HOME » NEWS » State » CRIME NEWS POLICE ARREST ACCUSED IN THE CASE OF GRAM PANCHAYAT MEMBER MURDER AT RAMANAGAR ATVR LG

Crime News: ಗ್ರಾಮ ಪಂಚಾಯ್ತಿ ಸದಸ್ಯನ ಭೀಕರ ಕೊಲೆ ಪ್ರಕರಣ; ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ ಪಡೆ

ಪೊಲೀಸರ ವಿಚಾರಣೆಯಲ್ಲಿ ಕೊಲೆಯಾದ ಕುಮಾರ್ ಚಿಕ್ಕಮ್ಮನ ಮಗ ಕುಮಾರ್ ಈ ಕೊಲೆ ಮಾಡಿರುವುದಾಗಿ ತಿಳಿದು ಬಂದಿತ್ತು. ಪ್ರಕರಣ ಪ್ರಮುಖ ಆರೋಪಿ ಕುಮಾರ್ ಸೇರಿದಂತೆ  ಶ್ರೀನಿವಾಸ, ಶಾಂತರಾಜು, ರಾಜೇಶ್, ಸುನೀಲ್, ಶ್ರೀಧರನ್ನ ಬಂಧಿಸಿದ್ದಾರೆ.

news18-kannada
Updated:May 14, 2021, 10:37 AM IST
Crime News: ಗ್ರಾಮ ಪಂಚಾಯ್ತಿ ಸದಸ್ಯನ ಭೀಕರ ಕೊಲೆ ಪ್ರಕರಣ; ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ ಪಡೆ
ಸಾಂದರ್ಭಿಕ ಚಿತ್ರ
  • Share this:
ರಾಮನಗರ(ಮೇ 14): ಕಳೆದ ವಾರವಷ್ಟೇ ಗ್ರಾಮ ಪಂಚಾಯಿತಿ ಸದಸ್ಯನ ಭೀಕರ ಹತ್ಯೆ ನಡೆದಿತ್ತು. ಈ ಕೊಲೆ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಕೊಲೆಯ ಹಿಂದಿನ ಜಾಡು ಹಿಡಿದು ಹೊರಟ ಬಿಡದಿ ಪೊಲೀಸರು 6 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಆರೋಪಿಗಳು ಕೊಲೆ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಹೌದು, ರಾಮನಗರದ ಬಿಡದಿ ಹೋಬಳಿಯ ಮುತ್ತುರಾಯನಗುಡಿ ಪಾಳ್ಯ ಗ್ರಾಮದ ಕುಮಾರ್ ಎಂಬುವನನ್ನ ಹೆಜ್ಜಾಲದ ಬಳಿಯ ರಚನಾ ಲಿಕ್ಕರ್ ಬಳಿ ನಡು ರಸ್ತೆಯಲ್ಲಿ ಹಂತಕರು ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆಯಾದ ಕುಮಾರ್ ಬನ್ನಿಕುಪ್ಪೆ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದ. ಗ್ರಾಮದಲ್ಲಿಯೂ ಜನರಿಗೆ ಸಣ್ಣಪುಟ್ಟ ಸಹಾಯ ಮಾಡಿಕೊಂಡಿದ್ದ. ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದರೂ ಸಹ ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ.

ಮೇ 4 ರಂದು ಬೆಳಿಗ್ಗೆ ಎಂದಿನಂತೆ ಕಚೇರಿಯ ಕೆಲಸಕ್ಕಾಗಿ ಮನೆಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಕುಮಾರ್ ನನ್ನ ಹಂತಕರು ಹಿಂಬಾಲಿಸಿಕೊಂಡು ಬಂದಿದ್ದರು. ಹೆಜ್ಜಾಲ ಸಮೀಪಿಸುತ್ತಿದ್ದಂತೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕುಮಾರ್ ನನ್ನ ಮಾರಕಾಸ್ತ್ರಗಳಿಂದ ಮನ ಬಂದಂತೆ ಕೊಚ್ಚಿ ಕೊಲೆ ಮಾಡಿದ್ರು. ಪ್ರಕರಣ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ವಿಶೇಷ ತಂಡ ರಚನೆ ಮಾಡಿ ಇದೀಗ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದಹಾಗೆ, ಕೊಲೆ ಪ್ರಕರಣ ದಾಖಲು ಮಾಡಿಕೊಂಡ ಬಿಡದಿ ಪೊಲೀಸರು ಹಂತಕರ ಜಾಡು ಹಿಡಿದು ಹೊರಟಿದ್ದರು. ಮೊದಲಿಗೆ ಕೊಲೆಯಾದ ಕುಮಾರ್ ಗೆ ಯಾರಾದರೂ ದಾಯಾದಿಗಳು ಇದ್ದಾರಾ ಎಂಬುದನ್ನ ಪತ್ತೆ ಮಾಡಿಕೊಂಡರು. ಈ ವೇಳೆ ಕಳೆದ 15 ದಿನಗಳ ಹಿಂದೆ ಕೊಲೆಯಾದ ಕುಮಾರ್ ನನಗೆ ಜೀವ ಬೇದರಿಕೆ ಇದೆ ಎಂದು 4-5 ಜನರ ಹೆಸರು ಬರೆದು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದ. ಈ ದೂರಿನಲ್ಲಿ ನೀಡಿದ್ದ 4-5 ಮಂದಿಯನ್ನ ಠಾಣೆಗೆ ಕರೆಸಿ ವಿಚಾರಣೆ ಕೂಡ ಮಾಡಿ ಎಚ್ಚರಿಕೆ ಕೊಟ್ಟಿದ್ದರು.

ಲಾಕ್​​ಡೌನ್ ವೇಳೆ ಅರಳಿತು ಪ್ರತಿಭೆ; ‌ಇಂಡಿಯಾ ಬುಕ್ ಆಫ್ ರೆಕಾರ್ಡ್​​ನಲ್ಲಿ ‌ದಾಖಲೆ ಬರೆದ ಉಡುಪಿಯ ಮಹಿಳೆ

ಪೊಲೀಸರ ವಿಚಾರಣೆಯಲ್ಲಿ ಕೊಲೆಯಾದ ಕುಮಾರ್ ಚಿಕ್ಕಮ್ಮನ ಮಗ ಕುಮಾರ್ ಈ ಕೊಲೆ ಮಾಡಿರುವುದಾಗಿ ತಿಳಿದು ಬಂದಿತ್ತು. ಪ್ರಕರಣ ಪ್ರಮುಖ ಆರೋಪಿ ಕುಮಾರ್ ಸೇರಿದಂತೆ  ಶ್ರೀನಿವಾಸ, ಶಾಂತರಾಜು, ರಾಜೇಶ್, ಸುನೀಲ್, ಶ್ರೀಧರನ್ನ ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಕೊಲೆಯಾದ ಕುಮಾರ್ ಹಾಗೂ ಕೊಲೆ ಮಾಡಿದ ಕುಮಾರ್ ಇಬ್ಬರೂ ಸಂಬಂಧಿಕರೇ ಆಗಿದ್ದರು. ಇಬ್ಬರ ನಡುವೆ ಹಣ ಹಾಗೂ ಜಮೀನು ವಿಚಾರವಾಗಿ ಆಗಾಗ ಗಲಾಟೆ ನಡೆಯುತಿತ್ತು.

ಇದನ್ನೇ ಜಿದ್ದು ಇಟ್ಟುಕೊಂಡಿದ್ದ ಆರೋಪಿ ಕುಮಾರ್ ಆತನನ್ನ ಮುಗಿಸಲೇ ಬೇಕು ಎಂದು ಹಲವು ದಿನಗಳ ಹಿಂದೆಯೇ ಸ್ಕೆಚ್ ಹಾಕಿಕೊಂಡಿದ್ದ. ಕುಮಾರ್ ತನ್ನ ಸ್ನೇಹಿತರ ಜತೆಗೂಡಿ ಕೊನೆಗೂ ಪಕ್ಕಾ ಪ್ಲಾನ್ ಮಾಡಿಕೊಂಡು ಗ್ರಾ.ಪಂ ಸದಸ್ಯ ಕುಮಾರ್​​ನನ್ನು ನಡು ರಸ್ತೆಯಲ್ಲೇ ಕೊಂದುಬಿಟ್ಟ. ಇನ್ನು ಕೊಲೆ ಆರೋಪಿಗಳೆಲ್ಲರೂ ಈ ಮೊದಲು ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಹಾಗೂ ಕೊಲೆಗೆ ಸಂಬಂಧಿಸಿದ ಆರೋಪಗಳನ್ನ ಎದುರಿಸಿದ್ದರು.
Youtube Video

ಒಟ್ಟಾರೆ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ ಕಂಡಿದೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನ್ಯಾಯಂಗ ಬಂಧನಕ್ಕೆ ಒಳಪಡಿಸಿ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

(ವರದಿ : ಎ.ಟಿ.ವೆಂಕಟೇಶ್)
Published by: Latha CG
First published: May 14, 2021, 10:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories