news18-kannada Updated:January 16, 2021, 10:03 AM IST
ಮೃತಪಟ್ಟ ಗೃಹಿಣಿ ಹಾಗೂ ಆಕೆಯ ಗಂಡ
ಗದಗ (ಜ. 16): ಗದಗ ತಾಲೂಕಿನ ಶಿರುಂಜ ಗ್ರಾಮದಲ್ಲಿ ನಡೆಯ ಬಾರದ ಘಟನೆಯೊಂದು ನಡೆದು ಹೋಗಿದೆ. ಮನೆಯ ಗೃಹಿಣಿಯ ಶವವನ್ನು ನೋಡಿ ಇಡೀ ಗ್ರಾಮವೇ ಬೆಚ್ಚಿ ಬಿದ್ದಿತ್ತು. ಹೌದು, ಹುಡೇದ ಎನ್ನುವವರ ಮನೆಯಲ್ಲಿ ನಡೆಯ ಬಾರದ ಘಟನೆ ನಡೆದು ಹೋಗಿತ್ತು. ಅಂದಹಾಗೆ ಈ ದಂಪತಿಗಳು ಕಳೆದ 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಎಸ್ಎಸ್ಎಲ್ಸಿ ಓದುತ್ತಿರುವ ಓರ್ವ ಮಗ, ಪಿಯುಸಿ ಓದುತ್ತಿರುವ ಒಂದು ಮಗಳು ಕೂಡ ಇದ್ದಾರೆ. ಆದರೆ, ಇವರ ಮನೆಯ ಯಜಮಾನಿ 37 ವರ್ಷದ ಮಲ್ಲಮ್ಮ ಹುಡೇದ್ ಎನ್ನುವವರ ಶವ ಪತ್ತೆಯಾಗಿದ್ದು, ಇದು ಕೊಲೆಯೋ, ಆತ್ಮಹತ್ಯೆಯೋ ಎನ್ನುವ ಗೊಂದಲ ನಿರ್ಮಾಣವಾಗಿದೆ.
ಮನೆಯ ಒಂದು ಕೋಣೆಯಲ್ಲಿ ಮಲ್ಲಮ್ಮಳ ಶವವನ್ನು ಹಾಕಲಾಗಿತ್ತು. ಅಕ್ಕಪಕ್ಕದ ಮನೆಯವರು ನೋಡಿ ಮುಳಗುಂದ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಬಂದು ನೋಡಿದಾಗ ಮನೆಯ ಕೋಣೆಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮಲ್ಲಮ್ಮಳನ್ನು ಕೊಲೆ ಮಾಡಿ ನಂತರ ಶವವನ್ನು ಕೋಣೆಯಲ್ಲಿ ಹಾಕಲಾಗಿದೆ. ಇದು ಪಕ್ಕಾ ಕೊಲೆ, ಈ ಕೊಲೆಯನ್ನು ಮಲ್ಲಮ್ಮಳ ಗಂಡ ನಿಂಗಪ್ಪ ಮಾಡಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಇನ್ನು, ಮಲ್ಲಮ್ಮ ಹಾಗೂ ನಿಂಗಪ್ಪ ದಂಪತಿಗಳು ನಡುವೆ ಹಲವು ವರ್ಷಗಳಿಂದ ಕಲಹ ಉಂಟಾಗಿತ್ತು. ನಿತ್ಯ ನಿಂಗಪ್ಪ ಹುಡೇದ ಮದ್ಯ ಸೇವನೆ ಮಾಡಿಕೊಂಡು ಬಂದು ಮಲ್ಲಮ್ಮಳನ್ನು ಹೊಡೆಯೋದು ಬಡೆಯೋದು ಮಾಡುತ್ತಿದ್ದನಂತೆ. ಮಲ್ಲಮ್ಮಳ ಮೇಲೆ ಸಂಶಯ ವ್ಯಕ್ತಪಡಿಸಿ, ಅವಳನ್ನು ಮನೆಯಿಂದ ಹೊರಗಡೆ ಸಹ ಬಾರದಂತೆ ನೋಡಿಕೊಳ್ಳುತ್ತಿದ್ದನಂತೆ. ಹೀಗಾಗಿ, ಮಲ್ಲಮ್ಮ ಗಂಡನ ಕಿರುಳಕ್ಕೆ ಬೇಸತ್ತು ಹೋಗಿದ್ದಳು. ಗ್ರಾಮಸ್ಥರು ಕೂಡ ರಾಜಿ ಪಂಚಾಯತಿ ಮಾಡಿದ್ದರೂ ಕೂಡ ನಿಂಗಪ್ಪನ ಕಿರುಕುಳ ಮುಂದುವರೆದಿತ್ತು. ಮಕ್ಕಳ ಮುಖವನ್ನು ನೋಡಿಕೊಂಡು ಮಲ್ಲಮ್ಮ ಸಂಸಾರದ ರಥವನ್ನು ಎಳೆದುಕೊಂಡು ಹೋಗುತ್ತಿದ್ದಳು.
ಇದನ್ನೂ ಓದಿ: Covid-19 Vaccine: ಬೆಂಗಳೂರಿನ ಎಲ್ಲೆಲ್ಲಿ ಇಂದು ಕೊರೋನಾ ಲಸಿಕೆ ಲಭ್ಯ?; ಇಲ್ಲಿದೆ ಪೂರ್ತಿ ಮಾಹಿತಿ
ಆದರೆ, ಅವಳು ಆತ್ಮಹತ್ಯೆ ಮಾಡಿಕೊಳ್ಳವಷ್ಟು ಹೇಡಿಯಲ್ಲ, ಇಷ್ಟೊಂದು ವರ್ಷ ಗಂಡನ ಕಿರುಕುಳ ಸಹಿಸಿಕೊಂಡಿದ್ದಾಳೆ. ಈಗ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ, ಗಂಡ ನಿಂಗಪ್ಪ ಕುಡಿದು ಮಲ್ಲಮ್ಮಳನ್ನು ಕೊಲೆ ಮಾಡಿ ನಂತರ ಶವವನ್ನು ಕೋಣೆಯಲ್ಲಿ ಹಾಕಿ ನಾಪತ್ತೆಯಾಗಿದ್ದಾನೆ ಈ ಕೊಲೆಯನ್ನು ನಿಂಗಪ್ಪನೆ ಮಾಡಿದ್ದಾನೆ ಎಂದು ಮಲ್ಲಮ್ಮಳ ಕುಟುಂಬಸ್ಥರ ಆರೋಪವಾಗಿದೆ.
ಮನೆಯಲ್ಲಿ ಗೃಹಿಣಿ ಶವವಾಗಿ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನೂ ಮಲ್ಲಮ್ಮಳ ಪತಿ ನಿಂಗಪ್ಪ ಕೂಡ ಪರಾರಿಯಾಗಿದ್ದಾನೆ. ಹೀಗಾಗಿ ಈ ಕೊಲೆಯನ್ನು ಪತಿ ನಿಂಗಪ್ಪ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ಮುಳಗುಂದ ಪೊಲೀಸರು ಗೃಹಿಣಿ ಸಾವಿನ ರಹಸ್ಯವನ್ನು ಭೇದಿಸಬೇಕಾಗಿದೆ.
ದಂಪತಿಗಳು ಕಳೆದ 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಎಲ್ಲರ ಮನೆಯ ದೋಸೆಯೂ ತೂತು ಎನ್ನುವ ಹಾಗೆ ಮನೆಯಲ್ಲಿ ಸಣ್ಣಪುಟ್ಟ ಮನಸ್ತಾಪ ಕೂಡ ಬಂದಿವೆ. ಮನೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದುಹೋಗಿದೆ. ಆದರೀಗ, ಆ ಮನೆಯ ಯಜಮಾನಿ ಶವವಾಗಿದ್ದಾಳೆ. ಹೀಗಾಗಿ, ಇದು ಕೊಲೆಯೋ, ಆತ್ಮಹತ್ಯೆಯೋ ಎನ್ನುವ ಗೊಂದಲದಲ್ಲಿ ಪೊಲೀಸ್ ಇಲಾಖೆಯಿದೆ.
(ವರದಿ: ಸಂತೋಷ್ ಕೊಣ್ಣೂರ)
Published by:
Sushma Chakre
First published:
January 16, 2021, 10:02 AM IST