HOME » NEWS » State » CRIME NEWS RAMANAGARA WOMAN DIES BY SUICIDE AFTER FOLLOWING MYSTERIOUS VOICE IN HOME SCT ANLM

Ramanagara: ಅಶರೀರವಾಣಿಯನ್ನು ಹಿಂಬಾಲಿಸಿದ ಮಹಿಳೆ ಆತ್ಮಹತ್ಯೆಗೆ ಶರಣು!; ರಾಮನಗರದಲ್ಲೊಂದು ವಿಚಿತ್ರ ಘಟನೆ

ಅಶರೀರವಾಣಿಯನ್ನು ಹಿಂಬಾಲಿಸಿದ ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಮೂಗನಹಳ್ಳಿ ನಿವಾಸಿ ಅಶೋಕ್‌ನ ಪತ್ನಿ ಮಾಲಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

news18-kannada
Updated:March 18, 2021, 3:47 PM IST
Ramanagara: ಅಶರೀರವಾಣಿಯನ್ನು ಹಿಂಬಾಲಿಸಿದ ಮಹಿಳೆ ಆತ್ಮಹತ್ಯೆಗೆ ಶರಣು!; ರಾಮನಗರದಲ್ಲೊಂದು ವಿಚಿತ್ರ ಘಟನೆ
ರಾಮನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
  • Share this:
ರಾಮನಗರ: ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ಮಹಿಳೆ ಆರ್ಥಿಕವಾಗಿ ಅನುಕೂಲವಾಗಿಯೇ ಇದ್ದ ಗಂಡ ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಂಡಿದ್ದ. ಆದರೆ, ಇದ್ದಕ್ಕಿದ್ದಂತೆ ಅದೇನಾಯಿತೋ ಏನೋ ಮನೆಯಲ್ಲಿ ಮಗುವಿನೊಂದಿಗೆ ಆಡಿಕೊಳ್ಳುತ್ತಿದ್ದ ಮಹಿಳೆ ಕೃಷಿಗೆ ಉಪಯೋಗಿಸುವ ಔಷಧಿ ಕುಡಿದು ಇಹಲೋಕ ತ್ಯಜಿಸಿದ್ದಾರೆ.

ಊರ ಹೊರಗಿನ ತೋಟದ ಮನೆಯಲ್ಲಿ ಅಪ್ಪ -ಅಮ್ಮ-ಮಗು ಮೂರೇ ಜನ ಇರುವ ಚಿಕ್ಕ ಚೊಕ್ಕ ಸುಂದರ ಕುಟುಂಬ. ತಾವಾಯ್ತು, ತಮ್ಮ‌ ಕೆಲಸವಾಯ್ತು ಎಂದು ಯಾರ ಸಹವಾಸಕ್ಕೂ ಹೋಗುತ್ತಿರಲಿಲ್ಲ. ಗಂಡ ಬೆಳಗ್ಗೆಯಿಂದ ಸಂಜೆವರೆಗೂ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಿದರೆ ಹೆಂಡತಿ ಮನೆ ಕೆಲಸ ಮಾಡುತ್ತಾ ಮುದ್ದಾದ ಮಗುವಿನೊಂದಿಗೆ ಆಡುತ್ತಾ ಕಾಲ ಕಾಲೆಳೆಯುತ್ತಿದ್ದಳು. ಹೀಗೆ ಅನ್ಯೋನ್ಯವಾಗಿದ್ದ ಕುಟುಂಬಕ್ಕೆ ಎದುರಾಯಿತು ಒಂದು ಅಶರೀರ ವಾಣಿ.

ಮನೆಯಿಂದ ಹೊರಹೋಗಿರುವ ಮಹಿಳೆ:

ಅಶರೀರವಾಣಿಯನ್ನು ಹಿಂಬಾಲಿಸಿದ ಈ ಕುಟುಂಬದ ಮನೆಯೊಡತಿ 26 ವರ್ಷದ ಮಾಲಾ ಇಂದು ಸಾವಿನ ಮನೆಯ ಕದ ತಟ್ಟಿದ್ದಾಳೆ. ಹೌದು, ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಮೂಗನಹಳ್ಳಿ ನಿವಾಸಿ ಅಶೋಕ್‌ನ ಪತ್ನಿ ಮಾಲಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೇ ತಿಂಗಳ 12ರಂದು ಮನೆಯಲ್ಲಿ ಮಗುವಿನೊಂದಿಗೆ ಆಡುತ್ತಿದ್ದ ಮಾಲಾ ಇದ್ದಕ್ಕಿದ್ದ ಹಾಗೆ ಮೊದಲ ಮಹಡಿಯಿಂದ ಕೆಳಗೆ ಇಳಿದು ಹೋಗಿ ಮನೆಯ ಹಿಂಬದಿಯಿದ್ದ ಕೃಷಿಗೆ ಬಳಸುವ ಔಷಧಿಯನ್ನು ಕುಡಿದು ಸಾವಿಗೆ ಯತ್ನಿಸಿದ್ದಾಳೆ. ಮಾಲಾ‌ ಮನೆಯಿಂದ ಹೊರಗೆ ಹೋಗಿರುವ ವಿಡಿಯೋ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಮಲ್ಲೇಶ್ವರದ ಹಾಸ್ಟೆಲ್​ನಲ್ಲಿ ಕೊರೋನಾ ಅಟ್ಟಹಾಸ; ಮಂಗಳೂರು ನರ್ಸಿಂಗ್ ಕಾಲೇಜಿನ 51 ವಿದ್ಯಾರ್ಥಿಗಳಿಗೆ ಕೊರೋನಾ!

ಮಾಲಾ ಆತ್ಮಹತ್ಯೆಗೆ ಯತ್ನಿಸಿದ ನಂತರ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ವೇಳೆ ಕುಟುಂಬಸ್ಥರು ಮಾತನಾಡಿಸಿದಾಗ ನನ್ನನ್ನು ಯಾರೋ ಕೂಗಿದ ಹಾಗಾಯ್ತು, ಆಮೇಲೆ ನಾನು ಅಲ್ಲಿಗೆ ಹೋದೆ. ಆಮೇಲೆ ಏನಾಯ್ತು ಗೊತ್ತಾಗ್ಲಿಲ್ಲ ಅಂತ ಹೇಳಿದ್ದಾರೆ. ಈ ಹಿಂದೆ ಸಹ ಮೂರ್ನಾಲ್ಕು ಭಾರಿ ಯಾರೋ ಕರೆದ ಹಾಗೆ ಆಗುತ್ತೆ, ನನಗೆ ಏನೂ ಬೇಡ ಅನ್ನಿಸುತ್ತದೆ ಎಂದು ಮಾಲಾ ತನ್ನ ಗಂಡ ಅಶೋಕ್‌ ಬಳಿ ಹೇಳಿಕೊಂಡಿದ್ದಾಳೆ.

ಖಿನ್ನತೆ ಎಂದುಕೊಂಡಿದ್ದ ಪತಿ: ಒಂಟಿ ಮನೆ ಆಗಿರುವುದರಿಂದ ಹೀಗೆ ಆಗುತ್ತದೆ, ಏನೂ ತಲೆ ಕೆಡಿಸಿಕೊಳ್ಳಬೇಡ ಎಂದು ಮಾಲಾ ಮಾತನ್ನ ನಂಬಿರಲಿಲ್ಲವಂತೆ. ಆದರೆ, ಇಂದು ಪತ್ನಿಯನ್ನು ಕಳೆದುಕೊಂಡ ಗಂಡ ನನ್ನ ಹೆಂಡತಿ ಖಿನ್ನತೆಯಿಂದ ಯಾವತ್ತೂ ಬಳಲಿಲ್ಲ. ಸಿಸಿ ಕ್ಯಾಮೆರಾದಲ್ಲಿ ನಾವು ಚೆಕ್ ಮಾಡಿದ್ದೆವು. ಆದರೆ, ಎಲ್ಲಾ ಏನು ಗೊತ್ತಾಗಲಿಲ್ಲ. ಆದರೆ, ಆಕೆಯ ಸಮಸ್ಯೆ ನಮಗೆ ಗುರುತಿಸಲು ಆಗಲಿಲ್ಲ. ಆದರೆ, ಈಗ ಕಳೆ ಔಷದಿ ತೆಗೆದುಕೊಂಡು ಸಾವನ್ನಪ್ಪಿದ್ದಾಳೆ ಎಂದು ಅಳಲು ತೋಡಿಕೊಂಡಿದ್ದಾರೆ. ಕಳೆದ 12ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾಳೆ.‌

ಘಟನೆಗೆ ಸಂಬಂಧಿಸಿದಂತೆ ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಮಾನಸಿಕ‌ ಖಿನ್ನತೆಯಂತಹ ಖಾಯಿಲೆಗಳನ್ನ ನಿರ್ಲಕ್ಷಿಸುವ ಬದಲು ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಿದ್ದರೆ ಇಂದು ಈಕೆಗೆ ಈ ದುಸ್ಥಿತಿ ಎದುರಾಗುತ್ತಿರಲಿಲ್ಲ.
Published by: Sushma Chakre
First published: March 18, 2021, 3:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories