ಬಾಗಲಕೋಟೆ ಯುವತಿ ಸಾವಿಗೆ ಹೊಸ ಟ್ವಿಸ್ಟ್; ಪ್ರೇಯಸಿಯ ಶೀಲ ಶಂಕಿಸಿ ಕೊಲೆ ಮಾಡಿ, ನದಿಗೆ ಎಸೆದ ಪ್ರೇಮಿ!

ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿ ಘಟಪ್ರಭಾ ನದಿಯಲ್ಲಿ ಅಪರಿಚಿತ ಯುವತಿ ಶವ ಪತ್ತೆಯಾಗಿತ್ತು. ಆಕೆಯ ಶೀಲ ಶಂಕಿಸಿ ಆಕೆಯ ಪ್ರೇಮಿಯೇ ಆಕೆಯನ್ನು ಕೊಂದು ನದಿಗೆ ಎಸೆದಿದ್ದ ಎಂಬ ಸತ್ಯ ಬೆಳಕಿಗೆ ಬಂದಿದೆ.

ಜ್ಯೋತಿ

ಜ್ಯೋತಿ

  • Share this:
ಬಾಗಲಕೋಟೆ (ಫೆ. 17): ನಾಪತ್ತೆಯಾದ ಯುವತಿ ಶವವಾಗಿ ಪತ್ತೆಯಾದ ಕೇಸ್ ಇದೀಗ ಟ್ವಿಸ್ಟ್ ಪಡೆದುಕೊಂಡಿದೆ. ಭಗ್ನ ಪ್ರೇಮಿಯೋರ್ವ ತನ್ನ ಪ್ರೇಯಸಿಯ ಶೀಲ ಶಂಕಿಸಿ, ಕತ್ತು ಹಿಸುಕಿ ಕೊಲೆಗೈದು, ಘಟಪ್ರಭಾ ನದಿಗೆ ಎಸೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿ ಘಟನೆ‌ ನಡೆದಿದ್ದು, ಫೆ. 16ರಂದು ಕಾತರಕಿ ಸೇತುವೆ ಬಳಿ ಘಟಪ್ರಭಾ ನದಿಯಲ್ಲಿ ಯುವತಿ ಶವ ಪತ್ತೆಯಾಗಿತ್ತು. ಅದೇ ಮಾರ್ಗವಾಗಿ ನಾಪತ್ತೆಯಾಗಿದ್ದ ಜ್ಯೋತಿ ಸಂಬಂಧಿ ಹನುಮಂತ ಹೋಗುತ್ತಿದ್ದಾಗ, ಜಮಾಯಿಸಿದ ಜನರನ್ನು ನೋಡಿ ನದಿ ಬಳಿ ಹೋದಾಗ  22 ವರ್ಷದ ಜ್ಯೋತಿ ಭಾಗವ್ವಗೋಳ ಎಂಬ ಯುವತಿಯ ಶವ ಅದು ಎನ್ನುವುದನ್ನು ಗುರುತಿಸಿ, ಮನೆಯವರಿಗೆ ತಿಳಿಸಿದ್ದಾರೆ. ಆಗ ಪೊಲೀಸರಿಗೆ ಆಕೆಯನ್ನು ಹನೀಫ್ ಪ್ರೀತಿಸುತ್ತಿದ್ದ ಎಂದು ಹೇಳಿದಾಗ ಹನೀಫ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಗೊತ್ತಾಗಿದೆ. ನಾನು ಜ್ಯೋತಿಯನ್ನು  ಪ್ರೀತಿಸುತ್ತಿದ್ದೆ, ಅವಳು ಮತ್ತೊಬ್ಬರನ್ನು ಪ್ರೀತಿಸುತ್ತಿದ್ದಳು. ಅವಳ ಶೀಲ ಶಂಕಿಸಿ ಕೊಲೆ ಮಾಡಿದ್ದಾಗಿ ಆತ  ಒಪ್ಪಿಕೊಂಡಿದ್ದಾನೆ.

ಕಲಾದಗಿ ಗ್ರಾಮದ ಹನೀಫ್ ಎಂಬ ಭಗ್ನ ಪ್ರೇಮಿ ಈ ನೀಚ ಕೃತ್ಯವೆಸಗಿದ್ದಾನೆ. ಪ್ರೀತಿಯ ವಿಚಾರ ಮೊದಲೇ ಗೊತ್ತಿದ್ದ ಯುವತಿ ಜ್ಯೋತಿಯ ಕುಟುಂಬಸ್ಥರು, ನಮ್ಮದು ಜಾತಿ ಬೇರೆ ಬೇರೆ ಇದೆ ಎಂದು ಹನೀಫ್ ಗೆ ಬುದ್ಧಿವಾದ ಹೇಳಿ ಕಳುಹಿಸಿ ಕೊಟ್ಟಿದ್ದರು. ಆದರೆ ನೀಚ ಭಗ್ನ ಪ್ರೇಮಿ ಹನೀಫ್, ಯುವತಿಯ ಕುಟುಂಬಸ್ಥರ ಮಾತಿಗೆ ಬೆಲೆ ಕೊಡದೇ, ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿದ್ದ. ಬಾಗಲಕೋಟೆ ನಗರದಲ್ಲಿ  3ನೇ ವರ್ಷದಲ್ಲಿ ನರ್ಸಿಂಗ್ ಓದುತ್ತಾ, ಜ್ಯೋತಿ  ಖಾಸಗಿ ಆಸ್ಪತ್ರೆಯಲ್ಲಿ  ಪ್ರಾಕ್ಟೀಸ್ ಮಾಡುತ್ತಿದ್ದಳು. ಹನೀಫ್ ಬೀಳಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಇಬ್ಬರ ಮಧ್ಯೆ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು.

ಕಳೆದ ಎರಡು ತಿಂಗಳಿಂದ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಸಾವಿಗೀಡಾರುವ ಜ್ಯೋತಿ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದವಳಾಗಿದ್ದಾಳೆ. ಮೃತ ಜ್ಯೋತಿ, ನರ್ಸಿಂಗ್ ಕಲಿಯಲೆಂದು ಬಾಗಲಕೋಟೆಯ ವಿನಾಯಕ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಓದಿನ ಜೊತೆಗೆ ಹನೀಫ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ, ಪ್ರೀತಿಯ ಗುಂಗಿನಲ್ಲಿದ್ದರು. ಆದರೆ ಇತ್ತೀಚೆಗೆ ಜ್ಯೋತಿ ಶೀಲದ ಬಗ್ಗೆ ಅನುಮಾನಗೊಂಡಿದ್ದ ಭಗ್ನ ಪ್ರೇಮಿ ಹನೀಫ್, ಫೆಬ್ರವರಿ 13ರಂದು ಆಕೆಯನ್ನು ಪುಸಲಾಯಿಸಿದ ಹನೀಫ್,  ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ. ಈ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ, ಜ್ಯೋತಿಯನ್ನು ಕೊಲೆಗೈದು ಸಾಕ್ಷಿ ನಾಶ ಮಾಡಲು ಜ್ಯೋತಿ ಶವವನ್ನು ಘಟಪ್ರಭಾ ನದಿಗೆ ಎಸೆದಿದ್ದ.

ಇದನ್ನೂ ಓದಿ: Chikmagalur Rape: ಚಿಕ್ಕಮಗಳೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು; ಬೆಚ್ಚಿಬಿದ್ದ ಕಾಫಿನಾಡು

ಸದ್ಯ ಪ್ರಕರಣ ಭೇದಿಸಿದ ಪೊಲೀಸರು, ಆರೋಪಿ ಹನೀಫ್ ಪೋಲಿಸರ ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ‌. ಯುವತಿಯ ಕೊಲೆಮಾಡಿರುವದಾಗಿ ಆರೋಪಿ ಹನೀಫ್ ಬಳಿ  ಒಪ್ಪಿಕೊಂಡಿದ್ದಾನೆ. ಯುವತಿಯ ಕುಟುಂಬಸ್ತರು ಫೆಬ್ರುವರಿ 13ರಂದು ಯುವತಿ ಕೆಲಸಕ್ಕೆ ಹೋಗಿ ವಾಪಸ್ ಬಾರದಿದ್ದಾಗ ನಾಪತ್ತೆ ಕೇಸ್ ದಾಖಲಿಸಿದ್ದರು. ಸದ್ಯ ಯುವತಿ ಶವವವಾಗಿ ಪತ್ತೆಯಾಗಿದ್ದಾಳೆ. ಈ ಬಗ್ಗೆ ಬಾಗಲಕೋಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ವಿಚಾರಣೆ ನಡೆಸಲಾಗುತ್ತದೆ.

ಇನ್ನು ಈ ಕೊಲೆ ಪ್ರಕರಣಕ್ಕೆ ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಶಂಕೆಯನ್ನ ವ್ಯಕ್ತಪಡಿಸಿ, ಬಾಗಲಕೋಟೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ದಲಿತ ಯುವತಿ ಮೇಲೆ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆಗೈದು ನದಿಗೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಹೀಗಾಗಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ. ದಲಿತ ಸಮುದಾಯದ ಯುವತಿ ಜ್ಯೋತಿ ನಾಪತ್ತೆ ಕೇಸ್, ಲವ್ ಜಿಹಾದ್ ಎಂದು ಆರೋಪಿಸ್ತಿರೋ ಹಿಂದೂಪರ ಸಂಘಟನೆಯವರು, ಯುವತಿ ಕೊಲೆಗೈದು ಸಾಕ್ಷಿ ನಾಶಪಡಿಸಲು ಮೃತ ದೇಹ ನದಿಗೆ ಎಸೆದಿದ್ದ ಆರೋಪಿ ನೀಚ ಹನೀಫ್ ವಿರುದ್ಧ ಕಠಿಣ ಶಿಕ್ಷೆ ನೀಡಿ ಎನ್ನುದ್ದಾರೆ.

ಇತ್ತ ಮೃತ ಯುವತಿಯ ಕುಟುಂಬಸ್ಥರು ಸಹ ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮೃತ ಜ್ಯೋತಿ ಅಜ್ಜಿ ದುಂಡವ್ವ , ಕಣ್ಣೀರಿಟ್ಟಿದ್ದಾರೆ. ದಲಿತ ಯುವತಿ ದುಡಿಮೆ ಮಾಡುತ್ತಾ, ಕುಟುಂಬಕ್ಕೆ ಆಸರೆಯಾಗಿ, ಓದನ್ನು ಮುಂದುವರಿಸಿದ್ದಳು. ಮಗಳನ್ನು ಕಳೆದುಕೊಂಡ ಕುಟುಂಬಸ್ಥರು ರೋಧಿಸುತ್ತಿದ್ದಾರೆ .ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ.

(ವರದಿ: ರಾಚಪ್ಪ ಬನ್ನಿದಿನ್ನಿ)
Published by:Sushma Chakre
First published: