HOME » NEWS » State » CRIME NEWS WOMAN DEAD BODY FOUND IN BENGALURU ANEKAL LAKE POLICE SUSPECT OF MURDER AMP CANK SCT

Crime News: ಆನೇಕಲ್​ನ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

Bangalore Crime: ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆನ್ನಾಗರ ಕೆರೆಯ ಬಳಿ ನಿನ್ನೆ ಬೆಳಗ್ಗೆ ಸಾರ್ವಜನಿಕರು ವಾಯು ವಿಹಾರಕ್ಕೆ ಹೋದಾಗ ಕೆರೆಯಲ್ಲಿ ಶವ ತೇಲುತ್ತಿರುವುದನ್ನು ಕಂಡು ಭಯಗೊಂಡಿದ್ದಾರೆ.

news18-kannada
Updated:February 21, 2021, 9:34 AM IST
Crime News: ಆನೇಕಲ್​ನ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ.
  • Share this:
ಆನೇಕಲ್ (ಫೆ. 21): ಸುಮಾರು 25ರಿಂದ 30 ವಯಸ್ಸಿನ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆನ್ನಾಗರ ಕೆರೆಯಲ್ಲಿ ನಡೆದಿದೆ. ಬೆಳಗ್ಗೆ ಸಾರ್ವಜನಿಕರು ವಾಯು ವಿಹಾರಕ್ಕೆ ಹೋದಾಗ ಕೆರೆಯಲ್ಲಿ ಶವ ತೇಲುತ್ತಿರುವುದನ್ನು ಕಂಡು ಭಯಗೊಂಡಿದ್ದಾರೆ . ಕೂಡಲೇ ಸ್ಥಳೀಯರು ಜಿಗಣಿ ಠಾಣೆಗೆ ಕರೆ ಮಾಡಿ ಕೆರೆಯಲ್ಲಿ ಶವ ತೇಲುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿಗಣಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ . ಈ ವೇಳೆ ಕೆರೆಯಲ್ಲಿ ಶವ ತೇಲುತ್ತಿರುವುದು ಕಂಡು ಬಂದಿದೆ. ಸ್ಥಳೀಯರ ನೆರವಿನಿಂದ ಶವವನ್ನು ಕೆರೆಯಿಂದ ಹೊರಗೆ ತೆಗೆದಿದ್ದಾರೆ. ಕಪ್ಪು ಬಣ್ಣದ ಚೂಡಿದಾರ್ ಧರಿಸಿದ್ದ ಸುಮಾರು ಇಪ್ಪತ್ತೈದರಿಂದ ಮೂವತ್ತು ವರ್ಷದ ಅಪರಿಚಿತ ಮಹಿಳೆ ಶವ ಎಂಬುದು ಕಂಡು ಬಂದಿದೆ.

ಅಂದಹಾಗೆ, 1 ವಾರದ ಹಿಂದೆ ಮಹಿಳೆಯೊಬ್ಬಳು ಒಬ್ಬಂಟಿಯಾಗಿ ಕೆರೆಯ ಬಳಿ ಇದ್ದದ್ದನ್ನು ಸ್ಥಳೀಯರು ಗಮನಿಸಿದ್ದಾರೆ ಎನ್ನಲಾಗಿದೆ . ಪೊಲೀಸರ ತನಿಖೆ ವೇಳೆ ಯಾರೋ ದುಷ್ಕರ್ಮಿಗಳು ಕುತ್ತಿಗೆಗೆ ವೇಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದು , ಬಳಿಕ ಹೆನ್ನಾಗರ ಕೆರೆಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ .

ಅದಾಗಲೇ ಶವ ಕೊಳೆತ ಸ್ಥಿತಿಯಲ್ಲಿದ್ದು , ನಾಲಿಗೆ ಹೊರ ಬಂದಿದ್ದು , ಕುತ್ತಿಗೆಯಲ್ಲಿ ವೇಲ್ ಬಿಗಿದಿರುವುದು ಹಾಗೆಯೇ ಇರುವುದರಿಂದ ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ . ದೇಹ ಬಹುತೇಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗುರುತು ಸಹ ಪತ್ತೆಯಾಗಿಲ್ಲ . ಹಾಗಾಗಿ ಯಾರೂ ದುಷ್ಕರ್ಮಿಗಳು ಐದಾರು ದಿನಗಳ ಹಿಂದೆ ಕೊಲೆ ಮಾಡಿ ಮಹಿಳೆ ಶವವನ್ನು ಕೆರೆಯಲ್ಲಿ ಎಸೆದು ಹೋಗಿರುವ ಸಾಧ್ಯತೆ ಇದೆ . ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು , ಎಲ್ಲಾ ಅಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Cyber Crime: ನಕಲಿ ಜಾಬ್ ಆಫರ್‌ನಿಂದ ಈ ವ್ಯಕ್ತಿ ಕಳೆದುಕೊಂಡಿದ್ದು ಬರೋಬ್ಬರಿ 9 ಲಕ್ಷ...!

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮೃತ ಮಹಿಳೆ ಪತ್ತೆಗಾಗಿ ಸುತ್ತಮುತ್ತಲಿನ ಪೊಲೀಸ್ ಠಾಣೆಗಳಿಗೂ ಸಹ ಯಾವುದಾದರೂ ಮಹಿಳೆ ಕಾಣೆಯಾಗಿರುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ . ಸದ್ಯ ಎಲ್ಲಾ ಅಯಾಮಗಳಲ್ಲಿಯೂ ತನಿಖೆ ನಡೆಸುತ್ತಿರುವ ಪೊಲೀಸರು ಮೃತ ಮಹಿಳೆಯ ಗುರುತು ಪತ್ತೆಗಾಗಿ ಶೋಧ ನಡೆಸುತ್ತಿದ್ದು , ಮೃತ ಮಹಿಳೆ ಗುರುತು ಪತ್ತೆಯಾದ ಬಳಿಕ ಕೊಲೆ ಮಾಡಿದವರ ಸುಳಿವು ಲಭ್ಯವಾಗಲಿದೆ .
Youtube Video

ಸದ್ಯ ಅಪರಿಚಿತ ಮಹಿಳೆ ಪತ್ತೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಕೊಲೆ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ . ಜೊತೆಗೆ ಮೃತ ಮಹಿಳೆಯ ಬಗ್ಗೆ ಮಾಹಿತಿ ಇದ್ದರೆ ಜಿಗಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಸಹ ಮಾಡಿದ್ದಾರೆ .(ವರದಿ : ಆದೂರು ಚಂದ್ರು )
Published by: Sushma Chakre
First published: February 21, 2021, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories