ಗಂಡನನ್ನು ಕೊಂದು ಎಮ್ಮೆ ಸತ್ತಿದೆ ಎಂದೇಳಿ ಗುಂಡಿ ತೆಗೆಸಿ ಹೂತು ಹಾಕಿದ ಹೆಂಡತಿ

ಆದರೆ  ಚಾಲಕ ಮುಂಜಾನೆ ಬರುವುದಾಗಿ ತಿಳಿಸಿದ್ದಾಗ ನಾವು ಬೆಳಿಗ್ಗೆ ಬೇಗ ಬೇರೆಡೆಗೆ ಕೆಲಸದ ನಿಮಿತ್ತ ಹೋಗಲಿದ್ದೇವೆ ಎಂದು ಚಾಲಕನಿಗೆ ತಿಳಿಸಿದ್ದಾರೆ, ಆಗ ಜೆಸಿಬಿ ಚಾಲಕ ರಾತ್ರಿಯೇ ಬಂದು ಅವರ ಹೊಲದಲ್ಲಿ ದೊಡ್ಡ ತಗ್ಗು ತೆಗೆದು ಹೋಗಿದ್ದ. ನಂತರ ಅನಿತಾ ಮತ್ತು ಆಕೆಯ ಸಹೋದರ ಹಾಗೂ ಸಹೋದರಿ ಸಚಿನ್ ಶವವನ್ನು ಅಲ್ಲಿಯೇ ಹೂತು ಮಣ್ಣು ಮಾಡಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕೋಡಿ(ಸೆ.06): ಗಂಡ ಅನುಮಾನ ಪಡುತ್ತಾನೆ, ನಿತ್ಯ ರಾತ್ರಿ ಕುಡಿದು ಬಂದು ಹೊಡಿಬಡಿ ಮಾಡುತ್ತಾನೆ ಎಂಬ ಕಾರಣಕ್ಕೆ ಕೋಪಗೊಂಡ ಹೆಂಡತಿ  ತನ್ನ ಗಂಡನನ್ನೆ ಕೊಲೆ ಮಾಡಿ ಜಮೀನಿನಲ್ಲಿ ಹೂತು ಹಾಕಿದ್ದಾಳೆ. ಕ್ಷುಲ್ಲಕ ಕಾರಣಕ್ಕೆ ನಡೆದ ಗಂಡ ಹೆಂಡತಿ ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚಿನಾಳ ಕೆ.ಎಸ್. ಗ್ರಾಮದಲ್ಲಿ ನಡೆದಿದೆ.  ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಕಾಗಲ್ ತಾಲೂಕಿನ ನೇರ್ಲೆ ಗ್ರಾಮದ ಸಚಿನ ಸದಾಶಿವ ಭೋಪಳೆ(35) ಕೊಲೆಯಾದ ವ್ಯಕ್ತಿ. ಹೆಂಡತಿ ಅನಿತಾ ಸಚಿನ ಭೋಪಳೆ(35),  ಹಾಗೂ ಪತ್ನಿಯ ಸಹೋದರ ಹಂಚಿನಾಳ ಗ್ರಾಮದ ಕೃಷ್ಣಾ ಅಲಿಯಾಸ್ ಪಿಂಟು ರಾಜಾರಾಮ ಘಾಟಗೆ(26) ಹಾಗೂ ಪತ್ನಿಯ ಸಹೋದರಿ ಕಾಗಲ್ ತಾಲ್ಲೂಕಿನ ಸಿದ್ಧನೇರ್ಲಿ ಗ್ರಾಮದ ವನೀತಾ ಕೃಷ್ಣಾತ್ ಚವಾಣ(29) ಮತ್ತು ಹುನ್ನರಗಿ ಗ್ರಾಮದ ಗಣೇಶ ಅಣ್ಣಪ್ಪಾ ರೇಡೇಕರ(21) ನಾಲ್ಕು ಜನ ಆರೋಪಿಗಳು ಸೇರಿಕೊಂಡು ಕೊಲೆ ಮಾಡಿ ಶವವನ್ನ ಹೂತು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ:

ಕೊಲೆಯಾದ ವ್ಯಕ್ತಿ ತನ್ನ ಪತ್ನಿಯ ಶೀಲದ ಬಗ್ಗೆ ಆಗಾಗ ಸಂಶಯ ವ್ಯಕ್ತಪಡಿಸಿ ಮದ್ಯದ ಅಮಲಿನಲ್ಲಿ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಇಬ್ಬರೂ ಹಂಚಿನಾಳ ಗ್ರಾಮಕ್ಕೆ ಬಂದಿದ್ದರು. ಅಲ್ಲಿಯೂ ಸಹ ಸಚಿನ ಸ.3ರಂದು ಮದ್ಯದ ಅಮಲಿನಲ್ಲಿ ತನ್ನ ಪತ್ನಿ ಜೊತೆಗೆ ಜಗಳಕ್ಕೆ ಇಳಿದಿದ್ದ. ಈ ಜಗಳದಲ್ಲಿ ಪತ್ನಿ ಅನಿತಾ ಬಡಿಗೆಯಿಂದ ಆತನ ತಲೆಗೆ ಜೋರಾಗಿ ಹೂಡೆದು ಆತನನ್ನು ನೆಲದ ಮೇಲೆ ಕೆಡವಿ ಆತನ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೂಲೆ ಮಾಡಿದ್ದಾಳೆ ಎನ್ನಲಾಗಿದೆ. ಗಂಡ ಸಾವನ್ನಪ್ಪಿದರಿಂದ ಭಯಭೀತಳಾದ ಪತ್ನಿ ಅನಿತಾ ತನ್ನ ಸಹೋದರ ಹಾಗೂ ಸಹೋದರಿಯ ಸಹಾಯದಿಂದ ನಾಟಕವಾಡಿ ತಮ್ಮ ಮನೆಯಲ್ಲಿ ಎಮ್ಮೆ ಸತ್ತಿದ್ದು ಅದನ್ನು ಹೂಳಲು ಜೆಸಿಬಿ ಯಂತ್ರಬೇಕು ಎಂದು ಜೆಸಿಬಿ ಚಾಲಕನಿಗೆ ಕರೆ ಮಾಡಿ ಕರೆಸಿದ್ದಾರೆ.

ತಮಿಳುನಾಡು ಗಡಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಯತ್ನ; ಓರ್ವ ಅರೆಸ್ಟ್, ಒಂದೂವರೆ ಕೆಜಿ ಗಾಂಜಾ ವಶ

ಆದರೆ  ಚಾಲಕ ಮುಂಜಾನೆ ಬರುವುದಾಗಿ ತಿಳಿಸಿದ್ದಾಗ ನಾವು ಬೆಳಿಗ್ಗೆ ಬೇಗ ಬೇರೆಡೆಗೆ ಕೆಲಸದ ನಿಮಿತ್ತ ಹೋಗಲಿದ್ದೇವೆ ಎಂದು ಚಾಲಕನಿಗೆ ತಿಳಿಸಿದ್ದಾರೆ, ಆಗ ಜೆಸಿಬಿ ಚಾಲಕ ರಾತ್ರಿಯೇ ಬಂದು ಅವರ ಹೊಲದಲ್ಲಿ ದೊಡ್ಡ ತಗ್ಗು ತೆಗೆದು ಹೋಗಿದ್ದ. ನಂತರ ಅನಿತಾ ಮತ್ತು ಆಕೆಯ ಸಹೋದರ ಹಾಗೂ ಸಹೋದರಿ ಸಚಿನ್ ಶವವನ್ನು ಅಲ್ಲಿಯೇ ಹೂತು ಮಣ್ಣು ಮಾಡಿದ್ದರು.

ಶನಿವಾರ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ಗೊತ್ತಾಗಿ ಘಟನೆಯ ತನಿಖೆಯ ಪ್ರಾಥಮಿಕ ತನಿಖೆಯಲ್ಲಿ  ಪ್ರಕರಣ ಬಯಲಿಗೆ ಬಂದಿದೆ. ನಿಪ್ಪಾಣಿ  ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಬಿ.ಎಸ್.ತಳವಾರ ಘಟನೆಯ ತನಿಖೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಎಸಿ ಯುಕೇಶ ಕುಮಾರ, ಪ್ರೊಬೆಶನರಿ ಎಸ್‍ಪಿ ದೀಪಕ್ ಎಮ್.ಎನ್, ತಹಶೀಲ್ದಾರ ಪ್ರಕಾಶ ಗಾಯಕವಾಡ, ಡಿವಾಯ್ ಎಸ್‍ಪಿ ಮನೋಜ ಕುಮಾರ ನಾಯಿಕ, ಸಿಪಿಐ ಸಂತೋಷ ಸತ್ಯನಾಯಿಕ ಭೇಟಿ ನೀಡಿ ಜೆಸಿಬಿ ಚಾಲಕನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಹೂತ ಮೃತದೇಹವನ್ನು ಹೊರತಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸದ್ಯ ಪ್ರಕರಣ ನಿಪ್ಪಾಣಿ ಗ್ರಾಮೀಣ ಪೋಲಿಸ್  ಠಾಣೆಯಲ್ಲಿ ದಾಖಲಾಗಿದೆ.

ಇನ್ನು, ಕೊಲೆ ಮಾಡಿದ ಪ್ರಮುಖ ಆರೋಪಿ ಪತ್ನಿ ಅನಿತಾ ಭೋಪಳೆ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳು ಪರಾರಿಯಾಗಿದ್ದಾರೆ. ಪಿ.ಎಸ್.ಐ ಬಿ.ಎಸ್.ತಳವಾರ ನೇತೃತ್ವದ ತಂಡ ಆರೋಪಿಗಳಿಗಾಗಿ ಬಲೆ ಬಿಸಿದ್ದು ಆರೋಪಿಗಳ ಶೋದಕಾರ್ಯ ನಡೆಯುತ್ತಿದೆ. ಆರೋಪಿಗಳು ಸಿಕ್ಕ ಬಳಿಕವೆ ಪ್ರಕರಣದ ಕುರಿತು ಇನ್ನು ಹೆಚ್ಚಿನ ಮಾಹಿತಿ ಬಯಲಿಗೆ ಬರಲಿದೆ.
Published by:Latha CG
First published: