HOME » NEWS » State » CRIME NEWS ROBBER GANG ARRESTED IN BANGLORE ANLM MAK

Crime News: ಪೂಜೆ ಮಾಡೋ ನೆಪದಲ್ಲಿ ಚಿನ್ನಾಭರಣ ದೋಚುತ್ತಿದ್ದ ಗ್ಯಾಂಗ್ ಅಂದರ್

ಅಕ್ಕಿಯಲ್ಲಿ ಪುಡಿ ಬೆರೆಸಿದ ನಂತರ ನಿಮ್ಮ ಮನೆಯ ಚಿನ್ನಾಭರಣ ಎಲ್ಲಾ ತಂದು ಈ ಡಬ್ಬಿಯಲ್ಲಿ ಹಾಕಿ ಪೂಜೆ ಮಾಡ್ತೀವಿ ಎಂದಿದ್ದಾರೆ. ಓಂ ಶಕ್ತಿ ಮಾಲಾದಾರಿಯಾಗಿದ್ದರಿಂದ ನಂಬಿಕೆ ಬಂದು ತನ್ನ ಮೈಮೇಲಿದ್ದ ಮನೆಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲ ಈ ಮಹಿಳೆ ಬಿಚ್ಚಿಕೊಟ್ಟಿದ್ದಾರೆ.

news18-kannada
Updated:February 28, 2021, 8:09 PM IST
Crime News: ಪೂಜೆ ಮಾಡೋ ನೆಪದಲ್ಲಿ ಚಿನ್ನಾಭರಣ ದೋಚುತ್ತಿದ್ದ ಗ್ಯಾಂಗ್ ಅಂದರ್
ಬಂಧಿತ ಆರೋಪಿಗಳು.
  • Share this:
ಬೆಂಗಳೂರು (ಫೆಬ್ರವರಿ 28): ಒನ್ ಗ್ರಾಂ ಗೋಲ್ಡ್ ವಡವೆಗಳನ್ನ ಮಾರಾಟ ಮಾಡ್ತಾ ಊರು ಊರು ಅಲೆಯುತ್ತಾ, ಮಾರಾಟ ಮಾಡೋ ನೆಪದಲ್ಲಿ ಒಂಟಿ ಮಹಿಳೆಯರು ಇರುವ ಮನೆಗಳನ್ನ ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತ್ತಿದ ಕುಖ್ಯಾತ ಕಳ್ಳರನ್ನ ಮಾದನಾಯಕನಹಳ್ಳಿ ಪೊಲೀಸರು ಬಂದಿಸಿದ್ದಾರೆ. ಆಂದ್ರ ಪ್ರದೇಶ ಅನಂತಪುರ ಮೂಲದ ಗುಜ್ಜಲ ಭಾರತಿ (45), ರಾಗೆ ಲಕ್ಷ್ಮೀದೇವಿ (39), ನಾಗರಾಜ (45), ರಂಜಿತ್ (26) ಬಂದಿತ ಆರೋಪಿಗಳು. ಬೆಂಗಳೂರು ಉತ್ತರ ತಾಲೂಕಿಮ ಹುಸ್ಕೂರು ನಿವಾಸಿ ಭೂಪತ್ತಮರಿಗೆ ಇದೇ ಗ್ಯಾಂಗ್ ವಂಚನೆ ಮಾಡಿ ಎಸ್ಕೇಪ್ ಆಗಿದ್ದರು. ಭೂಪತ್ತಮ್ಮ ಜೀವನ ನಡೆಸಲು ಮನೆಯ ಸಮೀಪವೆ ಸಣ್ಣ ಹೋಟೆಲ್ ನಡೆಸುತ್ತಿದ್ದರು. ಹೋಟೆಲ್ ಬಳಿ ಬಂದಿದ್ದ ಈ ಗ್ಯಾಂಗ್ ದೋಸೆ ತಿಂದು ಭೂಪತ್ತಮ್ಮರ ಬಳಿ ನಯವಾಗಿ ಮಾತನಾಡಿ ನಿಮಗೆ ಏನೋ ಸಮಸ್ಯೆ ಇದೆ, ನಿಮ್ಮ ಯಜಮಾನರಿಗೆ ಅಸ್ತಮ ಇದೆ, ಪೂಜೆ ಮಾಡಿಕೊಡ್ತಿವಿ ಮಾಡ್ಸಿ ಒಳ್ಳೆದಾಗುತ್ತೆ ಎಂದು ಪುಸಲಾಯಿಸಿದ್ದಾರೆ.

ಭೂಪತ್ತಮರಿಗೆ ನಾಜೂಕಾಗಿ ತಮ್ಮತ್ತ ಸೆಳೆದುಕೊಂಡು ಮನೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಮನೆಗೆ ಹೋಗುತ್ತಿದ್ದಂತೆ ಪೂಜೆಗೆ 25ಸಾವಿರ ಹಣ ಬೇಕೆಂದು ಹೇಳಿದ್ರು ಅಲ್ಲಿ ಇಲ್ಲಿ ಹುಡುಕಿ ಮಹಿಳೆ ಹಣ ತಂದು ಕೊಟ್ರು ಪೂಜೆ ಮಾಡುತ್ತಲೆ ತಮ್ಮ ಕೈಚಳ ತೋರಲು ಮುಂದಾಗಿದ್ರು.

ಪುಡಿ ನೀಡಿ ಪಂಗನಾಮ: ಕೆಲ ಕಾಲ ಪೂಜೆ ಹವನ ನಡೆಸಿದ ಗ್ಯಾಂಗ್ ಒಂದು ಪುಡಿಯನ್ನ ಮಹಿಳೆ ಕೈಗೆ ಕೊಟ್ಟು ಅಕ್ಕಿಯಲ್ಲಿ ಬೆರೆಸುವಂತೆ ಹೇಳುತ್ತಾರೆ. ಗ್ಯಾಂಗ್‌ನ ಅಣತಿಯಂತೆ ಅಕ್ಕಿಯಲ್ಲಿ ಮಹಿಳೆ ಪುಡಿ ಬೆರೆಸುತ್ತಿದ್ದ ಆಗೆ ಗ್ಯಾಂಗ್‌ನ ವಶವಾಗುತ್ತಾರೆ, ಅವರು ಹೇಳಿದ ಆಗೆ ಕೇಳೋಕೆ ಶುರು ಮಾಡಿದ್ದಾರೆ.

ಓಂ ಶಕ್ತಿ ವೇಷದಾರಿಗಳಿಂದ ವಂಚನೆ: 

ಅಕ್ಕಿಯಲ್ಲಿ ಪುಡಿ ಬೆರೆಸಿದ ನಂತರ ನಿಮ್ಮ ಮನೆಯ ಚಿನ್ನಾಭರಣ ಎಲ್ಲಾ ತಂದು ಈ ಡಬ್ಬಿಯಲ್ಲಿ ಹಾಕಿ ಪೂಜೆ ಮಾಡ್ತೀವಿ ಎಂದಿದ್ದಾರೆ. ಓಂ ಶಕ್ತಿ ಮಾಲಾದಾರಿಯಾಗಿದ್ದರಿಂದ ನಂಬಿಕೆ ಬಂದು ತನ್ನ ಮೈಮೇಲಿದ್ದ ಮನೆಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲ ಈ ಮಹಿಳೆ ಬಿಚ್ಚಿಕೊಟ್ಟಿದ್ದಾರೆ. ಆಕೆ ಕೊಟ್ಟ ಚಿನ್ನವನ್ನೆಲ್ಲಾ ಡಬ್ಬಿಯೊಳಗೆ ಹಾಕಿ ನೀವು ಸಂಜೆ 7 ಗಂಟೆ ನಂತರ ಈ ಡಬ್ಬಿ ಒಪನ್ ಮಾಡಿ ಎಂದಿದ್ದು ಸಂಜೆ ಭೂಪತಮ್ಮ ಡಬ್ಬಿ ತೆಗೆದಾಗ ಹೃದಯ ಒಡೆದಂತಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ನಾವು ಪ್ರೀತಿ ಮತ್ತು ಅಹಿಂಸೆಯಿಂದ ಸೋಲಿಸುತ್ತೇವೆ; ರಾಹುಲ್ ಗಾಂಧಿ

ಘಟನೆಯ ಬಳಿಕ ನೊಂದ ಭೂಪತಮ್ಮ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮೊಬೈಲ್ ಟವರ್ ಲೊಕೇಷನ್ ಆದರಿಸಿ ಬೆಂಗಳೂರಿನ ನಾಗರಭಾವಿಯಲ್ಲಿದ್ದ ಆರೋಪಿಗಳನ್ನ ಮಾದನಾಯಕನಹಳ್ಳಿ ಪೊಲೀಸರು ಬಂದಿಸಿದ್ದಾರೆ.
Youtube Video

30ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ:

ಬಂಧಿತರಿಂದ ಚಿನ್ನಾಭರಣ 30 ಸಾವಿರ ನಗದು ವಶ ಪಡಿಸಿಕೊಂಡಿದ್ದು, ತನಿಖೆ ವೇಳೆ ನೆಲಮಂಗಲ, ಮಾದನಾಯಕನಹಳ್ಳಿ, ಬಾಗಲಗುಂಟೆ, ಸೋಲದೇವನಹಳ್ಳಿ ಸೇರಿದಂತೆ ವಿವಿದ ಠಾಣೆಗಳಲ್ಲಿ 30 ಕ್ಕೂ ಹೆಚ್ವು ಪ್ರಕರಣಗಳಲ್ಲಿ ಬಾಗಿಯಾಗಿರುವುದು ಬೆಳಕಿಗೆ ಬಂದಿದೆ. ಮೋಸ ಹೋಗುವವರು ಇರೋವರೆಗೂ ಈ ರೀತಿ ಮೋಸ ಮಾಡೋರು ಇದ್ದೇ ಇರ್ತಾರೆ, ಇನ್ನಾದರು ಜನರು ಎಚ್ಚೆತ್ತುಕೊಂಡು ಇಂತಹ ಮಾಯಜಾಲದಿಂದ ದೂರ ಇರಬೇಕಿದೆ.
Published by: MAshok Kumar
First published: February 28, 2021, 8:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories