ಮೈಸೂರಿನ ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ; ಖ್ಯಾತ ಗಾಯಕಿಯ ತಂದೆ ವಿಶ್ವನಾಥ್ ಭಟ್ ಬಂಧನ

Crime News: ಖ್ಯಾತ ಗಾಯಕಿ ಅನನ್ಯಾ ಭಟ್​ ಅವರ ತಂದೆ ವಿಶ್ವನಾಥ್ ಭಟ್​ ಕಳೆದ ತಿಂಗಳು 7 ಲಕ್ಷ ರೂ.ಗೆ ಸುಪಾರಿ ನೀಡಿ ಮೈಸೂರಿನ ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಅವರನ್ನು ಕೊಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವಿಶ್ವನಾಥ್ ಭಟ್ ಅವರನ್ನು ಬಂಧಿಸಲಾಗಿದೆ.

news18-kannada
Updated:October 28, 2020, 1:40 PM IST
ಮೈಸೂರಿನ ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ; ಖ್ಯಾತ ಗಾಯಕಿಯ ತಂದೆ ವಿಶ್ವನಾಥ್ ಭಟ್ ಬಂಧನ
ಕೊಲೆ ಆರೋಪಿ ವಿಶ್ವನಾಥ್ ಭಟ್
  • Share this:
ಮೈಸೂರು (ಅ. 28): ಕೊಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯಾ ಭಟ್ ಅವರ ತಂದೆ ವಿಶ್ವನಾಥ್ ಭಟ್ ಅವರನ್ನು ಬಂಧಿಸಲಾಗಿದೆ. ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಅವರನ್ನು ಕೊಲೆ ಮಾಡಿಸಿದ್ದ ಆರೋಪದಲ್ಲಿ ವಿಶ್ವನಾಥ್ ಭಟ್ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಪರಶಿವಮೂರ್ತಿ ಅವರ ಕೊಲೆಗೆ ವಿಶ್ವನಾಥ್ ಭಟ್ 7 ಲಕ್ಷ ರೂ.ಗೆ ಸುಪಾರಿ ನೀಡಿದ್ದರು ಎಂಬುದು ವಿಚಾರಣೆ ವೇಲೆ ಬಯಲಾಗಿತ್ತು. ಹೀಗಾಗಿ, ಮೈಸೂರು ಪೊಲೀಸರು ವಿಶ್ವನಾಥ್ ಭಟ್ ಅವರನ್ನು ಬಂಧಿಸಿದ್ದಾರೆ.

ನಿವೃತ್ತ ಪ್ರೊಫೆಸರ್ ಪರಿಶಿವ ಮೂರ್ತಿ ಅವರ ಕೊಲೆಗಾಗಿ ಇಬ್ಬರನ್ನು ಬಳಸಿಕೊಂಡಿದ್ದ ವಿಶ್ವನಾಥ್ ಭಟ್ ಇದೀಗ ಕಂಬಿ ಎಣಿಸುತ್ತಿದ್ದಾರೆ. ವಿಶ್ವನಾಥ್ ಭಟ್‌ಗೆ ಸಹಶಿಕ್ಷಕ ಪರಶಿವ ಹಾಗೂ ಸ್ನೇಹಿತ ಸಿದ್ದರಾಜು ಸಹಾಯ ಮಾಡಿದ್ದರು. ನಿರಂಜನ್, ನಾಗೇಶ್ ಅವರಿಗೆ ಸುಪಾರಿ ನೀಡಿ ಪರಶಿವಮೂರ್ತಿ ಅವರನ್ನು ಕೊಲೆ ಮಾಡಿಸಲಾಗಿತ್ತು. ಸೆಪ್ಟೆಂಬರ್​ 20ರಂದು ಮೈಸೂರಿನ ನಿವೇದಿತಾ ನಗರದಲ್ಲಿ ಪರಶಿವಮೂರ್ತಿ ಅವರನ್ನು ಕೊಲೆ ಮಾಡಲಾಗಿತ್ತು. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Rajyotsava award 2020: ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಕೆ.ಎನ್. ಭಟ್ ಸೇರಿದಂತೆ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈ ಕೊಲೆಗೆ ಪರಶಿವಮೂರ್ತಿಯ ಟಾರ್ಚರ್ ಕಾರಣ ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ಪರಶಿವಮೂರ್ತಿ ಪ್ರತಿ ತಿಂಗಳು ಕಮಿಷನ್‌ಗಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದರು ಎಂದು ಕೂಡ ಹೇಳಲಾಗಿದೆ.

ಇದರಿಂದ ಮನ ನೊಂದು ಅನನ್ಯಾ ಭಟ್ ಅವರ ತಂದೆ ವಿಶ್ವನಾಥ್ ಭಟ್‌ ಈ ಕೊಲೆಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ. ಎರಡು ವರ್ಷಗಳಿಂದ ಮಗಳು ಅನನ್ಯಾ ಭಟ್‌ ಹಾಗೂ ಹೆಂಡತಿಯನ್ನು ಬಿಟ್ಟು ವಿಶ್ವನಾಥ್ ಭಟ್ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಸೋಜುಗದ ಸೂಜಿಮಲ್ಲಿಗೆ ಹಾಡಿನಿಂದ ಪ್ರಸಿದ್ಧಿ ಪಡೆದಿದ್ದ ಅನನ್ಯಾ ಭಟ್​ ಅನೇಕ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿದ್ದಾರೆ. ರಾಮ ರಾಮ ರೇ ಸಿನಿಮಾದ ನಮ್ಮ ಕಾಯೋ ದ್ಯಾವನೇ, ಕೆಜಿಎಫ್​ ಸಿನಿಮಾದ ಧೀರ ಧೀರ, ಟಗರು ಸಿನಿಮಾದ ಹೋಲ್ಡ್​ ಆನ್ ಮತ್ತು ಮೆಂಟಲ್ ಹೋ ಜಾವಾ ಮುಂತಾದ ಸೂಪರ್ ಹಿಟ್ ಹಾಡುಗಳನ್ನು ಅನನ್ಯಾ ಭಟ್ ಹಾಡಿದ್ದಾರೆ.
Published by: Sushma Chakre
First published: October 28, 2020, 1:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading