ದಾವಣಗೆರೆ: ಎರಡನೇ ಮದುವೆ ರಹಸ್ಯ ಮುಚ್ಚಿಡಲು ಮಗುವನ್ನೇ ಕೊಂದು, ಹೂತುಹಾಕಿದ ಅಪ್ಪ
Murder News: ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದ ನಿಂಗಪ್ಪ ಹಾಗೂ ಶಶಿಕಲಾ ಇತ್ತೀಚೆಗೆ ಗುಟ್ಟಾಗಿ ಮದುವೆಯಾಗಿದ್ದರು. ಸಂಬಂಧದಲ್ಲಿ ತಂಗಿಯಾಗಬೇಕಿದ್ದ ಶಶಿಕಲಾಳ ಮಗು ತನ್ನನ್ನು ಅಪ್ಪ ಎಂದು ಕರೆದರೆ ಎಲ್ಲರಿಗೂ ತಮ್ಮ ಮದುವೆಯ ರಹಸ್ಯ ತಿಳಿಯುತ್ತದೆ ಎಂದು 3 ವರ್ಷದ ಮಗಳನ್ನು ನಿಂಗಪ್ಪ ಕೊಲೆ ಮಾಡಿದ್ದ.
news18-kannada Updated:October 13, 2020, 9:46 AM IST

ಅಪ್ಪನಿಂದ ಕೊಲೆಯಾದ ಮಗಳು ಸಿರಿಶಾ
- News18 Kannada
- Last Updated: October 13, 2020, 9:46 AM IST
ದಾವಣಗೆರೆ (ಅ. 13): ತನ್ನ ಎರಡನೇ ಮದುವೆಯ ರಹಸ್ಯ ಹೊರಬೀಳುತ್ತದೆ ಎಂಬ ಭೀತಿಯಲ್ಲಿ ತಂದೆಯೊಬ್ಬ ಹೆತ್ತ ಮಗಳನ್ನೇ ಕೊಂದು, ಸಮಾಧಿ ಮಾಡಿರುವ ಅಮಾನವೀಯ ಘಟನೆ ದಾವಣಗೆರೆಯ ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ನಡೆದಿದೆ. ಗುತ್ತಿದುರ್ಗದ ಹೊರವಲಯದಲ್ಲಿ ಮಗಳ ಶವ ಹೂತಿದ್ದ ಕಟುಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ಗುತ್ತಿದುರ್ಗದ ಶಶಿಕಲಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ ನಿಂಗಪ್ಪ ತನ್ನ ಹೆಂಡತಿ, ಮಗಳೊಂದಿಗೆ ಚಿತ್ರದುರ್ಗದಲ್ಲಿ ವಾಸವಾಗಿದ್ದ.
ಮೊದಲ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದರೂ ಎರಡನೇ ವಿವಾಹವಾಗಿದ್ದ ನಿಂಗಪ್ಪ ಒಂದು ತಿಂಗಳ ಹಿಂದೆ ತನ್ನ ಎರಡನೇ ಹೆಂಡತಿಯ ಹೆಣ್ಣು ಮಗು ಸಿರಿಶಾಳನ್ನು ಕರೆದೊಯ್ದು ಹತ್ಯೆ ಮಾಡಿದ್ದ. ತನ್ನ 3 ವರ್ಷದ ಮಗು ನಾಪತ್ತೆಯಾಗಿದೆ ಎಂದು ಇಪ್ಪತ್ತು ದಿನಗಳ ಹಿಂದೆಯೇ ಶಶಿಕಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಾಗ ಗುತ್ತಿದುರ್ಗ ಗ್ರಾಮಸ್ಥರಿಂದ ಮಗುವನ್ನು ಸಮಾಧಿ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಚಿತ್ರದುರ್ಗ ಮತ್ತು ದಾವಣಗೆರೆ ಪೊಲೀಸ್ ಅಧಿಕಾರಿಗಳು ಗುತ್ತಿದುರ್ಗಕ್ಕೆ ಭೇಟಿ ನೀಡಿ, ಮಗುವಿನ ತಂದೆ ನಿಂಗಪ್ಪನನ್ನು ವಿಚಾರಣೆಗೆ ಒಳಪಡಿಸಿದ್ದರು. ಇದನ್ನೂ ಓದಿ: 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಕೊಲೆ ಆರೋಪ ಸಾಬೀತು; ಹೆಂಡತಿಯ ಕೊಂದ ಗಂಡನಿಗೆ ಜೀವಾವಧಿ ಶಿಕ್ಷೆ
ಎರಡನೇ ಮದುವೆ ಗುಟ್ಟು ರಟ್ಟಾಗುವ ಭಯದಲ್ಲಿ ನಿಂಗಪ್ಪ ಮಗಳನ್ನೇ ಸಾಯಿಸಿದ್ದ ಎಂಬುದು ವಿಚಾರಣೆ ವೇಳೆ ಬಯಲಾಗಿತ್ತು. ಮೊದಲ ಮದುವೆಗೂ ಮೊದಲೇ ನಿಂಗಪ್ಪನಿಗೆ ಎರಡನೇ ಹೆಂಡತಿ ಜೊತೆ ಪ್ರೇಮ ಸಂಬಂಧವಿತ್ತು. ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದ ನಿಂಗಪ್ಪ ಹಾಗೂ ಶಶಿಕಲಾ ಇತ್ತೀಚೆಗೆ ಗುಟ್ಟಾಗಿ ಮದುವೆಯಾಗಿದ್ದರು. ಶಶಿಕಲಾ ಚಿತ್ರದುರ್ಗದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಕುಟುಂಬಸ್ಥರಿಗೆ ಗೊತ್ತಿಲ್ಲದಂತೆ ಮದುವೆಯಾಗಿದ್ದರು. ಎರಡನೇ ಹೆಂಡತಿ ಶಶಿಕಲಾ ನಿಂಗಪ್ಪನಿಗೆ ದೂರದಿಂದ ಸಂಬಂಧದಲ್ಲಿ ತಂಗಿಯಾಗಬೇಕು. ಎರಡನೇ ಹೆಂಡತಿ ಶಶಿಕಲಾಳ ಮಗಳು ತನಗೆ ಅಪ್ಪ ಎಂದು ಕರೆಯುತ್ತಿದ್ದುದನ್ನು ನೋಡಿ ಮಾನ- ಮರ್ಯಾದೆ ಹೋಗುತ್ತದೆ ಎಂಬ ಭಯದಿಂದ ಮಗಳನ್ನೇ ಕೊಲೆ ಮಾಡಲು ನಿರ್ಧರಿಸಿದ್ದ.
ಮಗಳನ್ನು ತನ್ನೂರಿಗೆ ಕರೆದುಕೊಂಡು ಹೋಗಿ, ಕೊಲೆ ಮಾಡಿ, ಹೂತು ಬಂದಿದ್ದ ನಿಂಗಪ್ಪ ಶಶಿಕಲಾಗೆ ಮಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದೇನೆ ಎಂದು ಸುಳ್ಳು ಹೇಳಿದ್ದ. ಇದರಿಂದ ಅನುಮಾನಗೊಂಡು ಮಗಳು ಕಾಣೆಯಾದ ಬಗ್ಗೆ ಶಶಿಕಲಾ ದೂರು ನೀಡಿದ್ದರು. ಈ ಬಗ್ಗೆ ಪೊಲೀಸ್ ತನಿಖೆಯಲ್ಲಿ ಸತ್ಯ ವಿಷಯವನ್ನು ನಿಂಗಪ್ಪ ಬಾಯಿಬಿಟ್ಟಿದ್ದ. ಜಗಳೂರು ತಾಲ್ಲೂಕಿನ ಗುತ್ತಿದುರ್ಗದಲ್ಲಿ ಕೊಲೆ ಮಾಡಿ ಹೂತುಹಾಕಿದ್ದ ನಿಂಗಪ್ಪ ಸತ್ಯಾಂಶ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಇಂದು ತಹಸೀಲ್ದಾರ್ ಸಮ್ಮುಖದಲ್ಲಿ ಮಗುವಿನ ಶವವನ್ನು ಪುನಃ ಹೊರತೆಗೆದು ಪೋಸ್ಟ್ ಮಾರ್ಟಂ ನಡೆಸಲಾಗುವುದು.
ಮೊದಲ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದರೂ ಎರಡನೇ ವಿವಾಹವಾಗಿದ್ದ ನಿಂಗಪ್ಪ ಒಂದು ತಿಂಗಳ ಹಿಂದೆ ತನ್ನ ಎರಡನೇ ಹೆಂಡತಿಯ ಹೆಣ್ಣು ಮಗು ಸಿರಿಶಾಳನ್ನು ಕರೆದೊಯ್ದು ಹತ್ಯೆ ಮಾಡಿದ್ದ. ತನ್ನ 3 ವರ್ಷದ ಮಗು ನಾಪತ್ತೆಯಾಗಿದೆ ಎಂದು ಇಪ್ಪತ್ತು ದಿನಗಳ ಹಿಂದೆಯೇ ಶಶಿಕಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಾಗ ಗುತ್ತಿದುರ್ಗ ಗ್ರಾಮಸ್ಥರಿಂದ ಮಗುವನ್ನು ಸಮಾಧಿ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಚಿತ್ರದುರ್ಗ ಮತ್ತು ದಾವಣಗೆರೆ ಪೊಲೀಸ್ ಅಧಿಕಾರಿಗಳು ಗುತ್ತಿದುರ್ಗಕ್ಕೆ ಭೇಟಿ ನೀಡಿ, ಮಗುವಿನ ತಂದೆ ನಿಂಗಪ್ಪನನ್ನು ವಿಚಾರಣೆಗೆ ಒಳಪಡಿಸಿದ್ದರು.