ಪರೀಕ್ಷೆ ಬರೆಯಬೇಕಿದ್ದ ಕಲಬುರ್ಗಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!

ಜೂನ್  24 ರ ರಾತ್ರಿ ಅತ್ಯಾಚಾರ ಯತ್ನ ಪ್ರಕರಣ ನಡೆದಿದೆ. ಲಾಕ್ ಡೌನ್ ಕಾರಣ ಮುಂಬೈನಿಂದ ಮರಳಿ ಬಂದ ರಾಮ್ ಚವ್ಹಾಣ ಎನ್ನುವ ವಿವಾಹಿತ ಯುವಕನಿಂದ ಹೀನ ಕೃತ್ಯ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಲಬುರ್ಗಿ (ಜೂ. 27): ಎಸ್ಎಸ್ಎಲ್​ಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ಹೊನಬಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷೆಗಾಗಿ ಮನೆ ಅಂಗಳದಲ್ಲಿ ತಡ ರಾತ್ರಿವರೆಗೂ ಓದುತ್ತಿದ್ದ ವಿದ್ಯಾರ್ಥಿನಿಯ ಬಾಯಿ ಮುಚ್ಚಿ ಪಕ್ಕದ ನಿರ್ಜನ ಸ್ಥಳಕ್ಕೆಹೊತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಲಾಗಿದೆ.

ತನ್ನನ್ನು ಅಪಹರಿಸಿದ್ದಕ್ಕೆ ಬಾಲಕಿ ಕೂಗಿಕೊಂಡಾಗ ನೆರೆಹೊರೆಯವರು ಬಂದು ರಕ್ಷಣೆ ಮಾಡಿದ್ದಾರೆ. ಜೂನ್  24 ರ ರಾತ್ರಿ ಅತ್ಯಾಚಾರ ಯತ್ನ ಪ್ರಕರಣ ನಡೆದಿದೆ. ಲಾಕ್ ಡೌನ್ ಕಾರಣ ಮುಂಬೈನಿಂದ ಮರಳಿ ಬಂದ ರಾಮ್ ಚವ್ಹಾಣ ಎನ್ನುವ ವಿವಾಹಿತ ಯುವಕನಿಂದ ಹೀನ ಕೃತ್ಯ ನಡೆದಿದೆ. ಜೂನ್ 24 ರ ರಾತ್ರಿಯೇ ಪೋಷಕರು ಪೊಲಿಸರಿಗೆ ದೂರು ನೀಡಿದ್ದಾರೆ. 25 ರಂದು ಎಸ್​ಎಸ್​ಎಲ್​ಸಿ ಮೊದಲ ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾಗಿದ್ದಾಳೆ.

ಇದನ್ನೂ ಓದಿ: ಗುಮ್ಮಟ ನಗರಿಯಲ್ಲಿ ಮಾಜಿ ಶಾಸಕನಿಗೂ ಕೊರೋನಾ; ಸೋಂಕಿತರ ನಿವಾಸ ಸೀಲ್​ಡೌನ್ ಯಾಕಿಲ್ಲ?

ಇಂದು ನಡೆಯುತ್ತಿರುವ ಗಣಿತ ಪರೀಕ್ಷೆಯೂ ಹಾಜರಾಗಿದ್ದಾಳೆ. ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ರಾಮ್ ಚವ್ಹಾಣನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Kalburgi Man Attempted to Rape SSLC Student.
ಅತ್ಯಾಚಾರಕ್ಕೆ ಪ್ರಯತ್ನಿಸಿದ ಯುವಕ


ಬೇರೊಬ್ಬನನ್ನು ಪರೀಕ್ಷೆಗೆ ಕೂರಿಸಿ ಸಿಕ್ಕಿಬಿದ್ದ ಭೂಪರು:

ಎಸ್​ಎಸ್​ಎಲ್​ಸಿ ಪರೀಕ್ಷೆಯ ಮೊದಲ ದಿನವೇ ಕೆಲ ವಿದ್ಯಾರ್ಥಿಗಳು ಕಲಬುರ್ಗಿಯಲ್ಲಿ ಕಳ್ಳಾಟ ಮಾಡಿರೋ ಅಂಶ ಬಯಲಿಗೆ ಬಂದಿದೆ. ಗುರುವಾರ ನಡೆದ ಮೊದಲ ಪರೀಕ್ಷೆಯಲ್ಲಿ ತಮ್ಮ ಬದಲು ಬೇರೆ ಅಭ್ಯರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಯಿಸಿದ ಅಂಶ ಬೆಳಕಿಗೆ ಬಂದಿದೆ. ಈ ಸಂಬಂಧ 14 ವಿದ್ಯಾರ್ಥಿಗಳ ವಿರುದ್ಧ ಎಪ್ ಐ ಆರ್ ದಾಖಲಿಸಲು ಕಲಬುರ್ಗಿ ಶಿಕ್ಷಣ ಇಲಾಖೆಯ ಉಪ ಆಯುಕ್ತ ನಳೀನ್ ಅತುಲ್ ಆದೇಶಿಸಿದ್ದಾರೆ.

ಇದನ್ನೂ ಓದಿ: ಮೂರೂವರೆ ರೂಪಾಯಿ ಸಾಲಕ್ಕಾಗಿ ರೈತನನ್ನು 15 ಕಿ.ಮೀ. ನಡೆಸಿದ ಶಿವಮೊಗ್ಗ ಬ್ಯಾಂಕ್ ಸಿಬ್ಬಂದಿ!

ಏಳು ವಿದ್ಯಾರ್ಥಿಗಳ ತಮ್ಮ ಬದಲು ನಕಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸಿದ್ದರು. ಆಯುಕ್ತ ನಳೀನ್ ಅತುಲ್ ಪರೀಕ್ಷಾ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿದಾಗ ಬೆಳಕಿಗೆ ಬಂದಿತ್ತು. ಕಲಬುರ್ಗಿ ನಗರದ ಜೇವರ್ಗಿ ಕಾಲೋನಿಯ ಸರ್ಕಾರಿ ಪ್ರೌಢ ಶಾಲೆಯ ಕೇಂದ್ರದಲ್ಲಿ ಮೂವರು ಹಾಗೂ ಕಲಬುರಗಿ ತಾಲೂಕಿನ ಕೋಟನೂರ (ಡಿ) ಗ್ರಾಮದ ಸೇಂಟ್ ಮೇರಿ ಪ್ರೌಢ ಶಾಲೆಯ ಕೇಂದ್ರದಲ್ಲಿ ನಾಲ್ವರು ಅಭ್ಯರ್ಥಿಗಳು ತಮ್ಮ ಬದಲಿಗೆ ಬೇರೊಬ್ಬರನ್ನು ಕೂರಿಸಿ ಪರೀಕ್ಷಾ ಅಕ್ರಮ ಎಸಗಿದ್ದರು.ಅಧಿಕೃತ ಅಭ್ಯರ್ಥಿಗಳ ಬದಲಾಗಿ ಮತ್ತೊಬ್ಬರು ಕುಳಿತುಕೊಂಡಿದ್ದು ಪತ್ತೆಯಾಗಿತ್ತು. ತಮ್ಮ ಬದಲಿಗೆ ಬೇರೆಯವರನ್ನು ಕೂರಿಸಿದ ಅಭ್ಯರ್ಥಿಗಳು ಹಾಗೂ ಪರೀಕ್ಷೆಗೆ ಕುಳಿತ ನಕಲಿ ಅಭ್ಯರ್ಥಿಗಳ ವಿರುದ್ಧವೂ ಎಫ್‍ಐಆರ್ ದಾಖಲಿಸಲು ಡಿಡಿಪಿಐಗೆ ಶಿಕ್ಷಣ ಇಲಾಖೆ ಉಪ ಆಯುಕ್ತ ನಳೀನ್ ಅತೂಲ್ ಸೂಚಿಸಿದ್ದಾರೆ.
First published: