Crime News: ಮಗಳ ತಿಥಿ ಮಾಡಲು ಬಂದ ಅಪ್ಪ ಆತ್ಮಹತ್ಯೆಗೆ ಶರಣಾದ..! ಅಳಿಯನ ಮನೆಯವರೇ ಸಾವಿಗೆ ಕಾರಣ?

ನನಗೆ, ನನ್ನ ಮಗಳಿಗೆ ಬಂದ ಪರಿಸ್ಥಿತಿ ಇನ್ಯಾರಿಗೂ ಬರಬಾರದು. ಸಾಯುವವರೆಗೂ ಅವರನ್ನು ಜೈಲಿಗೆ ಹಾಕಿ ಎಂದು ಮೊಬೈಲ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಾಸನ(ಡಿ. 09): ಮಗಳ(Daughter) ತಿಂಗಳ ತಿಥಿ ಮಾಡಲು ಬಂದಿದ್ದ ತಂದೆ(Father) ಅಳಿಯನ ಮುಂದೆಯೇ ಆತ್ಮಹತ್ಯೆ(Suicide) ಮಾಡಿಕೊಂಡು ಸಾವನ್ನಪ್ಪಿರುವ ದುರಂತ ಘಟನೆ ಹಾಸನ(Hassan) ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದಿದೆ.  ದೊಡ್ಡಗದ್ದವಳ್ಳಿ ಗ್ರಾಮದ ನಾಗರಾಜ್ (55) ಮೃತ ವ್ಯಕ್ತಿ.  ಈತನ ಮಗಳು ಹೇಮಾಶ್ರೀ ಅಕ್ಟೋಬರ್ 30 ರಂದು ಸಾವನ್ನಪ್ಪಿದ್ದಳು.  ನಿನ್ನೆ ತಿಂಗಳ ತಿಥಿ ಕಾರ್ಯ ಮಾಡಲು ತಂದೆ ನಾಗರಾಜ್​  ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮಕ್ಕೆ ಬಂದಿದ್ದರು. 

  ಈ ಸಮಯದಲ್ಲಿ ಅಳಿಯ ಪ್ರವೀಣ್ ಹಾಗೂ ಆತನ ಕುಟುಂಬಸ್ಥರು ಮನೆಗೆ ಬೀಗ ಹಾಕಿಕೊಂಡು ಎಲ್ಲೋ ತಲೆ ಮರೆಸಿಕೊಂಡಿದ್ದರು. ಇತ್ತ ತಂದೆ ನಾಗರಾಜ್​ ಬೆಳಿಗ್ಗೆಯಿಂದ ಕಾದು ಕಾದು, ನಂತರ ಮೊಬೈಲ್​​ನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  ವಿಡಿಯೋ ಮಾಡಿ ಬಳಿಕ ಆತ್ಮಹತ್ಯೆ

  ನನ್ನ ಮಗಳ ಸಾವಿಗೆ ಪತಿ ಪ್ರವೀಣ್, ಅತ್ತೆ ಭದ್ರಮ್ಮ ಕಾರಣ ಎಂದು ವಿಡಿಯೋದಲ್ಲಿ ನಾಗರಾಜ್​ ಹೇಳಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ ಕೊಂದಿದ್ದಾರೆ.  ನನಗೆ, ನನ್ನ ಮಗಳಿಗೆ ಬಂದ ಪರಿಸ್ಥಿತಿ ಇನ್ಯಾರಿಗೂ ಬರಬಾರದು. ಸಾಯುವವರೆಗೂ ಅವರನ್ನು ಜೈಲಿಗೆ ಹಾಕಿ ಎಂದು ಮೊಬೈಲ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

  ಇದನ್ನೂ ಓದಿ: Omicron Variant; ರಾಜ್ಯದಲ್ಲಿ ಶುರುವಾದ 3ನೇ ಅಲೆಯ ಆತಂಕ; ಸರ್ಕಾರಕ್ಕೆ ತಜ್ಞರು ಮಾಡಿರುವ ಶಿಫಾರಸ್ಸುಗಳೇನು?

  ಒಂದೂವರೆ ವರ್ಷದ ಹಿಂದೆ ಮಾಳೆಗೆರೆ ಗ್ರಾಮದ ಪ್ರವೀಣ್ ಗೆ ಹೇಮಶ್ರೀಯನ್ನು ಮದುವೆ ಮಾಡಿಕೊಡಲಾಗಿತ್ತು.  1.50 ಲಕ್ಷ ನಗದು, 40 ಗ್ರಾಂ‌ ಚಿನ್ನವನ್ನು ಪ್ರವೀಣ್​ಗೆ ವರದಕ್ಷಿಣೆಯಾಗಿ ನೀಡಲಾಗಿತ್ತು.  ಪ್ರವೀಣ್ ಆಂಧ್ರಪ್ರದೇಶದಲ್ಲಿ ಬೇಕರಿ ಇಟ್ಟುಕೊಂಡಿದ್ದ.

  ವರದಕ್ಷಿಣೆ ಕಿರುಕುಳ

  ಹೇಮಶ್ರೀ ಅತ್ತೆ ಭದ್ರಮ್ಮ ಮದುವೆಯಾದಗಿನಿಂದಲೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಗರ್ಭಿಣಿಯಾಗಿದ್ದ ಹೇಮಶ್ರೀಯನ್ನು ಗಂಡ ಪ್ರವೀಣ್​ ತವರು ಮನೆಗೆ ಕಳುಹಿಸಿದ್ದ.  ಅ.29 ರಂದು ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿತ್ತು. ಇದಾದ ಎರಡೇ ದಿನಗಳ ಬಳಿಕ ಹೇಮಶ್ರೀ ಸಾವನ್ನಪ್ಪಿದ್ದಳು.

  ಒಡವೆ, ಹಣ ವಾಪಸ್ ನೀಡುವಂತೆ ತೀರ್ಮಾನ

  ಗಂಡನ ಊರು ಮಾಳೆಗೆರೆಯಲ್ಲಿ ಹೇಮಶ್ರೀ ಅಂತ್ಯಕ್ರಿಯೆ ನಡೆಸಲಾಗಿತ್ತು.  11 ದಿನದ ತಿಥಿ ಕಾರ್ಯದ ದಿನ ಗ್ರಾಮದ ಹಿರಿಯರು ಪಂಚಾಯ್ತಿ ನಡೆಸಿದ್ದರು. ವರದಕ್ಷಿಣೆಯಾಗಿ ನೀಡಿದ್ದ ಹಣ, ಒಡವೆಯನ್ನು ತಿಂಗಳ ತಿಥಿಯಂದು ವಾಪಾಸ್ ನೀಡುವಂತೆ ತೀರ್ಮಾನ ಮಾಡಿದ್ದರು. ಇದಕ್ಕೆ  ಪ್ರವೀಣ್ ಹಾಗೂ ತಾಯಿ ಭದ್ರಮ್ಮ ಇಬ್ಬರೂ ಒಪ್ಪಿದ್ದರು.

  ಇದನ್ನೂ ಓದಿ: Karnataka Weather Report: ರಾಜ್ಯದಲ್ಲಿಂದು ತುಂತುರು ಅಥವಾ ಸಾಧಾರಣ ಮಳೆ: ಬೆಂಗ್ಳೂರಲ್ಲಿ ಮೋಡ ಕವಿದ ವಾತಾವರಣ!

  ಅಳಿಯನ ಮನೆಯಲ್ಲೇ ಆತ್ಮಹತ್ಯೆ

  ನಿನ್ನೆ ಮಗಳ ತಿಂಗಳ ತಿಥಿ ಕಾರ್ಯ ಮಾಡಲು ತಂದೆ ನಾಗರಾಜ್​ ಎಲ್ಲಾ ಸಾಮಗ್ರಿಗಳನ್ನು ತಂದಿದ್ದರು. ಆದರೆ ಅಳಿಯನ ಮನೆಯವರು ಬೀಗ ಹಾಕಿಕೊಂಡು ಎಲ್ಲಿಯೋ ತಲೆ ಮರೆಸಿಕೊಂಡಿದ್ದರು. ಆಗ ನಾಗರಾಜ್​ ಮಧ್ಯಾಹ್ನದವರೆಗೂ ಕಾಯ್ದು ಮನೆಯ ಬಾಗಿಲು‌ ಮುಂದೆಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  Published by:Latha CG
  First published: