• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಗದಗದಲ್ಲಿ 3 ವರ್ಷದ ಕಂದನನ್ನು ಕೊಲೆ ಮಾಡಿದನಾ ತಂದೆ?; ನಿಜಕ್ಕೂ ಆಗಿದ್ದೇನು?

ಗದಗದಲ್ಲಿ 3 ವರ್ಷದ ಕಂದನನ್ನು ಕೊಲೆ ಮಾಡಿದನಾ ತಂದೆ?; ನಿಜಕ್ಕೂ ಆಗಿದ್ದೇನು?

ಮೃತ ಭುವನೇಶ್ವರಿ ಜೊತೆ ಆರೋಪಿ ತಂದೆ

ಮೃತ ಭುವನೇಶ್ವರಿ ಜೊತೆ ಆರೋಪಿ ತಂದೆ

ಭುವನೇಶ್ವರಿಯ ತಾಯಿ ಕವಿತಾ, ನನ್ನ ಪತಿ ಗಣೇಶ ಕೊಲೆ ಮಾಡುವಷ್ಟು ಕ್ರೂರಿ ಅಲ್ಲ. ಆತ ನಮ್ಮ‌ ಮೂವರು ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ, ಅಣ್ಣಿಗೇರಿ ಪೊಲೀಸರು ನನ್ನಿಂದ ಸಹಿ ಮಾಡಿಸಿಕೊಂಡು ನನ್ನ ಗಂಡನನ್ನೆ ಕೊಲೆ‌ ಆರೋಪಿಯನ್ನಾಗಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಗದಗ (ಫೆ. 27): ಅದೆಷ್ಟೋ ದಂಪತಿಗಳು ಮಕ್ಕಳು ಬೇಕೆಂದು ದೇವರಿಗೆ ಹರಕೆ ಹೊರುತ್ತಾರೆ. ಮಗು ಹೇಗೆಯೇ ಇರಲಿ ಹೆತ್ತವರಿಗೆ ಹೆಗ್ಗಣವೇ ಮುದ್ದು ಎಂಬ ಗಾದೆಯಂತೆ ಮಕ್ಕಳನ್ನು ಅಪ್ಪಿಕೊಂಡು ಮುದ್ದಾಡುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಫಿಟ್ಸ್ ಕಾಯಿಲೆ ಇದೆ ಎಂದು ತನ್ನ ಕೈಯಾರೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಹೌದು, ಇಂತಹದೊಂದು ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿಯಾದ ಗಣೇಶ ಮಡಿವಾಳರ ಎನ್ನುವ ತಂದೆಯೇ ಕೊಲೆ ಮಾಡಿರೋ ಆರೋಪವನ್ನು ಎದುರಿಸುತ್ತಿದ್ದಾನೆ. ಅಂದಹಾಗೇ ಗಣೇಶ ಹಾಗೂ ಕವಿತಾ ದಂಪತಿಗಳಿಗೆ ಎರಡು ಹೆಣ್ಣು, ಒಂದು ಗಂಡು ಮಗ ಇದ್ದಾನೆ. ಆದರೆ, ಎರಡನೇ ಮಗಳಾದ 3 ವರ್ಷದ ಭುವನೇಶ್ವರಿಗೆ ಮೂರ್ಛೆ ರೋಗ ಬರುತ್ತಿತ್ತು.


ಹೀಗಾಗಿ, ಭುವನೇಶ್ವರಿಯ ಆಸ್ಪತ್ರೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದನಂತೆ. ಮತ್ತೆ 2021 ಜನವರಿ 11ರಂದು ಮಗುವಿಗೆ ಫಿಟ್ಸ್ ಬಂದಾಗ ತಂದೆ ಗಣೇಶ ಗದಗ ಜಿಮ್ಸ್ ಆಸ್ಪತ್ರೆ ಕರೆದುಕೊಂಡು ಬಂದಿದ್ದ. ವೈದ್ಯರು ಸಣ್ಣ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಆಗ ಜಿಮ್ಸ್ ಆಸ್ಪತ್ರೆಯಿಂದ ಹೆರಿಗೆ ಆಸ್ಪತ್ರೆಗೆ ಬರುವ ಮಾರ್ಗ ಮದ್ಯ ಮಲ್ಲಸಮುದ್ರ ಕ್ರಾಸ್ ಬಳಿ ಭುವನೇಶ್ವರಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ನಂತರ ಮಗುವನ್ನು ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮಗು ಸಾವನ್ನಪ್ಪಿತ್ತು. ವೈದ್ಯರು ಮಗುವಿನ ಶವವನ್ನು ಜಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಹೇಳಿದ್ದರು. ಆಗ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದರು.


ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿ ಆತ್ಮಹತ್ಯೆಗೆ ಶರಣು


ಆದರೆ, ಈ ಪ್ರಕರಣ ಗದಗದ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಅಣ್ಣಿಗೇರಿಯಿಂದ ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು,  ಪ್ರಕರಣದ ತನಿಖೆ ನಡೆಸುತ್ತೇವೆ ಎನ್ನುತ್ತಾರೆ ಗದಗ ಎಸ್​ಪಿ ಯತೀಶ್ ಎನ್. ಇನ್ನೂ ಜನವರಿ 11ರಂದು ಗದಗ ಜಿಲ್ಲೆಯ ಹೊಸಳ್ಳಿ ಗ್ರಾಮದಿಂದ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣಕ್ಕೆ ಗಣೇಶ್ ಹಾಗೂ ಕವಿತಾ ದಂಪತಿಗಳು ಶುಭ ಕಾರ್ಯಕ್ಕೆ ಹೋಗಿರುತ್ತಾರೆ. ಆ ವೇಳೆಯಲ್ಲಿ ಭುವನೇಶ್ವರಿ ಫಿಟ್ಸ್ ಬಂದಾಗ ಗಣೇಶ ಅವಳನ್ನು ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿರುತ್ತಾನೆ‌. ಈ ಸಂದರ್ಭದಲ್ಲಿ ಭುವನೇಶ್ವರಿ ಕೊಲೆಯಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಅಣ್ಣಿಗೇರಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು.


ಆದರೆ ಭುವನೇಶ್ವರಿಯ ತಾಯಿ ಕವಿತಾ, ನನ್ನ ಪತಿ ಗಣೇಶ ಕೊಲೆ ಮಾಡುವಷ್ಟು ಕ್ರೂರಿ ಅಲ್ಲ. ಆತ ನಮ್ಮ‌ ಮೂವರು ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ ಅಣ್ಣಿಗೇರಿ ಪೊಲೀಸರು ನನ್ನಿಂದ ಸಹಿ ಮಾಡಿಸಿಕೊಂಡು ನನ್ನ ಗಂಡನನ್ನೆ ಕೊಲೆ‌ ಆರೋಪಿಯನ್ನಾಗಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಹಾಗೇ, ಗಣೇಶನ ಕುಟುಂಬಸ್ಥರು ಈ ಕೊಲೆಯನ್ನು ಗಣೇಶ ಮಾಡಿಲ್ಲ ಎಂದು ವಾದ ಮಾಡುತ್ತಿದ್ದಾರೆ.


ಒಟ್ಟಿನಲ್ಲಿ ಹೆತ್ತ ಮಗುವನ್ನು ಸಾಕಿ‌ ಸಲಹಬೇಕಾದ ತಂದೆಯೇ ತನ್ನ ಕೈಯಾರೆ ತನ್ನ ಕಂದಮ್ಮಳನ್ನು ಕೊಲೆ ಮಾಡಿರುವ‌ ಆರೋಪ ಎದುರಿಸುತ್ತಿದ್ದಾನೆ. ಮತ್ತೊಮ್ಮೆ ಗದಗ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದು, ಸತ್ಯಾಸತ್ಯತೆ ಹೊರಗಡೆ ಬರಬೇಕಾಗಿದೆ.‌


(ವರದಿ: ಸಂತೋಷ ಕೊಣ್ಣೂರ)

First published: