ಕೋಲಾರ: ಪೋಷಕರು ಜಮೀನು(Land) ನೀಡಿಲ್ಲವೆಂದು ರೇಷ್ಮೆ ಬೆಳೆಗೆ(Mulberry) ಕುಟುಂಬಸ್ಥರೇ(Family Members) ವಿಷ ಸಿಂಪಡಣೆ ಮಾಡಿರುವ ಘಟನೆ ಕೋಲಾರ ತಾಲೂಕಿನ ಯಳಚೀಪುರ ಗ್ರಾಮದಲ್ಲಿ ನಡೆದಿದೆ. ಹಿರಿ ಮಗಳಾದ ಚೌಡಮ್ಮ ವಿರುದ್ಧ ವೃದ್ಧ ದಂಪತಿ ರಾಮಣ್ಣ - ಲಕ್ಷ್ಮಮ್ಮ ಆರೋಪಿಸಿದ್ದಾರೆ.
ವೃದ್ಧ ದಂಪತಿಗೆ ಐವರು ಹೆಣ್ಣುಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿದೆ. ಜಮೀನು ವಿಭಾಗ ಮಾಡುವ ಸಂಬಂಧ ಕೋರ್ಟ್ನಲ್ಲಿ ಕೇಸ್ ಸಹ ನಡೆಯುತ್ತಿದೆ. ಮೂರ್ನಾಲ್ಕು ಬಾರಿ ನ್ಯಾಯ ಪಂಚಾಯಿತಿಯೂ ಮಾಡಲಾಗಿದೆ. ಆದರೂ ಸಹ ತಮಗೆ ಹೆಚ್ಚಿನ ಜಮೀನು ಬೇಕೆಂದು ಹಿರಿಮಗಳು ತಕರಾರು ಮಾಡುತ್ತಿದ್ದಾಳೆಂದು ವೃದ್ಧ ದಂಪತಿ ಆರೋಪಿಸಿದ್ದಾರೆ.
ಇದನ್ನೂ ಓದಿ: Chitradurga: ಡಿವೋರ್ಸ್ ಬಳಿಕ ಇನಿಯನ ಜೊತೆ ವಾಸವಿದ್ದ ಮಹಿಳೆಯ ಸಾವು: ಬಿಟ್ಟಿರಲಾರೆ ಅಂತ ವಿಷ ಸೇವಿಸಿದ ಗೆಳೆಯ
ವೃದ್ಧ ದಂಪತಿಯ ಗೋಳು
ರೇಷ್ಮೆ ಹುಳು ಸಾಕಾಣಿಕೆ ಮಾಡಿ ರಾಮಣ್ಣ-ಲಕ್ಷ್ಮಮ್ಮ ಅವರು ಜೀವನ ನಡೆಸುತ್ತಿದ್ದಾರೆ. ಇದೀಗ ಸಾಲ ಮಾಡಿ ಜೀವನ ನಿರ್ವಹಣೆಗೆ 150 ಮೊಟ್ಟೆಯ ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿದ್ದರು. ವಿಷ ಹಾಕಿರುವ ಬಗ್ಗೆ ಮಾಹಿತಿ ತಿಳಿಯದೆ ಹಿಪ್ಪು ನೇರಳೆ ಸೊಪ್ಪನ್ನ ಕಟಾವು ಮಾಡಿಕೊಂಡು ರಾತ್ರಿ ರೇಷ್ಮೆ ಹುಳುಗಳಿಗೆ ಹಾಕಲಾಗಿತ್ತು. ಈ ಸೊಪ್ಪು ತಿಂದ ಹುಳುಗಳು ಕ್ಷಣ ಮಾತ್ರದಲ್ಲಿ ಸಾಯುತ್ತಿವೆ. ಇದರಿಂದ ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಉಂಟಾಗಿದೆ. ನಮಗೆ ಜೀವನ ನಡೆಸಲು ಕಷ್ಟವಾಗುತ್ತದೆ. ನಮಗೆ ಪರಿಹಾರ ನೀಡಬೇಕು ಎಂದು ಕಣ್ಣೀರುಹಾಕಿದರು.
ಬೆಳೆಗೆ ವಿಷ ಹಾಕಿದ ಅಳಿಯ-ಮಗಳು
ಖಚಿತವಾಗಿಯೂ ಬೇರೆ ಯಾರೂ ಸಹ ವಿಷ ಹಾಕಲು ಸಾಧ್ಯವಿಲ್ಲ. ಹಿರಿಮಗಳಾದ ಚೌಡಮ್ಮ, ಅಳಿಯ ಲಕ್ಷ್ಮಣ್ ಹಾಗೂ ಮೊಮ್ಮಗ ಆನಂದ್ ಇವರೇ ವಿಷ ಹಾಕಿದ್ದಾರೆ. ಇಂದು ರೇಷ್ಮೆ ಹುಳುವಿಗೇ ವಿಷ ಹಾಕಿದವರು ಮುಂದೆ ನಮಗೆ ಹಾಕದೆ ಇರುತ್ತಾರೆಯೇ ಎಂದು ಲಕ್ಷಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನೂ ಈ ಬಗ್ಗೆ ತಮ್ಮ ಮಗಳ ವಿರುದ್ಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ವೃದ್ಧ ದಂಪತಿ ತಿಳಿಸಿದರು.
ಇದನ್ನೂ ಓದಿ: Viral News: 6 ತಿಂಗಳಿಂದ ಕಾಗೆಯ ಕಾಟಕ್ಕೆ ಹೈರಾಣಾಗಿ ಹೋಗಿದ್ದಾರೆ ಈ ಗ್ರಾಮದ ಜನರು
ನಂತರ ಮಾತನಾಡಿದ ಗ್ರಾಮದ ನಿವಾಸಿ ಗೋಪಾಲಕೃಷ್ಣ ಅವರು, ವೃದ್ಧ ದಂಪತಿ ತಮ್ಮ ಜೀವನಕ್ಕಾಗಿ ರೇಷ್ಮೆ ಬೆಳೆಯುತ್ತಿದ್ದರು. ಯಾರೋ ಕಿಡಿಗೇಡಿಗಳು ವಿಷ ಹಾಕಿದ ಹಿನ್ನೆಲೆಯಲ್ಲಿ ಬೆಳೆ ಪೂರ್ತಿ ನಾಶವಾಗಿದೆ. ಅವರ ಮಗಳಿಗೂ ಇವರಿಗೂ ಜಮೀನು ವ್ಯಾಜ್ಯ ಇತ್ತು. ಅವರೇ ವಿಷ ಹಾಕಿದ್ದಾರೆ ಎಂಬುವುದು ನಮಗೆ ಗೊತ್ತಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ