ಜಿಗಣಿ ಪೊಲೀಸರ ಮಿಂಚಿನ ಕಾರ್ಯಾಚರಣೆ : ಅಂತರ ರಾಜ್ಯ ಅಕ್ರಮ ಗಾಂಜಾ ಮಾರಾಟಗಾರರ ಬಂಧನ

ಬಂಧಿತರಿಂದ ಸುಮಾರು ಐದು ಲಕ್ಷ ಮೌಲ್ಯದ 10 ಕೆ ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಗೆ ಅಂತರ ರಾಜ್ಯ ಪೆಡ್ಲರ್​​ಗಳ ಲಿಂಕ್ ಇರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

news18-kannada
Updated:October 7, 2020, 8:23 PM IST
ಜಿಗಣಿ ಪೊಲೀಸರ ಮಿಂಚಿನ ಕಾರ್ಯಾಚರಣೆ : ಅಂತರ ರಾಜ್ಯ ಅಕ್ರಮ ಗಾಂಜಾ ಮಾರಾಟಗಾರರ ಬಂಧನ
ಗಾಂಜಾ ಸೊಪ್ಪು
  • Share this:
ಆನೇಕಲ್(ಅಕ್ಟೋಬರ್​. 07): ತಮಿಳುನಾಡು ಸೇರಿದಂತೆ ಹಲವು ಕಡೆಯಿಂದ ಗಾಂಜಾ ತಂದು ಅಕ್ರಮವಾಗಿ ಮಾರಾಟ ಮಾಡಿ, ಪದೇ ಪದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಮಾಲು ಸಮೇತ ಪರಾರಿ ಆಗುತ್ತಿದ್ದವರನ್ನು ಪೊಲೀಸರು ಹಿಡಿದು ಜೈಲಿಗೆ ಕಳುಹಿಸಿದ್ದಾರೆ.  ಖ್ಯಾತ ಅಂತರ ರಾಜ್ಯ ಗಾಂಜಾ ಪೆಡ್ಲರ್​ಗಳಾದ ಕೃಷ್ಣಗಿರಿ ಮೂಲದ ಮುನಿರಾಜು ಅಲಿಯಾಸ್ ಸಿನ್ನಬ್ಬಯ್ಯ ಮತ್ತು ಅಸ್ಸಾಂ ಮೂಲದ ಧೀರೇನ್ ಬಂಧಿತ ಆರೋಪಿಗಳು. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸರ ಕೈ ಸಿಕ್ಕಿ ಬಿದ್ದಿದ್ದಾರೆ. ಇವರಿಬ್ಬರು ತಮಿಳುನಾಡು, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಿಂದ ಗಾಂಜಾ ತಂದು ಬೆಂಗಳೂರು ನಗರ ಮತ್ತು ಹೊರವಲಯದ ಆಯಕಟ್ಟಿನ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಇಂದು ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಮಂಗಲ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ದೊರೆಯುತ್ತದೆ.

ಕೂಡಲೇ ಕಾರ್ಯ ಪ್ರವೃತ್ತರಾದ ಜಿಗಣಿ ಇನ್ಸ್​​​ಪೆಕ್ಟರ್ ವಿಶ್ವನಾಥ್ ಮತ್ತು ತಂಡ ಕಾರ್ಯಚರಣೆಗಿಳಿದು ಹುಲಿಮಂಗಲ ಮೀನಾಕ್ಷಿ ರೆಸಾರ್ಟ್ ಬಳಿ ಮಾಲು ಸಮೇತ ಆರೋಪಿಗಳು ಇರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಮಫ್ತಿಯಲ್ಲಿ ಗಾಂಜಾ ಖರೀದಿಸುವ ನೆಪದಲ್ಲಿ ಎಂಟ್ರಿ ಕೊಡುತ್ತಾರೆ. ಮಾಲು ಮಾರಾಟ ತರಾತುರಿಯಲ್ಲಿದ್ದ ಆರೋಪಿಗಳ ಮೇಲೆ ಪೊಲೀಸರು ದಾಳಿ‌ ನಡೆಸುತ್ತಾರೆ. ಈ ವೇಳೆ ಇಬ್ಬರನ್ನು ಮಾತ್ರ ಬಂಧಿಸಲಾಗುತ್ತದೆ. ಓರ್ವ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಾನೆ.

ಬಂಧಿತರಿಂದ ಸುಮಾರು ಐದು ಲಕ್ಷ ಮೌಲ್ಯದ 10 ಕೆ ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಗೆ ಅಂತರ ರಾಜ್ಯ ಪೆಡ್ಲರ್​​ಗಳ ಲಿಂಕ್ ಇರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಅಂತರರಾಷ್ಟ್ರೀಯ ಮೆಗಾ ಏರ್ ಶೋ ಕಾರ್ಯಕ್ರಮಕ್ಕೆ 13ನೇ ಬಾರಿಗೆ ಒಲಿದು ಬಂದ ಆತಿಥ್ಯ- ನಮ್ಮ ರಾಜ್ಯಕ್ಕೊಂದು ಹೆಮ್ಮೆ: ಸಿಎಂ ಯಡಿಯೂರಪ್ಪ

ಒಟ್ಟಿನಲ್ಲಿ ಡ್ರಗ್ಸ್ ಜಾಲ ಸ್ಯಾಂಡಲ್ ವುಡ್ ಜೊತೆ ನಂಟಿರುವುದು ಪತ್ತೆಯಾಗುತ್ತಿದ್ದಂತೆ ದಿನಕ್ಕೊಂದು ಗಾಂಜಾ ಮತ್ತು ಡ್ರಗ್ಸ್ ಪ್ರಕರಣಗಳು ಹೊರ ಬರುತ್ತಿದ್ದು, ಇನ್ನೂ ಅದೆಷ್ಟು ಮಂದಿ ಗಾಂಜಾ ಗಮ್ಮತ್ತಿನ ಲೋಕದಲ್ಲಿ ನಶೆ ಏರಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ.

ಸದ್ಯ ಜಿಗಣಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಇಬ್ಬರು ಆರೋಪಿಗಳು ಬಂಧನ ಆಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿ ಮುದ್ದೆ ಮುರಿಯುತ್ತಿದ್ದಾರೆ.
Published by: G Hareeshkumar
First published: October 7, 2020, 8:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading