HOME » NEWS » State » CRIME NEWS CHITRADURGA MAN KILLED HIS FRIEND AFTER DOUBTING EXTRA MARITAL AFFAIR WITH HIS WIFE VTC SCT

Crime News: ಹೆಂಡತಿ ಜೊತೆ ಗೆಳೆಯನ ಅಕ್ರಮ ಸಂಬಂಧದ ಅನುಮಾನದಲ್ಲಿ ಸ್ನೇಹಿತನ ಬರ್ಬರ ಹತ್ಯೆ

Chitradurga Murder: ಚಿತ್ರದುರ್ಗದಲ್ಲಿ ತನ್ನ ಹೆಂಡತಿ ಮತ್ತು ಆತ್ಮೀಯ ಗೆಳೆಯನ ನಡುವೆ ಅಕ್ರಮ ಸಂಬಂಧವಿದೆ ಎಂದು ಮೂಡಿದ ಸಣ್ಣ ಅನುಮಾನದಿಂದ ವ್ಯಕ್ತಿಯೋರ್ವ ಆಪ್ತ ಗೆಳೆಯನನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ.

news18-kannada
Updated:January 18, 2021, 7:53 AM IST
Crime News: ಹೆಂಡತಿ ಜೊತೆ ಗೆಳೆಯನ ಅಕ್ರಮ ಸಂಬಂಧದ ಅನುಮಾನದಲ್ಲಿ ಸ್ನೇಹಿತನ ಬರ್ಬರ ಹತ್ಯೆ
ಸಾಂದರ್ಭಿಕ ಚಿತ್ರ
  • Share this:
ಚಿತ್ರದುರ್ಗ (ಜ. 18): ಅವರಿಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದ ಗೆಳೆಯರು. ಇವನ ಮನೆಗೆ ಅವನು, ಅವನ ಮನೆಗೆ ಇವನು ಬಂದು ಹೋಗೋದು ಕಾಮನ್ ಆಗಿತ್ತು. ಆದರೆ, ಇವರಿಬ್ಬರ ನಡುವೆ ಹೆಣ್ಣಿನ ವಿಷಯಕ್ಕೆ ಮೂಡಿದ ಸಣ್ಣದೊಂದು ಅನುಮಾನ ಆತ್ಮೀಯ ಗೆಳೆಯನ ಜೀವವನ್ನೇ ಬಲಿ ಪಡೆದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿರುವ ಈ ಹತ್ಯೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಹೊಡೆದ ಹೊಡೆತಕ್ಕೆ ತಲೆಯಲ್ಲಿ ನೆತ್ತರು ಸುರಿದು ಬರ್ಬರವಾಗಿ  ಕೊಲೆಯಾಗಿರೋ ಈ ವ್ಯಕ್ತಿ ಹೆಸರು ಯೋಗರಾಜ್. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ವೆಂಗಳಾಪುರ ಗ್ರಾಮದವನು. ಹೀಗೆ ಕೊಲೆಯಾಗಿ ಮಲಗಿರುವ ಯೋಗರಾಜನ ಹಿಂದೆ ಒಂದು ರೋಚಕ ಸ್ಟೋರಿ ಇದೆ.

ಅದೇನೆಂದರೆ, ಮೂಲತಃ ವೆಂಗಳಾಪುರ ಗ್ರಾಮದ ಯೋಗರಾಜ್, ಅದೇ ಗ್ರಾಮದ ಚಿದಾನಂದ ಎಂಬುವವನ ಜೊತೆ ಸ್ನೇಹ ಬೆಳೆಸಿಕೊಂಡಿದ್ದ. ಇವರಿಬ್ಬರ ಸ್ನೇಹ ಮತ್ತು ಸಲುಗೆ ಎರಡೂ ಕುಟುಂಬಗಳ ನಡುವೆ ಬಾಂಧವ್ಯ ಬೆಸೆದಿತ್ತು. ಹೀಗಿರುವಾಗ ಕೊಲೆಯಾಗಿರೋ ಯೋಗರಾಜ್ ಆಗಾಗ ಚಿದಾನಂದನ ಮನೆಗೆ ಹೋಗಿ ಬರುತ್ತಿದ್ದ. ಅಲ್ಲದೆ, ಅವನ ಹೆಂಡತಿ ಜೊತೆ ಸಲಿಗೆಯಿಂದಲೂ ಮಾತನಾಡುತ್ತಿದ್ದ. ಆದರೆ ಇವರ ಈ ಗೆಳೆತನ, ಅನ್ಯೋನ್ಯತೆ ಬಹಳ ದಿನಗಳ ಕಾಲ ಉಳಿಯಲಿಲ್ಲ. ತನ್ನ ಪತ್ನಿ ಜೊತೆ ಕೊಲೆಯಾಗಿರೋ ಯೋಗರಾಜ ಮಾತನಾಡೋದು, ಸಲಿಗೆಯಿಂದ ಇರೋದು ಗೆಳೆಯ ಚಿದಾನಂದನಿಗೆ ಇವರಿಬ್ಬರ ಅನೈತಿಕ ಸಂಬಂಧದ ಅನುಮಾನ ಮೂಡಿಸಿತ್ತು. ಇದರಿಂದಲೇ ಚಿದಾನಂದ, ಯೋಗರಾಜನ ಗೆಳೆತನದಲ್ಲಿ ಬಿರುಕು ಮೂಡಿತ್ತು.

ಇದನ್ನೂ ಓದಿ: Murder Mystery: ಪ್ರೇಯಸಿಯನ್ನು ಕೊಂದು, ಬೆಡ್ ರೂಮಿನ ಗೋಡೆಯೊಳಗೆ ಶವ ಮುಚ್ಚಿಟ್ಟ ಪ್ರೇಮಿ!

ಅಲ್ಲದೆ, ಚಿದಾನಂದನ ಹೆಂಡತಿ ರೇಖಾ ಜೊತೆ ಯೋಗರಾಜ ಅನೈತಿಕ ಸಂಬಧ ಇಟ್ಟುಕೊಂಡಿದ್ದಾನೆ ಅನ್ನೋ ಕಾರಣಕ್ಕೆ ಆಗಾಗ ಗಲಾಟೆಗಳೂ ನಡೆದು ಹೋಗಿ ಇಬ್ಬರು ಮಾತು ಬಿಟ್ಟಿದ್ದರು. ಆದರೆ, ಜ. 15ರಂದು ಯೋಗರಾಜನನ್ನು ಚಿದಾನಂದ ತನ್ನ ಅಳಿಯ ವಿನಯ್ ಜೊತೆ ಸೇರಿ ರೀಪರ್ ಕಟ್ಟಿಗೆಯಿಂದ ನೆತ್ತರು ಸುರಿಯುವಂತೆ ಹಿಗ್ಗಾಮುಗ್ಗ ಥಳಿಸಿ ಕೊಲೆ ಮಾಡಿದ್ದಾನೆ.

ಇನ್ನು,  ಹೆಣ್ಣಿನ ವಿಷಯಕ್ಕೆ ವೆಂಗಳಾಪುರ ಗ್ರಾಮದ ಅಂಗನವಾಡಿ ಬಳಿ ನಡೆದ ಈ ಹತ್ಯೆ ಈ ಗ್ರಾಮದ ಜನರನ್ನ ಬೆಚ್ಚಿ ಬೀಳಿಸಿದೆ. ಆಕ್ರೋಶಗೊಂಡಿರುವ ಯೋಗರಾಜನ ಸಂಬಂಧಿಕರು ಕೃತ್ಯವನ್ನು ಖಂಡಿಸಿದ್ದು, ಕೊಲೆಯ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು, ಅವನ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧವಾಗಿ  ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಳಿಕ ಕೊಲೆ ಮಾಡಿರುವ ಇಬ್ಬರು ಆರೋಪಿಗಳಲ್ಲಿ ಚಿದಾನಂದ ತಲೆಮರೆಸಿಕೊಂಡಿದ್ದು, ಚಿದಾನಂದನ ಅಳಿಯ ವಿನಯನನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಷ್ಟೆ ಅಲ್ಲದೆ ಆರೋಪಿ ಚಿದಾನಂದನ ಸೆರೆಗೆ ಬಲೆ ಬೀಸಿ ಹುಡುಕಾಟ ನಡೆಸಿದ್ದಾರೆ. ಒಟ್ಟಾರೆ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಅನ್ನೋ ವಿಷಯಕ್ಕೆ ಗೆಳೆಯ ಯೋಗರಾಜ ಕೊಲೆಯಾಗಿದ್ದಾನೆ. ಇತ್ತ ಸ್ನೇಹವನ್ನು ಪ್ರಮಾಣಿಸಿ ನೋಡದ ಚಿದಾನಂದ ಗೆಳಯನನ್ನು  ಬರ್ಬರವಾಗಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದಾನೆ.(ವರದಿ : ವಿನಾಯಕ ತೊಡರನಾಳ್)
Published by: Sushma Chakre
First published: January 18, 2021, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories