• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Double Murder: ಚಾಕುವಿನಿಂದ ಇರಿದು ದುಷ್ಕರ್ಮಿಗಳಿಂದ ತಾಯಿ, ಮಗನ ಕೊಲೆ : ಬೆಚ್ಚಿ ಬಿದ್ದ ಮಲೆನಾಡಿನ ಜನತೆ

Double Murder: ಚಾಕುವಿನಿಂದ ಇರಿದು ದುಷ್ಕರ್ಮಿಗಳಿಂದ ತಾಯಿ, ಮಗನ ಕೊಲೆ : ಬೆಚ್ಚಿ ಬಿದ್ದ ಮಲೆನಾಡಿನ ಜನತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೂಡಲೇ ಈ ಪ್ರಕರಣವನ್ನು ಪೊಲೀಸರು ಬೇಧಿಸಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

  • Share this:

ಶಿವಮೊಗ್ಗ(ಅಕ್ಟೋಬರ್​. 11): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಜೋಡಿ ಕೊಲೆಯಾಗಿದೆ.  ತಾಯಿ ಮತ್ತು ಮಗನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬಂಗಾರಮ್ಮ, ಮತ್ತು ಅವರ ಮಗ ಪ್ರವೀಣ್ ಕೊಲೆಯಾದ ದುರ್ವೈವಿಗಳು. ಮಲೆನಾಡಿನ ಒಂಟಿ ಮನೆಯಲ್ಲಿ ಈ ರೀತಿ ಜೋಡಿ ಕೊಲೆ ನಡೆದಿರುವುದು ಮಲೆನಾಡು ಭಾಗದ ಜನರಲ್ಲಿ ಅಂತಕ ಸೃಷ್ಠಿ ಮಾಡಿದೆ. ಜಿಲ್ಲೆಯ ಸಾಗರ ತಾಲೂಕಿನ ಹಳೇ ಇಕ್ಕೇರಿ ಸಮೀಪದ ಕಸಕಸೆ ತೋಟದಲ್ಲಿ  ಜೋಡಿ ಕೊಲೆಯಾಗಿದೆ. ತಡರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಈ  ಜೋಡಿ ಕೊಲೆ ನಡೆದಿದೆ. ತಾಯಿ ಮತ್ತು ಮಗನನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಂಗಾರಪ್ಪ 65 ವರ್ಷ ಮತ್ತು ಪ್ರವೀಣ್ 35 ವರ್ಷ ಕೊಲೆಯಾದ ತಾಯಿ ಮತ್ತು ಮಗ. ತಡರಾತ್ರಿ ಒಂದುವರೆ ಸುಮಾರಿಗೆ ವ್ಯಕ್ತಿಯೊಬ್ಬ ಬಂದು ಕೊಲೆ ಮಾಡಿದ್ದಾನೆ ಎಂದು ಕೊಲೆಯಾದ ಪ್ರವೀಣ್ ಅವರ ಹೆಂಡತಿ ರೋಹಿಣಿ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.


ಕಳವು ಮಾಡಲು ಬಂದ ವ್ಯಕ್ತಿ ಹಗ್ಗದಿಂದ ರೋಹಿಣಿ ಕೈಗಳನ್ನು ಕಟ್ಟಿ ಹಾಕಿ, ಬಾಯಿಗೆ ಪ್ಲಾಸ್ಟರ್ ಆಂಟಿಸಿ, ಅತ್ತೆ ಮತ್ತು ಗಂಡನನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದಾರೆ. ಕೊಲೆ ಮಾಡಿದ ಸುಮಾರು 3 ಗಂಟೆಗಳ ನಂತರ ರೋಹಿಣಿ ಹಗ್ಗವನ್ನು ಬಿಚ್ಚಿಕೊಂಡು ನಂತರ ಅಕ್ಕ ಪಕ್ಕದ ಮನೆಯವರಿಗೆ ನಾಲ್ಕು ಗಂಟೆಗೆ ಸುಮಾರಿಗೆ ವಿಷಯ ತಿಳಿಸಿದ್ದಾಳೆ. ಗ್ರಾಮದ ಜನರು ಬಂದು ನೋಡಿದ ಸಮಯದಲ್ಲಿ ಬಂಗಾರಪ್ಪ ಮತ್ತು ಪ್ರವೀಣ್ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದರು.


ಇನ್ನು ಪ್ರವೀಣ್ ಗೆ ಈ ಭಾಗದಲ್ಲಿ ಯಾರು ಸಹ ವೈರಿಗಳು ಇರಲಿಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇರುವಂತ ಸಣ್ಣ ಭೂಮಿಯಲ್ಲಿ ತೋಟ ಮಾಡಿಕೊಂಡು, ಜೀವನ ನಡೆಸುತ್ತಿದ್ದ. ಪ್ರವೀಣ್ ಒಳ್ಳೆಯ ವ್ಯಕ್ತಿಯಾಗಿದ್ದ, ಕೊಲೆಯಾದ ನಂತರ ಮನೆಯಲ್ಲಿ ಹಣ, ಆಭರಣ ಯಾವುದೇ ವಸ್ತುಗಳು ಕಳವು ಆಗಿರುವಂತೆ ಕಾಣುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಇದೇ ಬೇರೆ ಯಾವುದೋ ಕಾರಣಕ್ಕೆ ಕೊಲೆ ಆಗಿದೆ ಎಂಬ ಅನುಮಾನ ಸ್ಥಳೀಯರಲ್ಲಿ ಕಾಡುತ್ತಿದೆ.


ಇದನ್ನೂ ಓದಿ : ಜಾತಿ ರಾಜಕಾರಣ ನಡೆಯುವುದಿದ್ದರೆ ದೇವೇಗೌಡ್ರು, ನಿಖಿಲ್​ ಯಾಕೆ ಸೋತರು; ಸಿದ್ದರಾಮಯ್ಯ


ಕೊಲೆ ಮಾಡಿದ ವ್ಯಕ್ತಿಯನ್ನು ಗುರುತಿಸುತ್ತೇನೆ ಎಂದು ಸ್ಥಳೀಯರಿಗೆ ಮತ್ತು ಸಂಬಂಧಿಕರಿಗೆ ರೋಹಿಣಿ ತಿಳಿಸಿದ್ದಾರಂತೆ. ಕೊಲೆ ಮಾಡಲು ಬಂದಿದ್ದ ವ್ಯಕ್ತಿ ದಪ್ಪವಾಗಿದ್ದ, ಆದರೆ, ಆತ ಯಾರ ಅಂತಾ ಗೊತ್ತಿಲ್ಲ ಎಂದು ರೋಹಿಣಿ ಹೇಳಿದ್ದಾರೆ.


ಕೂಡಲೇ ಈ ಪ್ರಕರಣವನ್ನು ಪೊಲೀಸರು ಬೇಧಿಸಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಪ್ರವೀಣ್ ಹಾಗೂ ರೋಹಿಣಿ ದಂಪತಿಗೆ 10 ತಿಂಗಳ ಮಗು ಇದ್ದು, ತಂದೆ ಮತ್ತು ಅಜ್ಜಿಯನ್ನು ಕಳೆದುಕೊಂಡು ಅನಾಥವಾಗಿದೆ. ಪೊಲೀಸರು ಸೂಕ್ತ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

Published by:G Hareeshkumar
First published: