• Home
  • »
  • News
  • »
  • state
  • »
  • Crime News: 50ಕ್ಕೂ ಹೆಚ್ಚು ರೈತ ಕುಟುಂಬಕ್ಕೆ ಮೋಸ, ಅಣ್ಣನಿಂದಲೇ ತಮ್ಮನ ಕೊಲೆ, ಕಲಬುರಗಿಯಲ್ಲಿ ರಾಮನವಮಿ ಆಚರಿಸಿದ್ದಕ್ಕೆ ಹಲ್ಲೆ ಆರೋಪ

Crime News: 50ಕ್ಕೂ ಹೆಚ್ಚು ರೈತ ಕುಟುಂಬಕ್ಕೆ ಮೋಸ, ಅಣ್ಣನಿಂದಲೇ ತಮ್ಮನ ಕೊಲೆ, ಕಲಬುರಗಿಯಲ್ಲಿ ರಾಮನವಮಿ ಆಚರಿಸಿದ್ದಕ್ಕೆ ಹಲ್ಲೆ ಆರೋಪ

ರಘು ಮತ್ತು ಸುಧಾ

ರಘು ಮತ್ತು ಸುಧಾ

ರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

  • Share this:

ಹಾಸನ: ಸಾಲ (Loan) ಕೊಡಿಸುವ ನೆಪದಲ್ಲಿ 50ಕ್ಕೂ ಹೆಚ್ಚು ರೈತ ಕುಟುಂಬ(Farmer Family)ಗಳಿಗೆ ದಂಪತಿ (Couple) ಮೋಸ ಮಾಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆ (Anakere, Hassan) ಗ್ರಾಮದಲ್ಲಿ ನಡೆದಿದೆ. ಆನಕೆರೆ ಗ್ರಾಮದ ಸುಧಾ-ರಘು ದಂಪತಿಯಿಂದ ವಂಚನೆ ನಡೆದಿದೆ. ಗ್ರಾಮದ ಕೆಲ ಮಹಿಳೆಯ(Women)ರಿಗೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಾಲ ಕೊಡಿಸುವುದಾಗಿ ದಂಪತಿ ನಾಟಕವಾಡಿದ್ದರು. ನಂತರ ಅಮಾಯಕ ಮಹಿಳೆಯರ ಹೆಸರಿನಲ್ಲಿ ತಾವೇ ಸಾಲ ಪಡೆದು ಪರಾರಿಯಾಗಿದ್ದಾರೆ. ಮಹಿಳೆಯರ ಹಣ ಲಪಟಾಯಿಸಿ ಕಳೆದ ಒಂದು ತಿಂಗಳಿನಿಂದ ಗ್ರಾಮ ಬಿಟ್ಟು ಸುಧಾ ಮತ್ತು ರಘು ಎಸ್ಕೇಪ್ ಆಗಿದ್ದಾರೆ. ಪ್ರೇರಣ, ಸ್ಪಂದನ, ಗ್ರಾಮೀಣಕೂಟ, ಐಡಿಎಫ್‌ಸಿ ಇತರೆ ಸಂಘಗಳಿಂದ ಸುಧಾ ಮತ್ತು ರಘು ಸಾಲ ಪಡೆದುಕೊಂಡಿದ್ದಾರೆ.


ದಂಪತಿ ವಿರುದ್ಧ ವಂಚನೆಗೊಳಗಾದ ಮಹಿಳೆಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ  ಚನ್ನರಾಯಪಟ್ಟಣ (Channarayapattana)ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೈಸೂರು ಒಡಹುಟ್ಟಿದ ತಮ್ಮನನ್ನೇ ಕೊಂದ ಅಣ್ಣ


ಆಸ್ತಿಗಾಗಿ ಒಡಹುಟ್ಟಿದ ತಮ್ಮನನ್ನೇ ಅಣ್ಣ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೋವಿಂದ ನಾಯಕ(35) ಕೊಲೆಯಾದ ದುರ್ದೈವಿ. ಘಟನೆ ಬಳಿಕ ಆರೋಪಿ ಅಣ್ಣ ರಂಗಸ್ವಾಮಿ ನಾಪತ್ತೆಯಾಗಿದ್ದಾನೆ.


ಇದನ್ನೂ ಓದಿ:  Mandya: ಉಗ್ರನ ಹೊಗಳಿಕೆ ತಂದ ಸಂಕಷ್ಟ; ಮುಸ್ಕಾನ್ ವಿಚಾರಣೆ ನಡೆಸುವಂತೆ ಸಿಎಂಗೆ ಪತ್ರ ಬರೆದ ಸಂಸದ ಹೆಗಡೆ


ಮೃತ ಗೋವಿಂದ ನಾಯ್ಕ ಮತ್ತು  ಕೊಲೆ ಆರೋಪಿ ಅಣ್ಣ ರಂಗಸ್ವಾಮಿ ನಡುವೆ ಪದೇ ಪದೆ ಜಾಗದ ವಿಚಾರಕ್ಕೆ ಘರ್ಷಣೆ ನಡೆಯುತ್ತಿತ್ತು. ಮೊನ್ನೆ ರಾತ್ರಿಯಲ್ಲಿ ಮನೆಯ ಮುಂಭಾಗದಲ್ಲಿದ್ದ ಶೌಚಾಲಯದ ಕೊಠಡಿಯ ಬೀಗ ಒಡೆದ ಎಂದು ಆರೋಪಿ ಅಣ್ಣ ಖ್ಯಾತೆ ತೆಗೆದು ಘರ್ಷಣೆಗೆ ಮುಂದಾಗಿದ್ದಾನೆ ಈ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಜಗಳ ನಿಲ್ಲಿಸಿದ್ದರು.


ರಾತ್ರಿ ಹನ್ನೊಂದು ಗಂಟೆಗೆ ಮಲಗಿದ್ದ ತಮ್ಮನ ಮೇಲೆ ರಂಗಸ್ವಾಮಿ ಏಕಾಏಕಿ ಮಚ್ಚಿನಿಂದ ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ಮಚ್ಚಿನಿಂದ ಬರ್ಬರವಾಗಿ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಗೋವಿಂದ ನಾಯಕ್ ನನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಗಂಭೀರವಾಗಿ ಗಾಯಗೊಂಡಿದ್ದ ಗೋವಿಂದ ನಾಯಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ .ಈ ಸಂಬಂಧ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಲಬುರಗಿ: ಯುವಕನ ಬರ್ಬರ ಇಕೊಲೆ


ಮಾರಕಾಸ್ತ್ರಗಳಿಂದ ಕೊಚ್ಚಿ ತಲೆ ಮೇಲೆ ಕಲ್ಲುಎತ್ತಿಹಾಕಿ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಎಸ್‌ಎಮ್ ಕೃಷ್ಣ ಕಾಲೋನಿಯಲ್ಲಿ ನಡೆದಿದೆ. ಉಮಾಕಾಂತ್ @ ಪಾಪ್ಯಾ (21) ಹತ್ಯೆಯಾದ ಯುವಕ. ಕೊಲೆಯಾದ ಉಮಾಕಾಂತ್, ಕಲಬುರಗಿಯ ಪಂಡಿತ್ ದಿನಾ ದಯಾಲ್ ಉಪಾಧ್ಯ ನಗರ ನಿವಾಸಿ.  ಬೈಕ್ ಮೇಲೆ ಮನೆಗೆ ತೆರಳುತ್ತಿದ್ದಾಗ ಅಡ್ಡಗಟ್ಟಿ ಹತ್ತೆಗೈಯ್ದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮಂಜುನಾಥ್, ಸಂಜೀವಕುಮಾರ್, ರಾಹುಲ್, ಸುನೀಲ್ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಲಬುರಗಿ: ರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ


ರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ವಿವಿಯ ವಿದ್ಯಾರ್ಥಿಗಳಿಂದಲೇ ರಾಮನವಮಿ ಆಚರಿಸಿದ್ದ‌ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ.


ಇದನ್ನೂ ಓದಿ: Heavy Rain: ಬಿರುಗಾಳಿ ಸಹಿತ ಭಾರಿ ಮಳೆ, ಸಿಡಿಲು ಬಡಿದು 14 ಕುರಿ, ಕುದುರೆ ಸಾವು


ವಿಶ್ವನಾಥ್, ನರೇಂದ್ರ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ಇಬ್ಬರು ವಿದ್ಯಾರ್ಥಿಗಳು ಕೂಡಾ ಎಬಿವಿಪಿ ಸಂಘಟನೆಗೆ ಸೇರಿದವರಾಗಿದ್ದಾರೆ. ಘಟನೆ ಖಂಡಿಸಿ ಇಂದು ಎಬಿವಿಪಿಯಿಂದ ಪ್ರತಿಭಟನೆ ನಡೆಸಲು ಮುಂದಾಗಿದೆ.

Published by:Mahmadrafik K
First published: