Crime News: ಇಬ್ಬರು ಎಲ್ಇಟಿ ಉಗ್ರರ ವಿರುದ್ಧ 8 ವರ್ಷದ ಬಳಿಕ ಕೊನೆಗೂ ಚಾರ್ಜ್ ಶೀಟ್ ಸಲ್ಲಿಸಿದ ಎನ್​ಐಎ

ಪ್ರಮುಖ ನಗರಗಳ ಹಿಂದೂ ಮುಖಂಡರ ಹತ್ಯೆಯ ಟಾರ್ಗೆಟ್ ಹೊಂದಿದ್ದ ಆರೋಪಿಗಳು ಅದಕ್ಕಾಗಿ ಸಂಚು ರೂಪಿಸಿದ್ದ ವೇಳೆ ಎನ್ಐಎ ಪ್ರಕರಣವನ್ನು ಬಯಲಿಗೆಳೆದಿತ್ತು. 2012 ರಲ್ಲಿ ಎಲ್ಇಟಿ ಉಗ್ರರನ್ನು ಬಂಧಿಸಲಾಗಿತ್ತು.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು (ಫೆಬ್ರವರಿ 22); ಧಾರ್ಮಿಕ ಮತ್ತು ಸಾಮಾಜಿಕ ಸಾಮರಸ್ಯ ಹಾಳು ಮಾಡಲು ಸಂಚು ರೂಪಿಸಿದ್ದ ಇಬ್ಬರು ಲಷ್ಕರ್ ಇ ತೋಯ್ಬ ಉಗ್ರರ ವಿರುದ್ಧ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಬೆಂಗಳೂರು ಎನ್ಐಎ ಅಧಿಕಾರಿಗಳು  ಆರೋಪಿಗಳಾದ ಡಾ. ಸಬೀಲ್ ಅಹಮದ್@ ಮೋಟು ಡಾಕ್ಟರ್, ಅಸಾದುಲ್ಲಾಖಾನ್ @ ಅಬು ಸೂಫಿಯಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಇಬ್ಬರು ಎಲ್ಇಟಿ ಉಗ್ರರ ವಿರುದ್ದ 2012 ಅಗಸ್ಟ್ 29 ರಂದು ನಗರದ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಎನ್ಐಎ ಅಧಿಕಾರಿಗಳು ಆರೋಪಿಗಳ ಪಾತ್ರದ ಕುರಿತು ಹೆಚ್ಚುವರಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಆರೋಪಿಗಳು ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ದರಾಗಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ದೇಶದ ಪ್ರಮುಖ ನಗರಗಳ ಹಿಂದೂ ಮುಖಂಡರ ಹತ್ಯೆ ಸಂಚು ರೂಪಿಸಿದ್ದರು ಎಂದು ಎನ್ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.

ಬೆಂಗಳೂರು, ಹುಬ್ಬಳ್ಳಿ, ನಾಂದೇಡ್, ತೆಲಂಗಾಣ, ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳ ಹಿಂದೂ ಮುಖಂಡರು ಎಲ್ಇಟಿ ಉಗ್ರರ ಟಾರ್ಗೆಟ್ ಆಗಿದ್ದು ಅವರನ್ನ ಹತ್ಯೆ ಮಾಡಲು ಬೇಕಾದ ಸಿದ್ದತೆ ಮತ್ತು ಒಳಸಂಚು ರೂಪಿಸಿದ್ದರು ಎನ್ನಲಾಗಿದೆ. ಹಾಗೂ ದೇಶದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸಾಮರಸ್ಯ ಹಾಳು ಮಾಡಿ ಗಲಭೆ ರೀತಿಯ ದುಷ್ಕೃತ್ಯ ಎಸಗಲು ಮುಂದಾಗಿದ್ದು ಸಮಾಜದ ಸ್ವಾಸ್ಥ್ಯ ಕೆಡಿಸಲು ಯೋಜನೆ ರೂಪಿಸಿದ್ದರು ಎಂದು ಎನ್ಐಎ ಬೆಳಕಿಗೆ ತಂದಿದೆ.

ಇನ್ನೂ ಇದೇ ಪ್ರಕರಣದಲ್ಲಿ ಮೊದಲು 17 ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಬಳಿಕ ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯ 2016 ರಲ್ಲಿ 13 ಆರೋಪಿಗಳಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳ ವಿರುದ್ಧ ಕೋರ್ಟ್ ನಲ್ಲಿ ವಿಚಾರಣೆ ಮುಂದುವರಿದಿದೆ. ಹಾಗೂ ಇನ್ನೂ ಆರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ  ಎನ್ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ರಾಮಮಂದಿರಕ್ಕೆ ದೇಣಿಗೆ ಕೊಟ್ಟಿರುತ್ತಾರೆ ಬಹಿರಂಗಪಡಿಸಲು ಹಿಂದೇಟು; ಎಸ್‌.ಟಿ. ಸೋಮಶೇಖರ್

ಇನ್ನೂ ಚಾರ್ಜ್ ಶೀಟ್ ಸಲ್ಲಿಸಲಾದ ಡಾ. ಸಬೀಲ್ ಅಹಮದ್ ಮತ್ತು ಅಸಾದುಲ್ಲಾಖಾನ್ ಎಲ್ಇಟಿ ಸಂಘಟನೆಯ ಸದಸ್ಯರಾಗಿದ್ದರು ಎಂದು ಎನ್ಐಎ ತನಿಖೆಯಿಂದ ಗೊತ್ತಾಗಿದೆ. ಇಬ್ಬರು ಆರೋಪಿಗಳು ಹಲವು ಕ್ರಿಮಿನಲ್ ಒಳಸಂಚಿನಲ್ಲಿ ಭಾಗಿಯಾಗಿದ್ದು, ಇತರೆ ಆರೋಪಿಗಳ ಜೊತೆಗೂಡಿ ಹಲವು ಸಭೆ ಮತ್ತು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಎನ್ಐಎ ತನಿಖೆಯಿಂದ ಹೊರ ಬಂದಿದೆ.

ಪ್ರಮುಖ ನಗರಗಳ ಹಿಂದೂ ಮುಖಂಡರ ಹತ್ಯೆಯ ಟಾರ್ಗೆಟ್ ಹೊಂದಿದ್ದ ಆರೋಪಿಗಳು ಅದಕ್ಕಾಗಿ ಸಂಚು ರೂಪಿಸಿದ್ದ ವೇಳೆ ಎನ್ಐಎ ಪ್ರಕರಣವನ್ನು ಬಯಲಿಗೆಳೆದಿತ್ತು. 2012 ರಲ್ಲಿ ಎಲ್ಇಟಿ ಉಗ್ರರ ಸಂಚು ಬಯಲಿಗೆ ಬಂದಿದ್ದು ಈ ಬಗ್ಗೆ ಅಧಿಕಾರಿಗಳು ಸುದೀರ್ಘ ತನಿಖೆ ನಡೆಸಿ ಹಲವು ಹತ್ತಕ್ಕು ಹೆಚ್ಚು ಮಂದಿಯನ್ನ ಬಂಧಿಸಿದ್ದರು.
Published by:MAshok Kumar
First published: