HOME » NEWS » State » CRIME NEWS POLICE ARRESTED A MAN WHO WAS CHEATING GIRLS THROUGH FACEBOOK AND OTHER DATING APPS HK

ಫೇಸ್ ಬುಕ್ ಮತ್ತು ಡೇಟಿಂಗ್ ಆ್ಯಪ್ ಮೂಲಕ ಯುವತಿಯರಿಗೆ ವಂಚನೆ : ಆರೋಪಿ ಬಂಧಿಸಿದ ಪೊಲೀಸರು

ಐಷಾರಾಮಿ ಜೀವನ ನಡಸುವ ದುರಾಸೆಯಿಂದ ನಗರದಲ್ಲಿ ಉದ್ಯೋಗ ಮಾಡುತ್ತಿರುವ ಒಂಟಿ ಯುವತಿಯರನ್ನ ಪರಿಚಯ ಮಾಡಿಕೊಂಡು ಹಣ ಮಾಡುತ್ತಿದ್ದ. ಯುವತಿಯರ ಜೊತೆಗೆ ಕೆಲ ದಿನ ಸುತ್ತಾಡಿ ಅವರ ಖಾಸಗಿ ಪೋಟೊಗಳನ್ನ ಸಂಗ್ರಹಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ

news18-kannada
Updated:August 17, 2020, 5:52 PM IST
ಫೇಸ್ ಬುಕ್ ಮತ್ತು ಡೇಟಿಂಗ್ ಆ್ಯಪ್ ಮೂಲಕ ಯುವತಿಯರಿಗೆ ವಂಚನೆ : ಆರೋಪಿ ಬಂಧಿಸಿದ ಪೊಲೀಸರು
ಆರೋಪಿ
  • Share this:
ಬೆಂಗಳೂರು(ಆಗಸ್ಟ್​.17): ಫೇಸ್ ಬುಕ್ ಮತ್ತು ಡೇಟಿಂಗ್ ಆ್ಯಪ್ ಮೂಲಕ ಯುವತಿಯರನ್ನ ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಗರದ ಉತ್ತರಹಳ್ಳಿ ಮೂಲದ ಸುಹಾಸ್ ಹರಿಪ್ರಸಾದ್ ಬಂಧಿತ ಆರೋಪಿ. 

ಆರೋಪಿ ಸುಹಾಸ್ ಹರಿಪ್ರಸಾದ್ ಡೇಟಿಂಗ್ ಆ್ಯಪ್ ಮತ್ತು ಫೇಸ್ ಬುಕ್ ಮೂಲಕ ಯುವತಿಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ಬಳಿಕ ಯುವತಿಯರನ್ನ ಮದುವೆಯಾಗುವುದಾಗಿ ನಂಬಿಸಿ ಪ್ರೀತಿ ನಾಟಕವಾಡಿ ಅವರಿಗೆ ಮೋಸ ಮಾಡುತ್ತಿದ್ದ ಎನ್ನಲಾಗಿದೆ.

ಬೊಮ್ಮನಹಳ್ಳಿ ಮೂಲದ ಯುವತಿಯೊರ್ವಳನ್ನ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯ ಮಾಡಿಕೊಂಡ ಅಸಾಮಿ ಪ್ರೀತಿ ನೆಪದಲ್ಲಿ ಆಕೆಯ ಜೊತೆ ಸುತ್ತಾಡಿದ್ದ. ಬಳಿಕ ತಾನು ಯುಎಸ್ಎ ಮತ್ತು ಕೆನಡಾದಲ್ಲಿ ಆಟೋ ಸ್ಪಾರ್ಟ್ಸ್ ಬ್ಯುಸಿನೆಸ್ ಮಾಡುತ್ತಿದ್ದು, ಬ್ಯುಸಿನೆಸ್ ವಿಸ್ತರಣೆಗೆ ಹಣದ ಅವಶ್ಯಕತೆ ಇದೆ ಎಂದು ಯುವತಿಗೆ ತಿಳಿಸಿದ್ಧಾನೆ. ಬಳಿಕ ಯುವತಿಯಿಂದ ಸುಮಾರು 12 ಲಕ್ಷ ರೂಪಾಯಿ ಹಣವನ್ನು ಪಡೆದು ವಂಚಿಸಿದ್ದ ಎಂದು ಸಂತ್ರಸ್ತ ಯುವತಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಇನ್ನೂ ಆರೋಪಿ ಇದೇ ರೀತಿ ಮೂರ್ನಾಲ್ಕು ಯುವತಿಯರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಸುಹಾಸ್ ಹರಿಪ್ರಸಾದ್ ಜೊತೆ ಮತ್ತೊಬ್ಬ ಯುವತಿ ಫೇಸ್ ಬುಕ್ ನಲ್ಲಿ ಚಾಟಿಂಗ್ ಮಾಡುತ್ತಿದ್ದ. ಇದನ್ನ ಗಮನಿಸಿದ ದೂರುದಾರ ಯುವತಿ ಆಕೆಯನ್ನ ಭೇಟಿ ಮಾಡಿ‌ ವಿಚಾರಿಸಿದ್ದಾಳೆ‌.

ಇದನ್ನೂ ಓದಿ : ಎನ್​​​ಇಕೆಆರ್​ಟಿಸಿ ನಿಗಮದ ಅಧ್ಯಕ್ಷರಾಗಲು ಹಿಂದೇಟು ; ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನಡೆ ನಿಗೂಢ

ಈ ವೇಳೆ ಆಕೆಯು ಸಹ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದು ಮದುವೆಯಾಗುತ್ತೇನೆ ಎಂದು ಹೇಳಿ ಆಕೆಯ ಜೊತೆ ಓಡಾಡಿದ್ದ. ಬಳಿಕ ಆಕೆಯಿಂದ ಸುಮಾರು 1.40 ಲಕ್ಷ ರೂಪಾಯಿ ಹಣ ಪಡೆದು ಮೋಸ ಮಾಡಿದ್ದ ಎಂದು ಬೆಳಕಿಗೆ ಬಂದಿದೆ. ಹೀಗೆ ಇನ್ನೂ ಕೆಲವು ಯುವತಿಯರಿಗೆ ಹಣ ಪಡೆದು ವಂಚಿಸಿರುವುದು ನೊಂದ ಯುವತಿ ಪತ್ತೆ ಮಾಡಿದ್ದಾಳೆ.
Youtube Video
ಹೀಗೆ ಹಲವು ಯುವತಿಯರ ಬಾಳಲ್ಲಿ ಪ್ರೀತಿಯ ಆಸೆ ಹುಟ್ಟಿಸಿ ವಂಚಿಸುತ್ತಿದ್ದ ಸುಹಾಸ್ ಗೆ ಈ ಮೊದಲೇ ಮದುವೆಯಾಗಿದ್ದು, ಮಕ್ಕಳು ಸಹ ಇದ್ದಾರೆ. ಆದರೆ, ಐಷಾರಾಮಿ ಜೀವನ ನಡಸುವ ದುರಾಸೆಯಿಂದ ನಗರದಲ್ಲಿ ಉದ್ಯೋಗ ಮಾಡುತ್ತಿರುವ ಒಂಟಿ ಯುವತಿಯರನ್ನ ಪರಿಚಯ ಮಾಡಿಕೊಂಡು ಹಣ ಮಾಡುತ್ತಿದ್ದ. ಯುವತಿಯರ ಜೊತೆಗೆ ಕೆಲ ದಿನ ಸುತ್ತಾಡಿ ಅವರ ಖಾಸಗಿ ಪೋಟೊಗಳನ್ನ ಸಂಗ್ರಹಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಸದ್ಯ ಬೊಮ್ಮನಹಳ್ಳಿ ಪೊಲೀಸರು ಆರೋಪಿ ಸುಹಾಸ್ ಹರಿಪ್ರಸಾದ್ ನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
Published by: G Hareeshkumar
First published: August 17, 2020, 5:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories