HOME » NEWS » State » CRIME NEWS GOLD MERCHANT SON MURDERS BY JEWELRY SHOP EMPLOYEE IN YADAGIRI NMPG SCT

Yadagiri Murder: ಯಾದಗಿರಿಯಲ್ಲಿ ಹಾಡಹಗಲೇ ಚಿನ್ನದ ವ್ಯಾಪಾರಿಯ ಮಗನ ಬರ್ಬರ ಹತ್ಯೆ

Yadagiri Murder: ಯಾದಗಿರಿ ಜಿಲ್ಲೆಯ ಹುಣಸಗಿಯ ವ್ಯಾಪಾರಿ ಜಗದೀಶ ಚಿನ್ನದ ವ್ಯಾಪಾರ ಮಾಡಿಕೊಂಡು ತನ್ನ ನಾಲ್ಕು ಮಕ್ಕಳೊಂದಿಗೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದರು. ಆದರೆ, ಅವರ ಎರಡನೇ ಪುತ್ರ ನರೇಂದ್ರ ಈಗ ಕೊಲೆಯಾಗಿದ್ದಾನೆ.

news18-kannada
Updated:January 14, 2021, 7:46 AM IST
Yadagiri Murder: ಯಾದಗಿರಿಯಲ್ಲಿ ಹಾಡಹಗಲೇ ಚಿನ್ನದ ವ್ಯಾಪಾರಿಯ ಮಗನ ಬರ್ಬರ ಹತ್ಯೆ
ಚಿನ್ನದ ವ್ಯಾಪಾರಿಯ ಮಗ
  • Share this:
ಯಾದಗಿರಿ (ಜ. 14): ಸಂಕಷ್ಟ ಕಾಲದಲ್ಲಿ ಉದ್ಯೋಗ ನೀಡಿ ಆಶ್ರಯವಾದ ಚಿನ್ನದ ವ್ಯಾಪಾರಿಯ ಮಗನನ್ನೇ ಅಂಗಡಿಯಲ್ಲಿ ಕೆಲಸ ಮಾಡುವ ನೌಕರ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹಾಡಹಗಲೇ ಉದ್ಯಮಿಯ ಮಗನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿಯ ಬಸ್ ನಿಲ್ದಾಣ ಸಮೀಪದಲ್ಲಿ ಈ ದುರ್ಘಟನೆ ಜರುಗಿದೆ. ಹುಣಸಗಿ ಪಟ್ಟಣದ ಚಿನ್ನದ ವ್ಯಾಪಾರಿ ಜಗದೀಶ ಚಿನ್ನದ ವ್ಯಾಪಾರ ಮಾಡಿಕೊಂಡು ತನ್ನ ನಾಲ್ಕು ಮಕ್ಕಳೊಂದಿಗೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದರು. ಆದರೆ, ಅವರ ಎರಡನೇ ಪುತ್ರ ನರೇಂದ್ರ ಈಗ ಕೊಲೆಯಾಗಿದ್ದಾನೆ. 5 ವರ್ಷದ ಹಿಂದೆ ಕೆಲಸ ಕೊಡಿ, ನನಗೆ ಬಹಳ ಕಷ್ಟವಿದೆ ಎಂದು ಚಿನ್ನದ ವ್ಯಾಪಾರಿ ಜಗದೀಶ್ ಗೆ ತನ್ನ ಸಂಕಷ್ಟದ ಬಗ್ಗೆ ಕಿಶೋರ್ ಕೇಳಿಕೊಂಡಿದ್ದ.

ಕಿಶೋರ್​ನ  ಸಂಕಷ್ಟವನ್ನು ಆಲಿಸಿದ ವ್ಯಾಪಾರಿ ಜಗದೀಶ್ ಕಿಶೋರ್ ನನ್ನು ಕೆಲಸಕ್ಕೆ ಪಡೆದು ಉತ್ತಮ ಸಂಬಳ ನೀಡುತ್ತಿದ್ದರು. ಆದರೆ, ಈಗ ಅಂಗಡಿಯಲ್ಲಿ ಕೆಲಸ ಮಾಡುವ ಕಿಶೋರನೇ ಕೊಲೆ ಮಾಡಿರುವ ಬಗ್ಗೆ ಅನುಮಾನ ಕಾಡುತ್ತಿದೆ. ಜಗದೀಶನ ಮಗ ನರೇಂದ್ರ ನಿನ್ನೆ ಮನೆಯಲ್ಲಿದ್ದ ವೇಳೆ ಚಿನ್ನದ ಅಂಗಡಿಯಿಂದ ಕಿಶೋರ್ ಮಧ್ಯಾಹ್ನ ಜಗದೀಶ್ ಅವರ ಮನೆಗೆ ಆಗಮಿಸಿ ಜಗದೀಶ್ ನ ಪುತ್ರ ನರೇಂದ್ರನನ್ನು  ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿ‌ ಮನೆಯಲ್ಲಿದ್ದ 1.5 ಕೆಜಿ  ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಹಾಡಹಗಲೇ ನಡೆದ ಕೃತ್ಯ:

ಹಾಡಹಗಲೇ  ಉದ್ಯಮಿಯ ಮಗನ‌ ಕೊಲೆ ಘಟನೆ ಜರುಗಿದ್ದು, ಹುಣಸಗಿ ಪಟ್ಟಣದ ಜನ ಭಯಗೊಂಡಿದ್ದಾರೆ. ಆರಂಭದಲ್ಲಿ ಉದ್ಯಮಿಯ‌ ಪುತ್ರನನ್ನು ಕೊಲೆ ಮಾಡಿ ಯಾರು ಪರಾರಿಯಾಗಿದ್ದಾರೆ, ಈ ದುಷ್ಕತ್ಯ ಎಸಗಿದ್ದವರು ಯಾರು? ಯಾವ ದ್ವೇಷದಿಂದ ಕೊಲೆ ಮಾಡಿದ್ದರು? ಎಂಬ ಹಲವಾರು ಅನುಮಾನಗಳು ಪೊಲೀಸರನ್ನು ಕಾಡುತಿತ್ತು. ಅವರ ಅಂಗಡಿಯಲ್ಲಿ  ಕೆಲಸ ಮಾಡುತ್ತಿದ್ದ ಕಿಶೋರ್ ಅವನನ್ನು ಕೂಡ ಕಿಡ್ನಾಪ್ ಮಾಡಲಾಗಿದೆ ಎಂದು ಕಿಶೋರ್ ನ ಕುಟುಂಬಸ್ಥರ ಆರೋಪವಾಗಿದೆ. ಆದರೆ, ಬಲ್ಲ ಮೂಲಗಳ ಪ್ರಕಾರ ಕಿಶೋರನೇ ಚಿನ್ನಾಭರಣದ ವಿಚಾರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆಂದು ಶಂಕಿಸಲಾಗಿದೆ.

ಸ್ಥಳಕ್ಕೆ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಡಿವೈಎಸ್ಪಿ ವೆಂಕಟೇಶ , ಸಿಪಿಐ ದೌಲತ್ ಕುರಿ, ಪಿಎಸ್ ಐ ಬಾಪುಗೌಡ ಅವರು ಭೇಟಿ ನೀಡಿ‌ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಆಕ್ರಂದನ ಮುಗಿಲು‌ ಮುಟ್ಟಿದೆ. ಈ ಬಗ್ಗೆ ಪೊಲೀಸರು ಕೊಲೆಗಡುಕರನ್ನು ಪತ್ತೆ ಹಚ್ಚಿ ಜೈಲಿಗಟ್ಟುವ ಕೆಲಸ ಮಾಡಬೇಕಿದೆ.

ಹೊಸ ವರ್ಷದ ಜನವರಿ ತಿಂಗಳಲ್ಲಿ ಪದೆ ಪದೇ ಕೊಲೆ ಘಟನೆಗಳು ಜರುಗುತ್ತಿರುವುದರಿಂದ ಯಾದಗಿರಿ ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಇತ್ತೀಚೆಗೆ ಯಾದಗಿರಿ ನಗರದಲ್ಲಿ ನಡೆದ ಮಹಿಳೆಯ ಕೊಲೆ, ಗಾಜಕೋಟ್ ನಲ್ಲಿ ಮಹಿಳೆ ಕೊಲೆ ಘಟನೆಗಳ ನಂತರ ಈಗ ಮತ್ತೆ ಈ‌ ಕೊಲೆ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ.
Published by: Sushma Chakre
First published: January 14, 2021, 7:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading