ಕಲಬುರ್ಗಿ ಯುವಕನ ಬರ್ಬರ ಹತ್ಯೆಗೆ ಹೊಸ ತಿರುವು; ಬಡ್ಡಿ ಹಣ ವಸೂಲಿಗೆ ಹೋದವನು ಶವವಾಗಿ ಪತ್ತೆ

Kalburgi Murder: ಕಲಬುರ್ಗಿಯ ನಾಗನಹಳ್ಳಿ ಕ್ರಾಸ್​ನ ರಾಜಾಪುರ ನಾಲಾದ ಬ್ರಿಡ್ಜ್ ಬಳಿ ಜೂನ್ 26ರಂದು ಸಿಕ್ಕಿದ್ದ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಆ ಕೊಲೆ ಪ್ರಕರಣದ ಆರೋಪಿಗಳು ಕೊನೆಗೂ ಸಿಕ್ಕಿಬಿದ್ದಿದ್ದಾರೆ.

news18-kannada
Updated:July 11, 2020, 12:04 PM IST
ಕಲಬುರ್ಗಿ ಯುವಕನ ಬರ್ಬರ ಹತ್ಯೆಗೆ ಹೊಸ ತಿರುವು; ಬಡ್ಡಿ ಹಣ ವಸೂಲಿಗೆ ಹೋದವನು ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ (ಜು. 11): ಯುವಕನ ಬರ್ಬರ ಹತ್ಯೆ ಪ್ರಕರಣವನ್ನು ಭೇದಿಸಿರುವ ಕಲಬುರ್ಗಿಯ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ತಾರಫೈಲ್ ಬಡಾವಣೆಯ ಸುನಿಲ್ ಅಲಿಯಾಸ್ ಸೋನು ಕಾಂಬಳೆ, ಶಿವಲಿಂಗ ಹುಲಿಮನಿ ಹಾಗೂ ರಾಜು ಗುರುಸುಣಗಿ ಎಂದು ಗುರುತಿಸಲಾಗಿದೆ.

ಕಲಬುರ್ಗಿಯ ನಾಗನಹಳ್ಳಿ ಕ್ರಾಸ್ ನ ರಾಜಾಪುರ ನಾಲಾದ ಬ್ರಿಡ್ಜ್ ಬಳಿ ಜೂನ್ 26 ರಂದು ಸಿಕ್ಕಿದ್ದ ಶವ, ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಮುಖ ಗುರುತು ಹಿಡಿಯಲಾರದಷ್ಟು ಕೊಳೆತ ಸ್ಥಿತಿಯಲ್ಲಿದ್ದ ಶವ ಯಾರದ್ದಿರಬಹುದೆಂದು ಆರಂಭಿಸಿದ ತನಿಖೆ ಹಲವು ತಿರುವುಗಳನ್ನು ಪಡೆದು ಕೊಲೆಗೆ ಅಸಲಿ ಸತ್ಯ ಏನೆಂಬುದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Decomposed Body of a Man Found in Kalburgi New Twist in Murder Case.
ಮೃತಪಟ್ಟ ಯುವಕ


ಸತ್ತ ಯುವಕ ಯಾರೆಂಬುದು ಗುರುತು ಸಿಗದೇ ಇದ್ದಾಗ ಪೊಲೀಸರು, ವಿವಿಧ ಠಾಣೆಗಳಲ್ಲಿ ಆಗಿರೋ ಮಿಸ್ಸಿಂಗ್ ಕೇಸ್ ಪರಿಶೀಲಿಸಿದ್ದಾರೆ. ಈ ವೇಳೆ ತಾರಫೈಲ್ ನ ವಿಶಾಲ್ ನಾಪತ್ತೆಯಾಗಿರೋ ಅಂಶ ತಿಳಿದ ಪೊಲೀಸರು, ಅವರ ಪೋಷಕರನ್ನು ಕರೆಸಿ ಶವ ತೋರಿಸಿದ್ದಾರೆ. ಶವ ಗುರುತು ಹಿಡಿಯಲಾರದ ಸ್ಥಿತಿ ಇದ್ದುದರಿಂದ ಯುವಕ ಧರಿಸಿದ್ದ ಚಡ್ಡಿ ಹಾಗೂ ಪ್ಯಾಂಟ್ ಗಳ ಮೂಲಕ ಕೊಲೆಯಾದವನು ವಿಶಾಲ್ ಎಂಬುದನ್ನು ಖಾತ್ರಿ ಮಾಡಿಕೊಳ್ಳಲಾಗಿತ್ತು.

ಇದನ್ನೂ ಓದಿ: ಉಡುಪಿ, ಉತ್ತರ ಕನ್ನಡ, ಕೊಡಗಿನಲ್ಲಿ ಭಾರೀ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಕೊಲೆ ಯಾರು ಮಾಡಿರಬಹುದೆಂಬ ವಿಷಯ ಬಂದಾಗ ಯುವತಿಗಾಗಿ ವಿಶಾಲ್ ಮತ್ತು ಕೆಲ ಯುವಕರ ನಡುವೆ ನಡೆದಿದ್ದ ಜಗಳದ ವಿಷಯವನ್ನು ಪೋಷಕರು ತಿಳಿಸಿದ್ದಾರೆ. ಇದರ ಬೆನ್ನು ಹತ್ತಿದಾಗ ಹುಡುಗಿಗಾಗಿ ಜಗಳ ನಡೆಸಿದವರು ಈ ಕೊಲೆ ಮಾಡಿಲ್ಲ ಎಂಬುದು ಖಾತ್ರಿಯಾಗುತ್ತದೆ. ಹೀಗೆ ಅನುಮಾನ ಬಂದವರನ್ನೆಲ್ಲ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮೂವರು ಅಸಲಿ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಮೃತ ಯುವಕ ವಿಶಾಲ್ ಹಣಕ್ಕಾಗಿ ಪೀಡಿಸುತ್ತಿದ್ದುದೇ ಕೊಲೆಗೆ ಕಾರಣ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ವಿಶಾಲ್ ತಾಯಿ ಪ್ರಮುಖ ಆರೋಪಿ ಸುನಿಲ್ ಅಲಿಯಾಸ್ ಸೋನು ಕಾಂಬಳೆಗೆ ಮೂರು ಲಕ್ಷ ರೂಪಾಯಿ ಹಣ ಕೊಟ್ಟಿದ್ದಳು ಎನ್ನಲಾಗಿದೆ. ಅದರ ಬಡ್ಡಿ ಹಾಗೂ ಅಸಲಿ ವಸೂಲಿ ಮಾಡುವಂತೆ ಮಗನಿಗೆ ಸೂಚಿಸಿದ್ದಳು. ಈ ಹಿನ್ನೆಲೆಯಲ್ಲಿ ಬಡ್ಡಿ ಮತ್ತು ಅಸಲಿಗಾಗಿ ಸುನಿಲ್ ಗೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತ ಸುನಿಲ್ ತನ್ನ ಇಬ್ಬರು ಸಹಚರರ ಜೊತೆಗೂಡಿ ವಿಶಾಲ್​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಚರಂಡಿ ಪಕ್ಕದಲ್ಲಿ ಎಸೆದು ಹೋಗಿದ್ದಾರೆ ಎಂಬುದು ತನಿಖೆಯ ವೇಳೆ ಬಹಿರಂಗಗೊಂಡಿದೆ. ತನಿಖೆಯ ವೇಳೆ ಆರೋಪಿಗಳು ಕೊಲೆ ಮಾಡಿರೋದು ಸಾಬೀತಾಗುತ್ತಿದ್ದಂತೆ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Published by: Sushma Chakre
First published: July 11, 2020, 12:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading