Mandya: ಮಂಡ್ಯ ಅರ್ಚಕರ ಕೊಲೆ ಪ್ರಕರಣ; ಇದುವರೆಗೂ 9 ಆರೋಪಿಗಳ ಬಂಧನ

Mandya: ಮಂಡ್ಯ ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೂ ಬಂಧಿತರಾಗಿರುವ ಆರೋಪಿಗಳ ಸಂಖ್ಯೆ 9ಕ್ಕೇರಿದೆ.

news18-kannada
Updated:September 20, 2020, 8:47 AM IST
Mandya: ಮಂಡ್ಯ ಅರ್ಚಕರ ಕೊಲೆ ಪ್ರಕರಣ; ಇದುವರೆಗೂ 9 ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
  • Share this:
ಮಂಡ್ಯ (ಸೆ. 20): ಮಂಡ್ಯ ಜಿಲ್ಲೆಯ ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಪೂರ್ವ ಠಾಣಾ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೂ ಬಂಧಿತರಾಗಿರುವ ಆರೋಪಿಗಳ ಸಂಖ್ಯೆ 9ಕ್ಕೇರಿದೆ. ಬಂಧಿತರಿಂದ 4.7 ಲಕ್ಷ ರೂ. ನಗದು, 2 ಮೊಬೈಲ್, 2 ಬೈಕ್, 1 ವಾಹನವನ್ನು ಜಪ್ತಿ ಮಾಡಲಾಗಿದೆ. ಶಿವು, ಮಂಜು, ಶಿವರಾಜ, ಗಣೇಶ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಬಂಧಿತರಾಗಿದ್ದ ಆರೋಪಿಗಳ ಖಚಿತ ಮಾಹಿತಿ ಮೇರೆಗೆ ಮತ್ತೆ ಐವರನ್ನು ಬಂಧಿಸಲಾಗಿದೆ.

ಕಳೆದ ವಾರ ಕುಂಬಳಗೂಡು ಮಂಜು, ಆಂಧ್ರದ ವಿಜಯ್, ಅರೇಕಲ್ಲು ದೊಡ್ಡಿಯ ಚಂದ್ರ ಅಲಿಯಾಸ್ ಗಾಂಧಿ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ 9ರಿಂದ 10 ಜನರು ಭಾಗಿಯಾಗಿರುವ ಮಾಹಿತಿ ಲಭ್ಯವಾಗಿತ್ತು. ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮತ್ತೆ ಐವರನ್ನು ಬಂಧಿಸಿದ್ದಾರೆ. ಈ ಮೂಲಕ ಈ ಕೊಲೆ ಪ್ರಕರಣದಲ್ಲಿ 9 ಮಂದಿ ಬಂಧನಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದ ರೈತರಿಗೆ ಸಂಕಷ್ಟ; ಮಳೆಯಿಂದ ಕೊಳೆತು ತಿಪ್ಪೆ ಸೇರುತ್ತಿದೆ ಸಾವಿರಾರು ಚೀಲ ಈರುಳ್ಳಿ

ಮಂಡ್ಯದ ಶ್ರೀ ಅರ್ಕೇಶ್ವರ ದೇವಾಲಯದ ಪ್ರಾಂಗಣದಲ್ಲಿ ಮಲಗಿದ್ದ ಗಣೇಶ್ (35), ಪ್ರಕಾಶ್ (36) ಮತ್ತು ಆನಂದ್ (33) ಅವರನ್ನು ಕಳೆದ ವಾರ ಬೆಳಗ್ಗಿನ ಜಾವ ಹತ್ಯೆಗೈದು ಹುಂಡಿಯ ಹಣವನ್ನು ಕಳ್ಳತನ ಮಾಡಲಾಗಿತ್ತು. ಅವರು ದೇವಾಲಯದ ಅರ್ಚಕರು ಮತ್ತು ಕಾವಲುಗಾರರಾಗಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಮೂವರು ರಾತ್ರಿ ಗೋಪುರ ಮುಖ್ಯದ್ವಾರದ ಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಿಕೊಂಡು ಮಲಗಿದ್ದರು. ಉತ್ತರ ದಿಕ್ಕಿನ ಕಾಂಪೌಂಡ್ ಪಕ್ಕದಲ್ಲಿರುವ ಮರವನ್ನೇರಿ ದೇವಾಲಯದ ಒಳಗೆ ಪ್ರವೇಶಿಸಿರುವ ದರೋಡೆಕೋರರು ಮೊದಲು ಮೂವರನ್ನು ಕೊಲೆ ಮಾಡಿ ನಂತರ ಹುಂಡಿ ಒಡೆದಿದ್ದರು. ಬೆಳಗ್ಗೆ ಬೇರೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಈ ಕೊಲೆಯ ವಿಚಾರ ಬಯಲಾಗಿತ್ತು. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಿಸಿತ್ತು.

ಈ ಕೃತ್ಯದಲ್ಲಿ ಇನ್ನು ಹಲವರು ಭಾಗಿಯಾಗಿರುವ ಅನುಮಾನವಿದೆ. ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕಳೆದ ಮೂರು ದಿನದ ಹಿಂದಷ್ಟೆ ಪೊಲೀಸರು ಐವರನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
Published by: Sushma Chakre
First published: September 20, 2020, 8:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading