಿಸಲಾಗಿದೆ. ಆದರೆ ಕ್ಲಬ್ ಪಬ್, ಹಾಗು ರೆಸ್ಟೋರೆಂಟ್ ಗಳನ್ನು ಪ್ರತಿ ನಿತ್ಯದಂತೆ ತೆರೆಯಲು ನಿರ್ಬಂಧವಿಲ್ಲ.

  • Share this:

ಚಾಮರಾಜನಗರ (ಡಿಸೆಂಬರ್. 30): ಜಿಲ್ಲೆಯ ರೆಸಾರ್ಟ್, ಹೊಟೇಲ್, ಲಾಡ್ಜ್, ಪಬ್, ಮತ್ತು ರೆಸ್ಟೋರೆಂಟ್ ಗಳಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಒಂದೇ ಒಂದು ಕೋವಿಡ್ ಪ್ರಕರಣ ಕಂಡು ಬಂದರು ಸಂಬಂಧಪಟ್ಟ ಮಾಲೀಕರ ಮೇಲೆ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಎಚ್ಚರಿಕೆ ನೀಡಿದ್ದಾರೆ. ಕೋವಿಡ್-19 ಮುಂಜಾಗ್ರತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಈಗಾಗಲೆ ಅವರಿಗೆ ಸೂಚನೆ ನೀಡಲಾಗಿದೆ. ರೆಸಾರ್ಟ್, ಹೊಟೇಲ್, ಲಾಡ್ಜ್, ಪಬ್, ಮತ್ತು ರೆಸ್ಟೋರೆಂಟ್ ಗಳಲ್ಲಿ ಶೇಕಡಾ 50 ರಷ್ಟು ಜನರು ಮಾತ್ರ ಸೇರುವ ಷರತ್ತಿಗೊಳಪಟ್ಟು, ಅನುಮತಿ ನೀಡಿದ್ದು, ಇದನ್ನು ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 58 ರಡಿ ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


ಹೊಸ ವರ್ಷಾಚರಣೆ ವೇಳೆ ಸಂದರ್ಭದಲ್ಲಿ ರಾತ್ರಿ ವೇಳೆ, ಡಿಜೆ ಸೌಂಡ್, ಡ್ಯಾನ್ಸ್, ಪಟಾಕಿ ಸಿಡಿಸುವುದು ಹಾಗ ವಿಶೇಷ ಪಾರ್ಟಿ ನಿಷೇಧಿಸಲಾಗಿದೆ. ಆದರೆ ಕ್ಲಬ್ ಪಬ್, ಹಾಗು ರೆಸ್ಟೋರೆಂಟ್ ಗಳನ್ನು ಪ್ರತಿ ನಿತ್ಯದಂತೆ ತೆರೆಯಲು ನಿರ್ಬಂಧವಿಲ್ಲ. ಲಾಡ್ಜ್, ಹೊಟೇಲ್, ರೆಸಾರ್ಟ್ ಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಜನ ಬುಕ್ ಮಾಡಿದ್ದರೆ ರದ್ದುಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ


ಆಂತರಿಕವಾಗಿ ಸಂಭ್ರಮಾಚರಣೆ ಮಾಡಿಕೊಳ್ಳಲಿ, ಆದರೆ ಸಾರ್ವಜನಿಕವಾಗಿ ಹೊರಗೆ ಬರುವಂತಿಲ್ಲ, ಸಂಭ್ರಮಾಚರಣೆ ಸಂದರ್ಭದಲ್ಲಿ ಒಂದೇ ಒಂದು ಕೋವಿಡ್ ಪ್ರಕರಣ ಕಂಡು ಬಂದರು ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಸಿದ್ದಾರೆ.


ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧ ;


ಚಾಮರಾಜನಗರ ಜಿಲ್ಲೆಯಲ್ಲಿ ಹೊಸವರ್ಷಾರಣೆ ಹಿನ್ನಲೆಯಲ್ಲಿ ಡಿಸೆಂಬರ್ 31 ಹಾಗ ಜನವರಿ 1 ರಂದು ಕೊಳ್ಳೇಗಾಲ ತಾಲೂಕು ಭರಚುಕ್ಕಿ ಜಲಪಾತದ 5 ಕಿಲೋ ಮೀಟರ್ ವ್ಯಾಪ್ತಿ, ಹನೂರು ತಾಲೂಕು ಹೊಗೇನಕಲ್ ಜಲಪಾತ ಹಾಗು ಚಾಮರಾಜನಗರ ತಾಲೂಕಿನ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳ ವ್ಯಾಪ್ತಿಯಲ್ಲಿ ಪ್ರವಾಸಿಗರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.


ಬಂಡೀಪುರ ಹಾಗು ಬಿಳಿಗಿರಿರಂಗನಬೆಟ್ಟದಲ್ಲಿ ಅರಣ್ಯ ಇಲಾಖೆಯ ವಸತಿ ಗೃಹ ಹಾಗು ಡಾರ್ಮೆಟರಿಗಳಲ್ಲಿ ವಾಸ್ತವ್ಯ ನಿರ್ಬಂಧಿಸಲಾಗಿದೆ. ಆದರೆ ಎಂದಿನಂತೆ  ಸಫಾರಿ ಇರಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ : ಅಮ್ಮನ ನೆನಪಿಗಾಗಿ ಮೂರ್ತಿ ನಿರ್ಮಾಣ ಮಾಡಿದ ನಟ ದರ್ಶನ್ ಸ್ನೇಹಿತ ; ಹೆತ್ತಾಕೆಗೆ ಗುಡಿ ನಿರ್ಮಿಸಿ ಗುಡಿ ನಿರ್ಮಿಸಿ ಪೂಜೆ ಮಾಡುತ್ತಿರುವ ಚಿತ್ರನಟ


ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹಾಗು ದೇವರ ದರ್ಶನಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ, ಕೋವಿಡ್ ಮುಂಜಾಗ್ರತಾ ಕ್ರಮ ಅನುಸರಿಸಿ ದೇವರ ದರ್ಶನ ಮಾಡಬಹುದು ಎಂದು ಮಲೈ ಮಹದೇಶ್ವರಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.




65 ವರ್ಷ ಮೇಲ್ಪಟ್ಟ ಹಿರಿಯರು, 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೆ ಇರಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಹೊಟೇಲ್, ಮಾಲ್, ಪಬ್ ಹಾಗು ರೆಸ್ಟೋರೆಂಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗು ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Published by:G Hareeshkumar
First published: