• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಹೆತ್ತ ಅಮ್ಮನನ್ನೇ ಕೊಚ್ಚಿ ಕೊಂದ ಪಾಪಿ ಮಗ; ಹೆಣದ ಪಕ್ಕ ಮೂರು ಗಂಟೆ ಸುಮ್ಮನೇ ಕೂತಿದ್ದ ಭೂಪ

Crime News: ಹೆತ್ತ ಅಮ್ಮನನ್ನೇ ಕೊಚ್ಚಿ ಕೊಂದ ಪಾಪಿ ಮಗ; ಹೆಣದ ಪಕ್ಕ ಮೂರು ಗಂಟೆ ಸುಮ್ಮನೇ ಕೂತಿದ್ದ ಭೂಪ

ನಮ್ಮ ಮಗಳನ್ನು ಅಳಿಯನೇ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಮ್ಮ ಮಗಳನ್ನು ಅಳಿಯನೇ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೆತ್ತ ತಾಯಿಯನ್ನೇ ಕೊಂದ ದುಶ್ಯಂತ ಮನೆಯವರನ್ನ ಕಂಡರೆ ತುಂಬಾ ಸಿಟ್ಟು ಮಾಡಿಕೊಳ್ಳುತ್ತಿದ್ದ, ರೇಗಾಡುತ್ತಿದ್ದ. ಅಕ್ಕ-ಪಕ್ಕದವರು, ಬೇರೆಯವರು ಮಾತನಾಡಿಸಿದರೆ ತುಂಬಾ ಚೆನ್ನಾಗಿ ಬಿಹೇವ್ ಮಾಡುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

  • Share this:

ಚಿಕ್ಕಮಗಳೂರು(ಸೆ.24): ಹೆತ್ತ ತಾಯಿಯನ್ನ ಪಾಪಿ ಮಗನೇ ಕೊಚ್ಚಿ ಕೊಂದಿರುವಂತಹ(Murder) ಘಟನೆ ಚಿಕ್ಕಮಗಳೂರು(Chikmagaluru) ನಗರದ ಗೌರಿ ಕಾಲುವೆ ಬಡಾವಣೆಯಲ್ಲಿ ನಡೆದಿದೆ. ಮೃತರನ್ನ 48 ವರ್ಷದ ಸುಧಾ ಎಂದು ಗುರುತಿಸಲಾಗಿದೆ. ಹೆತ್ತವಳನ್ನೆ ಕೊಂದ ಪಾಪಿ ಪತ್ರ 28 ವರ್ಷದ ದುಶ್ಯಂತನನ್ನ ಪೊಲೀಸರು ಬಂಧಿಸಿದ್ದಾರೆ. ಮೃತ ಸುಧಾ ಪತಿ ಕೂಡ ಕೆಲ ವರ್ಷಗಳ ಹಿಂದೆ ಅಪಘಾತದಿಂದ ಸಾವನ್ನಪ್ಪಿದ್ದರು. ಅಂದಿನಿಂದ ಇಬ್ಬರು ಮಕ್ಕಳನ್ನು ತಾಯಿಯೇ ನೋಡಿಕೊಳ್ಳುತ್ತಿದ್ದರು. ನಗರದ ದಿನಸಿ ಅಂಗಡಿಯೊಂದಕ್ಕೆ ರೇಷನ್ ಸಾಮಾಗ್ರಿಗಳನ್ನ ಪ್ಯಾಕ್ ಮಾಡುವ ಕೆಲಕ್ಕೆ ಹೋಗುತ್ತಲೇ ಮಕ್ಕಳನ್ನ ಸಾಕಿ, ಬೆಳೆಸಿದ್ದರು.


ಆದರೆ, ಇಂದು ಮಧ್ಯಾಹ್ನ ದುಷ್ಯಂತ ತನ್ನ ತಾಯಿಯನ್ನೇ ಕೊಂದು ಸುಮಾರು 3 ಗಂಟೆಗಳ ಕಾಲ ಮೃತದೇಹದ ಪಕ್ಕ ಒಬ್ಬನೇ ಕೂತಿದ್ದಾನೆ. ಸಂಜೆ 5.45ರ ಸುಮಾರಿಗೆ ಮೃತ ಸುಧಾರವರ ಕಿರಿಯ ಪುತ್ರ ಸಂತೋಷ್ ಮನೆಗೆ ಬಂದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ಸಂಜೆ ಮನೆಯಲ್ಲಿ ಚೀರಾಟದ ಶಬ್ಧ ಕೇಳಿ ಬಂದಿದೆ. ಸ್ಥಳೀಯರು ಹೋಗಿ ನೋಡಿದಾಗ ಸುಧಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಹೆತ್ತ ತಾಯಿ ಮೇಲೆ ಮಗನೇ ಹಲ್ಲೆ ಮಾಡುವಾಗ ಸುಧಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಮನೆಯ ಕರ್ಟನ್‍ಗಳನ್ನ ಎಳೆದು ಹಾಕಿದ್ದಾರೆ. ಬಾಗಿಲ ಮೇಲೆ ರಕ್ತದ ಕಲೆ ಇದೆ. ತಲೆ, ಕಿವಿ, ಕಣ್ಣು, ಬಾಯಿಗೆ ಬಲವಾದ ಏಟು ಬಿದ್ದಿದೆ. ಯಾವ ಆಯುಧದಿಂದ ಹಲ್ಲೆ ಮಾಡಿದ್ದಾನೆಂದು ಸ್ಥಳೀಯರು, ಪೊಲೀಸರು ಹುಡುಕಾಟ ನಡೆಸಿದರೂ ಸಿಕ್ಕಿಲ್ಲ.


ಇದನ್ನೂ ಓದಿ:Kalburgi Crime News: ಅನುಮಾನಕ್ಕೆ ಕುಟುಂಬವೇ ಸರ್ವನಾಶ.. ಪತ್ನಿ-ಮಗಳನ್ನು ಕೊಚ್ಚಿ ಕೊಲೆಗೈದ ಪಾಪಿ!


ಹೆತ್ತ ತಾಯಿಯನ್ನೇ ಕೊಂದ ದುಶ್ಯಂತ ಮನೆಯವರನ್ನ ಕಂಡರೆ ತುಂಬಾ ಸಿಟ್ಟು ಮಾಡಿಕೊಳ್ಳುತ್ತಿದ್ದ, ರೇಗಾಡುತ್ತಿದ್ದ. ಅಕ್ಕ-ಪಕ್ಕದವರು, ಬೇರೆಯವರು ಮಾತನಾಡಿಸಿದರೆ ತುಂಬಾ ಚೆನ್ನಾಗಿ ಬಿಹೇವ್ ಮಾಡುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಳೆದೊಂದು ವಾರದ ಹಿಂದಷ್ಟೆ ಮನೆಯಲ್ಲಿ ಸ್ವಲ್ಪ ಕೂಗಾಡುತ್ತಿದ್ದ. ಸ್ಥಳೀಯರು ಹೋಗಿ ಅವನನ್ನ ಎಲ್ಲಿಗಾದ್ರು ಸೇರಿಸಿ ಎಂದು ಸಲಹೆ ನೀಡಿದ್ದರು. ಅದಕ್ಕೆ ಮೃತ ಸುಧಾ ಅವನನ್ನ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತೇನೆ. ಸರಿಯಾಗುತ್ತೇನೆ ಎಂದು ಹೇಳಿದ್ದರಂತೆ.


ನಿನ್ನೆ ಕೂಡ ದೇವಸ್ಥಾನಕ್ಕೆ ಹೋಗಿ, ಇಂದು ಮತ್ತೆಲ್ಲಿಗೋ ಹೋಗಿ ಬಂದಿದ್ದಾರೆ. ಕೊಲೆ ಮಾಡಿ ಹೆಣದ ಜೊತೆಯೇ ಇದ್ದ ದುಶ್ಯಂತ ಮನೆಯಲ್ಲೇ ಇದ್ದ. ಸ್ಥಳಿಯರು ಹೋದ ಕೂಡಲೇ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನ ನೋಡಿದ ಕೂಡಲೇ ಮೃತ ಸುಧಾ ಕಿರಿಯ ಮಗ ಸಂತೋಷ್ ಕೂಗಿಕೊಂಡು ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಹೋಗಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಬಸವನಹಳ್ಳಿ ಪೊಲೀಸರು ಆರೋಪಿ ದುಶ್ಯಂತನನ್ನ ವಶಕ್ಕೆ ಪಡೆದಿದ್ದಾರೆ. ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ:ಮಹಾರಾಷ್ಟ್ರ; ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ಇಬ್ಬರು ಬಾಲಕರೂ ಸೇರಿ 33 ಜನರ ಬಂಧನ!

First published: