ಸ್ನೇಹಿತರ ಎಣ್ಣೆ ಪಾರ್ಟಿಗೆ ಹೋದವನು ನಡು ರಾತ್ರಿಯಲ್ಲಿ ಹೆಣವಾದ

ರಾತ್ರಿಯಾಗಿದ್ದರಿಂದ ಜನರು ಸಹ ಓಡಾಡ ಇರಲಿಲ್ಲ. ಸ್ಥಳೀಯರೊಬ್ಬರು ಗಲಾಟೆ ಚಿರಾಟ ಕೂಗಾಟ ನಡೆಸುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

news18-kannada
Updated:October 19, 2020, 10:59 PM IST
ಸ್ನೇಹಿತರ ಎಣ್ಣೆ ಪಾರ್ಟಿಗೆ ಹೋದವನು ನಡು ರಾತ್ರಿಯಲ್ಲಿ ಹೆಣವಾದ
ಸಾಂದರ್ಭಿಕ ಚಿತ್ರ
  • Share this:
ಆನೇಕಲ್(ಅಕ್ಟೋಬರ್​. 19): ಸ್ನೇಹಿತನ ಹುಟ್ಟು ಹಬ್ಬದ ಪಾರ್ಟಿ ಮುಗಿಸಿಕೊಂಡು ಆಗ ತಾನೇ ಆತ ಮನೆಗೆ ಬಂದಿದ್ದ. ಸ್ನೇಹಿತರು ಎಣ್ಣೆ ಪಾರ್ಟಿಗೆ ಕರೆದರು ಅಂತಾ ತಡ ರಾತ್ರಿ ಮನೆಯಿಂದ ಹೊರಬಂದಿದ್ದ. ಆತ ಮತ್ತೆ ಮನೆಗೆ ಬರಲೇ ಇಲ್ಲ. ಸ್ನೇಹಿತರ ಜೊತೆ ಎಣ್ಣೆ ಪಾರ್ಟಿಗೆ ಹೋದವನು ಅತ್ಯಂತ ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ. ಸ್ನೇಹಿತರಿಂದಲೇ ಕೊಲೆಯಾಗಿ ಹೋಗಿರುವ ವ್ಯಕ್ತಿಯನ್ನು ಮಾದೇಶ್ ಎಂದು ಗುರುತಿಸಲಾಗಿದೆ. ಮೂಲತಃ ಈತ ತಮಿಳುನಾಡಿನ ಡೆಂಕಣಿಕೋಟೆ ನಿವಾಸಿ. ಕೆಲ‌ ವರ್ಷಗಳ ಹಿಂದೆ ಆನೇಕಲ್ ತಾಲೂಕಿನ ಜಿಗಣಿಯ ಹಾರಗದ್ದೆ ಬಳಿಯಲ್ಲಿ ಟೈಲರಿಂಗ್ ಅಂಗಡಿಯನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಜೊತೆಗೆ ಹಾರಗದ್ದೆ ಗ್ರಾಮದ ಮನೆಯೊಂದರಲ್ಲಿ ಹೆಂಡತಿ ಹಾಗೂ ಮಗುವಿನೊಂದಿಗೆ ವಾಸವಿದ್ದ. ಆದರೆ, ನಿನ್ನೆ ಈತನ ನಸೀಬು ಸರಿ ಇರಲಿಲ್ಲ ಅನ್ನಿಸುತ್ತೆ. ತನ್ನ ಜೀವದ ಗೆಳೆಯರು ಅಂತ ನಂಬಿದ್ದ ಈತನ ಸ್ನೇಹಿತರಿಂದಲೇ ಈತ ಹತ್ಯೆಯಾಗಿದ್ದಾನೆ.

ಪಾಪಿಗಳು ಈತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ವಾಸಿ ಮುನಿರಾಜು ತಿಳಿಸಿದ್ದಾರೆ.

ನಿನ್ನೆ ಈ ಮಾದೇಶ್ ತನ್ನ ಸಂಬಂಧಿಕರ ಮನೆಯಲ್ಲಿ ಹುಟ್ಟು ಹಬ್ಬ‌ ಇದೆ ಎಂದು ಹೋಗಿದ್ದಾನೆ. ನಂತರ ಮನೆಗೆ ಬಂದು ಮನೆಯಲ್ಲಿಯೇ ಮಲಗಿದ್ರೆ ಈ ರೀತಿಯಾಗಿ ಆಗುತ್ತಿರಲಿಲ್ಲ. ತನ್ನ ಸ್ನೇಹಿತರು ಕರೆದರು ಅಂತ ನಿನ್ನೆ ತಡ‌ ರಾತ್ರಿ  ಮನೆಯಿಂದ ಹೊರ ಹೇಗಿದ್ದಾನೆ. ಎಣ್ಣೆ ಪಾರ್ಟಿ ಮಾಡಲಿಕ್ಕೆ ಅಂತ ಈತನ ಕೆಲ ಸ್ನೇಹಿತರು ಕರೆದುಕೊಂಡು ಹೋಗಿದ್ದಾರೆ.

ನಂತರ ಎಣ್ಣೆ ಪಾರ್ಟಿ ಮಾಡಿದ್ದಾರೆ. ಆದರೆ. ಅಲ್ಲಿ ಕೆಲ ಹೊತ್ತಿನ ನಂತರ ಗಲಾಟೆಯಾಗಿದ್ದು, ಜೊತೆಯಲ್ಲಿಯೇ ಇದ್ದ ಆತನ ಸ್ನೇಹಿತರು ಮಾದೇಶ್ ನನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ.ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ವಾಸಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ : ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ: ಸಿಎಂ ಯಡಿಯೂರಪ್ಪ

ರಾತ್ರಿಯಾಗಿದ್ದರಿಂದ ಜನರು ಸಹ ಓಡಾಡ ಇರಲಿಲ್ಲ. ಸ್ಥಳೀಯರೊಬ್ಬರು ಗಲಾಟೆ ಚಿರಾಟ ಕೂಗಾಟ ನಡೆಸುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಜಿಗಣಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಜೊತೆಗೆ ಮೃತ ದೇಹವನ್ನು ಮರಣೋತ್ತರ ಪರಿಕ್ಷೇಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಅದೇನೆ ಇದ್ದರೂ ಸಹ ಇನ್ನು ಬದುಕಿ ಬಾಳಬೇಕಾಗಿದ್ದ ಮಾದೇಶ್ ಇದೀಗ ತನ್ನ ಕುಟುಂಬದವರನ್ನು ತಬ್ಬಲಿಯನ್ನಾಗಿಸಿ ಹೋಗಿದ್ದಾನೆ.
Published by: G Hareeshkumar
First published: October 19, 2020, 10:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading