ಮಂಗಳೂರು; ದುಬೈ ಹೆಂಡತಿಗೆ ಕೈಕೊಟ್ಟು ಮರು ಮದುವೆಯಾಗಲು ಹೊರಟ ಭೂಪನಿಗೆ ಶಾಕ್ ಕೊಟ್ಟ ಅತ್ತೆ!

Mangalore News: ಮಂಗಳೂರಿನ ತೊಕ್ಕೊಟ್ಟಿನ ವೆಲೇರಿಯನ್ ಡಿಸೋಜನ ಹೆಂಡತಿ ವಿಲ್ಮಾ ಡಿಸೋಜ ದುಬೈನಲ್ಲಿ ಉದ್ದೋಗದಲ್ಲಿದ್ದರು. ಅವರಿಬ್ಬರಿಗೂ 4 ಮಕ್ಕಳಿದ್ದರು. ಆದರೂ ಬೇರೊಬ್ಬಳ ಮೇಲೆ ಆಕರ್ಷಿತನಾಗಿದ್ದ ವೆಲೇರಿಯನ್ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ, ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಗಳೂರು (ಫೆ. 27): ಆತನ ಹೆಂಡತಿ ದುಬೈನಲ್ಲಿದ್ದಳು. ಉದ್ಯೋಗದ ಕಾರಣಕ್ಕಾಗಿ ವಿದೇಶದಲ್ಲಿದ್ದ ಹೆಂಡತಿಗೆ ಗೊತ್ತಾಗದಂತೆ ಆತ ಎರಡನೇ ಮದುವೆಯಾಗಲು ನಿರ್ಧರಿಸಿದ್ದ. ಆದರೆ, ಈ ವಿಷಯ ಆತನ ಹೆಂಡತಿಗೆ ಗೊತ್ತಾಗಿತ್ತು. ಆದರೆ, ಅಷ್ಟರಲ್ಲಾಗಲೇ ಬಹಳ ತಡವಾಗಿತ್ತು. ರಾತ್ರಿ ಕಳೆದ ಬೆಳಗಾದರೆ ತನ್ನ ಗಂಡ ಬೇರೊಬ್ಬಳ ಗಂಡನಾಗುತ್ತಾನೆ ಎಂಬ ವಿಷಯ ತಿಳಿದರೂ ಆಕೆ ದುಬೈನಿಂದ ಇಲ್ಲಿಗೆ ಬಂದು ಮದುವೆ ನಿಲ್ಲಿಸುವುದು ಅಸಾಧ್ಯವಾಗಿತ್ತು. ತಕ್ಷಣ ತನ್ನ ಅಮ್ಮನಿಗೆ ಫೋನ್ ಮಾಡಿದ ಆಕೆ ಹೇಗಾದರೂ ಮಾಡಿ ತನ್ನ ಗಂಡನ ಮದುವೆಯನ್ನು ನಿಲ್ಲಿಸುವಂತೆ ಗೋಗರೆದಳು. ಅಳಿಯ ಬೇರೊಬ್ಬಳೊಂದಿಗೆ ಮದುವೆಯಾಗುವ ವಿಷಯ ತಿಳಿದು ಕೋಪಗೊಂಡ ಅತ್ತೆ ರಾತ್ರೋರಾತ್ರಿ ಪೊಲೀಸ್ ಠಾಣೆಗೆ ತೆರಳಿ, ಅಳಿಯನ ನಿಜರೂಪ ಬಯಲು ಮಾಡಿದಳು.

ಈ ಘಟನೆ ನಡೆದಿದ್ದು ದಕ್ಷಿಣ ಕನ್ನಡದಲ್ಲಿ. ಮಂಗಳೂರಿನ ತೊಕ್ಕೊಟ್ಟಿನ ವೆಲೇರಿಯನ್ ಡಿಸೋಜನ ಹೆಂಡತಿ ವಿಲ್ಮಾ ಡಿಸೋಜ ದುಬೈನಲ್ಲಿ ಉದ್ದೋಗದಲ್ಲಿದ್ದರು. ಅವರಿಬ್ಬರಿಗೂ 4 ಮಕ್ಕಳಿದ್ದರು. ಆದರೂ ಬೇರೊಬ್ಬಳ ಮೇಲೆ ಆಕರ್ಷಿತನಾಗಿದ್ದ ವೆಲೇರಿಯನ್ ಆಕೆಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದ್ದ. ಮಹಮ್ಮದ್ ಷರೀಫ್ ಎಂದು ಹೆಸರು ಬದಲಾಯಿಸಿಕೊಂಡು ಮುಸ್ಲಿಂ ಯುವತಿಯೊಂದಿಗೆ ಇಂದು ಮದುವೆಯಾಗಲು ಸಿದ್ಧತೆ ನಡೆಸಿದ್ದ.

mangalore man betrayed wife
ವೆಲೇರಿಯನ್ ಡಿಸೋಜಾ- ವಿಲ್ಮಾ ಡಿಸೋಜಾ


ಇದನ್ನೂ ಓದಿ: Bangalore Crime: ಬೆಂಗಳೂರಲ್ಲಿ ಪೊಲೀಸರ ಕಣ್ಣೆದುರೇ ಸಿನಿಮೀಯವಾಗಿ ರೌಡಿಶೀಟರ್ ಸ್ಲಂ ಭರತ್ ಪರಾರಿ!

ಹೆಂಡತಿಗೆ ಗೊತ್ತಾಗದಂತೆ ತಾನು ಮೆಚ್ಚಿದ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದ ವೆಲೇರಿಯನ್​ನ ಅಸಲಿ ವಿಷಯ ಆತನ ಸ್ನೇಹಿತರ ಮೂಲಕ ನಿನ್ನೆ ವಿಲ್ಮಾ ಡಿಸೋಜಾಗೆ ತಿಳಿಯಿತು. ಆಕೆಗೆ ತಿಳಿಯುವಷ್ಟರಲ್ಲಿ ಬಹಳ ತಡವಾಗಿತ್ತು. ಇಂದು ಮದುವೆ ಇದ್ದುದರಿಂದ ಆಕೆಗೆ ದುಬೈನಿಂದ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ತನ್ನ ಅಮ್ಮನಿಗೆ ಫೋನ್ ಮಾಡಿ, ವಿಷಯ ತಿಳಿಸಿದ ಆಕೆ ಈ ಮದುವೆ ನಿಲ್ಲಿಸಲು ಹಠ ಹಿಡಿದಿದ್ದರು.

ಇದನ್ನೂ ಓದಿ: ಎಸ್ಕೇಪ್ ಆಗಿದ್ದ ಸ್ಲಂ ಭರತ್​ ಮೇಲೆ ಬೆಂಗಳೂರು ಪೊಲೀಸರ ಫೈರಿಂಗ್; ಚಿಕಿತ್ಸೆ ಫಲಕಾರಿಯಾಗದೆ ರೌಡಿಶೀಟರ್ ಸಾವು

ನಿನ್ನೆ ರಾತ್ರಿ ಮಹಿಳಾ ಪೊಲೀಸ್ ಠಾಣೆಗೆ ತೆರಳಿದ್ದ ವಿಲ್ಮಾಳ ಅಮ್ಮ ಇಂದು ತೊಕ್ಕೊಟ್ಟಿನಲ್ಲಿ ನಡೆಯಬೇಕಾಗಿದ್ದಅಳಿಯನ ಮದುವೆಯನ್ನು ನಿಲ್ಲಿಸುವಂತೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಮಹಿಳಾ ಸಂಘಟನೆಗಳು ಮತ್ತು ಪೊಲೀಸ್ ಸಿಬ್ಬಂದಿ ಮದುವೆ ನಡೆಯಬೇಕಾಗಿದ್ದ ಸ್ಥಳಕ್ಕೆ ತೆರಳಿ ರಾತ್ರೋ ರಾತ್ರಿ ಮದುವೆ ನಿಲ್ಲಿಸಿದ್ದಾರೆ. ಅಲ್ಲದೆ, ಬೇರೆ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ವೆಲೇರಿಯನ್ ಬಳಿ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

 

 

 

 
First published: