HOME » NEWS » State » CRIME NEWS COUPLE DIED IN HASSAN SAKALESHPUR WHILE TAKING SELFIE SCT

ಸುತ್ತಾಡಲು ಹೋದವರು ಶವವಾಗಿ ವಾಪಾಸ್; ನೀರಿನಲ್ಲಿ ಮುಳುಗಿ ಸಕಲೇಶಪುರದ ನವದಂಪತಿ ಸಾವು

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆನ್ನಾಲಿ ಗ್ರಾಮದ ಹೇಮಾವತಿ ನದಿ ಬಳಿ ಘಟನೆ ನಡೆದಿದೆ. ಮೇಲ್ನೋಟಕ್ಕೆ ಸೆಲ್ಫಿ ತೆಗೆಯಲು ಹೋಗಿ ದುರಂತ ಸಂಭವಿಸಿದೆ ಎನ್ನಲಾಗಿದೆ.

news18-kannada
Updated:May 8, 2020, 1:52 PM IST
ಸುತ್ತಾಡಲು ಹೋದವರು ಶವವಾಗಿ ವಾಪಾಸ್; ನೀರಿನಲ್ಲಿ ಮುಳುಗಿ ಸಕಲೇಶಪುರದ ನವದಂಪತಿ ಸಾವು
ಸಾಂದರ್ಭಿಕ ಚಿತ್ರ
  • Share this:
ಹಾಸನ (ಮೇ 8): ಲಾಕ್​ಡೌನ್​ ಹಿನ್ನೆಲೆ ಬೆಂಗಳೂರಿನಿಂದ ಹಾಸನದಲ್ಲಿರುವ ಊರಿಗೆ ಬಂದಿದ್ದ ನವದಂಪತಿ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೊರಗೆ ಸುತ್ತಾಡಿಕೊಂಡು ಬರುತ್ತೇವೆ ಎಂದು ಬೈಕ್​ನಲ್ಲಿ ಹೊರಗೆ ಹೋಗಿದ್ದ ಇವರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆನ್ನಾಲಿ ಗ್ರಾಮದ ಹೇಮಾವತಿ ನದಿ ಬಳಿ ಘಟನೆ ನಡೆದಿದೆ. ಮೇಲ್ನೋಟಕ್ಕೆ ಸೆಲ್ಫಿ ತೆಗೆಯಲು ಹೋಗಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಬೇಲೂರು ತಾಲೂಕಿನ ಮುರಹಳ್ಳಿ ಗ್ರಾಮದ 27 ವರ್ಷದ ಅರ್ಥೇಶ್ ಹಾಗೂ ಹೆನ್ನಾಲಿ ಗ್ರಾಮದ 23 ವರ್ಷದ ಕೃತಿಕಾ 2 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.

ಇದನ್ನೂ ಓದಿ: ಪಾದರಾಯನಪುರದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಕೇಸ್‌; ಪ್ರಕರಣಗಳು ಮತ್ತಷ್ಟು ಹೆಚ್ಚುವ ಸಾಧ್ಯತೆ

ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಇಬ್ಬರೂ ಅವರವರ ಊರಿಗೆ ತೆರಳಿದ್ದರು. ತನ್ನ ಊರಿನಿಂದ ಹೆಂಡತಿಯ ಊರಾದ ಹೆನ್ನಾಲಿಗೆ ಬಂದಿದ್ದ ಅರ್ಥೇಶ್​ ಕೃತಿಕಾ ಜೊತೆ ಸಮಯ ಕಳೆಯಲು ಹೊರಗೆ ಹೋಗಲು ಯೋಚಿಸಿದ್ದ. ಇಬ್ಬರೂ ಹೊರಗೆ ಸುತ್ತಾಡಿಬರುವುದಾಗಿ ಹೇಳಿ ಬೈಕ್​ನಲ್ಲಿ ಹೊರಟಿದ್ದರು.

ಆದರೆ, ರಾತ್ರಿಯಾದರೂ ಮಗಳು-ಅಳಿಯ ವಾಪಾಸ್ ಬಾರದ ಕಾರಣ ಕೃತಿಕಾಳ ಮನೆಯವರು ನದಿಯ ಬಳಿ ಹೋದಾಗ ಬೈಕ್ ನಿಂತಿರುವುದು ಕಂಡಿತ್ತು. ನಂತರ ಮೀನುಗಾರರು ಹುಡುಕಿದಾಗ ಇಬ್ಬರ ಶವ ಸಿಕ್ಕಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಔರಂಗಾಬಾದ್​ ದುರಂತ; ರೈಲು ನಿಲ್ಲಿಸಲು ಚಾಲಕ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದ ರೈಲ್ವೆ ಇಲಾಖೆ
First published: May 8, 2020, 10:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories