• Home
  • »
  • News
  • »
  • state
  • »
  • Minister Sudhakar: ಸಚಿವ ಸುಧಾಕರ್ ವಿರುದ್ಧ ಕ್ರಿಮಿನಲ್ ಕೇಸ್, ವೈಯಕ್ತಿಕ ನಿಂದನೆ ಪ್ರಕರಣದಲ್ಲಿ ಕೋರ್ಟ್‌ನಿಂದ ಸಮನ್ಸ್

Minister Sudhakar: ಸಚಿವ ಸುಧಾಕರ್ ವಿರುದ್ಧ ಕ್ರಿಮಿನಲ್ ಕೇಸ್, ವೈಯಕ್ತಿಕ ನಿಂದನೆ ಪ್ರಕರಣದಲ್ಲಿ ಕೋರ್ಟ್‌ನಿಂದ ಸಮನ್ಸ್

ಸಚಿವ ಸುಧಾಕರ್

ಸಚಿವ ಸುಧಾಕರ್

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ (R. Anjaneya Reddy) ಅವರು ಸುಧಾಕರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ಈ ದೂರಿನ ವಿಚಾರಣೆ ನಡೆಸಿದ ಕೋರ್ಟ್, ಸಚಿವರಿಗೆ ಸಮನ್ಸ್ ಜಾರಿ ಮಾಡಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಸಚಿವ ಡಾ. ಕೆ. ಸುಧಾಕರ್ (Minister Dr. K. Sudhakar) ವಿರುದ್ಧ ಕ್ರಿಮಿನಲ್ ಕೇಸ್ (Criminal Case) ದಾಖಲಿಸಲು ಬೆಂಗಳೂರಿನ (Bengaluru) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Court) ಆದೇಶ ನೀಡಿದೆ. ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶಿಸಿರುವ ಕೋರ್ಟ್, ಸಮನ್ಸ್ ಜಾರಿ (Summons) ಮಾಡಿದೆ. ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ (R. Anjaneya Reddy) ಅವರು ಸುಧಾಕರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ಈ ದೂರಿನ ವಿಚಾರಣೆ ನಡೆಸಿದ ಕೋರ್ಟ್, ಸಚಿವರಿಗೆ ಸಮನ್ಸ್ ಜಾರಿ ಮಾಡಿದೆ.


ಆರೋಗ್ಯ ಸಚಿವರ ವಿರುದ್ಧ ಕ್ರಿಮಿನಲ್ ಕೇಸ್


ಆರೋಗ್ಯ ಸಚಿವ ಡಾ ಕೆ ಸುಧಾಕರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ. ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ವಿರುದ್ಧ ವೈಯುಕ್ತಿಕ ನಿಂದನೆ ಪ್ರಕರಣದಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಕೋರ್ಟ್ ಆದೇಶಿಸಿದೆ.


ಶಾಶ್ವತ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ


“ಆಂಜನೇಯ ರೆಡ್ಡಿ ಡೋಂಗಿ ಹೋರಾಟಗಾರ” ಎಂದಿದ್ದ ಸುಧಾಕರ್


ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ಇದ್ದಾಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಅಂದಿನ ಶಾಸಕ ಕೆ. ಸುಧಾಕರ್ ಅವರು ನೇಮಕಗೊಂಡಿದ್ದರು. ಆಗ ಅದನ್ನು ಆಂಜನೇಯ ರೆಡ್ಡಿ ಪ್ರಶ್ನೆ ಮಾಡಿದ್ದರು.  ಇವರ ಅರ್ಹತೆ ಮತ್ತು ಮಾನದಂಡ ಪ್ರಶ್ನಿಸಿ ಆಂಜನೇಯ ರೆಡ್ಡಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಸುಧಾಕರ್, ಆಂಜನೇಯರೆಡ್ಡಿ ಅವರನ್ನು ಡೋಂಗಿ ಹೋರಾಟಗಾರ, ರೈತರಿಗೆ ಬಟ್ಟಿ ಸಾರಾಯಿ ಕುಡಿಸಿದ್ದಾನೆ ಎಂದು ನಿಂದಿಸಿದ್ದರು.


ಸಚಿವ ಸುಧಾಕರ್


ಇದನ್ನೂ ಓದಿ: Karnataka Politics: ಸ್ವಯಂಘೋಷಿತ ಮುಖ್ಯಮಂತ್ರಿಗೆ ಕ್ಷೇತ್ರ ಸಿಗ್ತಿಲ್ಲವಾ? ಯತ್ನಾಳ್ ಲೇವಡಿ


ಸಚಿವ ಸುಧಾಕರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ ಆಂಜನೇಯ ರೆಡ್ಡಿ


ಸುಧಾಕರ್ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ಸುಧಾಕರ್ ವಿರುದ್ಧ ವಿಶೇಷ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರು. ಮಾನನಷ್ಟ ಪ್ರಕರಣವನ್ನು ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಬಹುದು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು. ಈ ಆಧಾರದಲ್ಲಿ ಆಂಜನೇಯ ರೆಡ್ಡಿ ಅವರು ಸುಧಾಕರ್ ಡಾ. ಕೆ. ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.


ಸಚಿವರಿಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್


ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಇದೀಗ ಆದೇಶ ಹೊರಡಿಸಿದೆ. ಸಚಿವ ಸುಧಾಕರ್ ವಿರುದ್ಧ ಐಪಿಸಿ ಸೆಕ್ಷನ್ 499, 500, 501, ಹಾಗೂ 34 ರ ಅಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿ ಸುಧಾಕರ್ ಗೆ ಸಮನ್ಸ್ ಜಾರಿ ಮಾಡಿದೆ.


ಇದನ್ನೂ ಓದಿ: Belagavi Politics: ರಾಜಕೀಯ ಮುಖಂಡರಿಂದ ಬೆಳಗಾವಿಯಲ್ಲಿ ಓಲೈಕೆ ರಾಜಕೀಯ; ಜನರಿಗೆ ಹಲವು ಬಗೆ ಬಗೆಯ ಗಿಫ್ಟ್


ಮಾಹಿತಿ ನೀಡಿದ ಆಂಜನೇಯ ರೆಡ್ಡಿ


ಸಚಿವ ಸುಧಾಕರ್ ಅವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿರುವ ಬಗ್ಗೆ ಎಚ್ ಆಂಜನೇಯ ಮಾಹಿತಿ ನೀಡಿದ್ದಾರೆ. ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಆಂಜನೇಯ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Published by:Annappa Achari
First published: