Bengaluru: ಟಬ್​​ನಲ್ಲಿ ಮುಳುಗಿಸಿ ಮಗುವನ್ನ ಕೊಂದ ತಾಯಿ, ಇತ್ತ ಸಾಲ ಕೇಳಿದ್ದಕ್ಕೆ ವ್ಯಕ್ತಿಯ ಹತ್ಯೆ, ಸ್ನೇಕ್ ಲೋಕೇಶ್ ಸಾವು

ಬಂದಿರುವ ಕಷ್ಟಗಳನ್ನು ನಿಭಾಯಿಸುವ ಶಕ್ತಿ ಇಲ್ಲ. ತನ್ನ ಸಾವಿನ ನಂತರ ಮಗು ನೋಡಿಕೊಳ್ಳಲು ಯಾರು ಇರಲ್ಲ. ನನ್ನ  ಸಾವಿಗೆ ನಾನೇ ಕಾರಣ ಎಂದು ಡೆತ್​ ನೋಟ್​ನಲ್ಲಿ ಬರೆಯಲಾಗಿದೆ.

ಸ್ನೇಕ್ ಲೋಕೇಶ್, ಮಗುವನ್ನ ಕೊಂದ ತಾಯಿ

ಸ್ನೇಕ್ ಲೋಕೇಶ್, ಮಗುವನ್ನ ಕೊಂದ ತಾಯಿ

  • Share this:
ತಾಯಿಯೇ (Mother) ನೀರಿನ ಟಬ್​ನಲ್ಲಿ ಮೂರುವರೆ ವರ್ಷದ ಮಗುವನ್ನು (Baby) ಮುಳುಗಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಗುವನ್ನ ಕೊಲೆಗೈದ ಬಳಿಕ ತಾಯಿ ಸಹ ಆತ್ಮಹತ್ಯೆಗೆ (Suicide Attempt) ಯತ್ನಿಸಿದ್ದಾಳೆ. ಗಾಯಿತ್ರಿ ಮಗುವನ್ನು ಕೊಲೆಗೈದ ತಾಯಿ. ಸಂಯುಕ್ತಾ ಸಾವನ್ನಪ್ಪಿದ ಮಗು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪತ್ನಿಯನ್ನು ಪತಿ ಆಸ್ಪತ್ರೆಗೆ (Husband) ದಾಖಲು ಮಾಡಿದ್ದರಿಂದ ಗಾಯಿತ್ರಿ ಬದುಕುಳಿದಿದ್ದಾಳೆ. ತಮಿಳುನಾಡು ಮೂಲದ  ನರೇಂದ್ರ ಹಾಗೂ ಗಾಯಿತ್ರಿ ದಂಪತಿ ಬೆಂಗಳೂರಿನ ಹೆಚ್​​ಎಎಲ್​ನ ವಿಭೂತಿಪುರದಲ್ಲಿ (Vibhuipuram Bengaluru) ವಾಸವಾಗಿದ್ದರು. ಇಪ್ಪತ್ತು ದಿನಗಳ ಹಿಂದೆ ನರೇಂದ್ರ ತಾಯಿ ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ತಾಯಿ ಸಾವಿನ ಹಿನ್ನೆಲೆ ನರೇಂದ್ರ ಕುಟುಂಬ ಸಮೇತರಾಗಿ ತಮಿಳುನಾಡಿಗೆ (Tamilnadu) ತೆರಳಿದ್ದರು. ಸೋಮವಾರವಷ್ಟೇ ಬೆಂಗಳೂರಿಗೆ ನರೇಂದ್ರ ಬಂದಿದ್ದರು. ಈ ವೇಳೆ ಪತ್ನಿ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಪತ್ನಿ ನೇಣು ಬಿಗಿದುಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಕೂಡಲೇ ಪತ್ನಿಯನ್ನು ನರೇಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ. ನರೇಂದ್ರ ಅವರು ನೀಡಿದ ದೂರಿನನ್ವಯ ಹೆಚ್​ಎಎಲ್​ ಪೊಲೀಸ್ ಠಾಣೆಯಲ್ಲಿ (HAL Police Station) ಪ್ರಕರಣ ದಾಖಲಾಗಿದೆ.

Crime news Mother kills baby snake lokesh death
ಆರೋಪಿ ಶರಣಪ್ಪ


ಡೆತ್​ ನೋಟ್ ಪತ್ತೆ

ಆತ್ಮಹತ್ಯೆ ಯತ್ನಕ್ಕೂ ಮುನ್ನ ಗಾಯಿತ್ರಿ ಬರೆದಿಟ್ಟಿರುವ ಡೆತ್ ನೋಟ್ (Death note) ಪೊಲೀಸರಿಗೆ ಲಭ್ಯವಾಗಿದೆ. ಬಂದಿರುವ ಕಷ್ಟಗಳನ್ನು ನಿಭಾಯಿಸುವ ಶಕ್ತಿ ಇಲ್ಲ. ತನ್ನ ಸಾವಿನ ನಂತರ ಮಗು ನೋಡಿಕೊಳ್ಳಲು ಯಾರು ಇರಲ್ಲ. ನನ್ನ  ಸಾವಿಗೆ ನಾನೇ ಕಾರಣ ಎಂದು ಡೆತ್​ ನೋಟ್​ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ:  Belagavi: ಚಿರತೆ ಸೆರೆಗಾಗಿ ಬರುತ್ತಿವೆ ಆನೆಗಳು; 120 ಅರಣ್ಯ ಇಲಾಖೆ, 80 ಪೊಲೀಸ್ ಸಿಬ್ಬಂದಿ ನಿಯೋಜನೆ

ಸಾಲ ವಾಪಾಸ್ ಕೇಳಿದಕ್ಕೆ ಕೊಲೆ

ನೀಡಿದ್ದ ಹಣ (Money) ವಾಪಾಸ್ ಕೇಳಿದ್ದ ವ್ಯಕ್ತಿಯನ್ನು ಕೊಲೆ (murder) ಮಾಡಿರುವ ಘಟನೆ ಮುನ್ನೆಕೊಳಲು ಸಮೀಪದ ಜೆಆರ್​ಎಂ Pearl ಅಪಾರ್ಟ್​​ಮೆಂಟ್​​ನಲ್ಲಿ ನಡೆದಿದೆ. ವೆಂಕಟೇಶಪ್ಪ (65) ಕೊಲೆಯಾದ ದುರ್ದೈವಿ. ಕೊಲೆಯಾದ ವೆಂಕಟೇಶಪ್ಪ, ಶಿವಪ್ಪ ಅಲಿಯಾಸ್ ಮೇಷ್ಟ್ರು ಎಂಬವರಿಗೆ ನಂಜುಂಡ ರೆಡ್ಡಿ ಹಾಗೂ ಪ್ರಕಾಶ್ ಎಂಬವರ ಕಡೆಯಿಂದ ಸಾಲ‌ ಕೊಡಿಸಿದ್ದರು. ಈ ಸಾಲಕ್ಕೆ ಸಂಬಂಧಿಸಿದಂತೆ ಶಿವಪ್ಪ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು.

ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ಸಂಬಂಧ ಸಾಲಗಾರರೊಂದಿಗೆ ಶಿವಪ್ಪ ವಾಸವಾಗಿದ್ದ ಅಪಾರ್ಟ್​​ಮೆಂಟ್ ಬಳಿಗೆ ತೆರಳಿದ್ದರು. ಈ ವೇಳೆ ಕ್ರಿಕೆಟ್​ ಬ್ಯಾಟ್​​ನಿಂದ ಹೊಡೆದು ಕೊಲೆ ಮಾಡಲಾಗಿದೆ. ಕೊಲೆಯ ಬಳಿಕ ಶಿವಪ್ಪ ಎಸ್ಕೇಪ್ ಆಗಿದ್ದಾನೆ. ಹತ್ಯೆಯ ದೃಶ್ಯಗಳು ಸಿಸಿಟಿವಿಯಲ್ಲಿ (CCTV Footage) ಸೆರೆಯಾಗಿವೆ.

ಈ ಸಂಬಂಧ ಮಾರತ್​ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದು, ಸ್ಥಳೀಯರಿಂದ ಮತ್ತು ನಂಜುಂಡ ರೆಡ್ಡಿ ಹಾಗೂ ಪ್ರಕಾಶ್ ಅವರಿಂದ ಹೇಳಿಕೆ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Crime news Mother kills baby snake lokesh death
ಸ್ನೇಕ್ ಲೋಕೇಶ್


ಉರಗ ತಜ್ಞ ಸ್ನೇಕ್ ಲೋಕೇಶ್ ಕೊನೆಯುಸಿರು

ನೆಲಮಂಗಲ ನಗರದ ಮಾರುತಿ ಬಡಾವಣೆ ನಿವಾಸಿ ಸ್ನೇಕ್ ಲೋಕೇಶ್ (Snake Lokesh Death) ಇಂದು ನಿಧನರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದಲ್ಲಿ (Nelamangala, Bengaluru) ಲೋಕೇಶ್ ವಾಸವಾಗಿದ್ದರು. ಕಳೆದ ಬುಧವಾರ ಡಾಬಸ್‌ಪೇಟೆಯಲ್ಲಿ ಲೋಕೇಶ್ ಅವರಿಗೆ ನಾಗರ ಹಾವು ಕಚ್ಚಿತ್ತು.

ಇದನ್ನೂ ಓದಿ:  Police Arrest: ರಾಜಸ್ಥಾನದಲ್ಲಿ ಕರ್ನಾಟಕ ಪೊಲೀಸಪ್ಪನ ಜೂಜಾಟ, ಕೋಲಾರದ ಸರ್ಕಲ್ ಇನ್ಸ್​ಪೆಕ್ಟರ್ ಅರೆಸ್ಟ್!

ಮೂಟೆ ಕೆಳಗೆ ಅವಿತ್ತಿದ್ದ ಹಾವನ್ನ ರಕ್ಷಿಸುವಾಗ ಉರಗ ಕಚ್ಚಿತ್ತು. ಅಂದಿನಿಂದಲೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲೋಕೇಶ್ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
Published by:Mahmadrafik K
First published: