HOME » NEWS » State » CRIME NEWS BIG TWIST TO VIJAYAPURA SUICIDE CASE MARRIED WOMAN DIES AFTER CONSUMING POISON WITH LOVER SCT

Vijayapura Crime: ಪ್ರಿಯಕರನ ಮಡಿಲಲ್ಲೇ ಪ್ರೇಯಸಿ ವಿಷ ಕುಡಿದು ಪ್ರಾಣ ಬಿಟ್ಟ ಪ್ರಕರಣಕ್ಕೆ ಹೊಸ ಟ್ವಿಸ್ಟ್

Vijayapura Suicide Case: ಎಮ್ಮೆ ಮಾರಾಟ ಮಾಡುವ ಬ್ರೋಕರ್ ಕೆಲಸ ಮಾಡುತ್ತಿದ್ದ ಬಸವರಾಜ್ ರೇಣುಕಾಗೆ ಎಮ್ಮೆ ಕೊಡಿಸೋ ವಿಚಾರದಲ್ಲಿ ಪರಿಚಯವಾಗಿ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.

news18-kannada
Updated:June 25, 2021, 2:36 PM IST
Vijayapura Crime: ಪ್ರಿಯಕರನ ಮಡಿಲಲ್ಲೇ ಪ್ರೇಯಸಿ ವಿಷ ಕುಡಿದು ಪ್ರಾಣ ಬಿಟ್ಟ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಸಾಂದರ್ಭಿಕ ಚಿತ್ರ.
  • Share this:
ವಿಜಯಪುರ (ಜೂನ್ 25): ವಿಜಯಪುರದ ಮುದ್ದೇಬಿಹಾಳ ತಾಲೂಕಿನಲ್ಲಿ ವಿಷ ಸೇವಿಸಿ ಪ್ರಿಯಕರನ ತೊಡೆ ಮೇಲೆ ನರಳಿ ನರಳಿ ಪ್ರಾಣಬಿಟ್ಟ ಮಹಿಳೆಯ ಫೋಟೋಗಳು ಭಾರೀ ವೈರಲ್ ಆಗಿತ್ತು. ಇಡೀ ರಾಜ್ಯದ ಗಮನ ಸೆಳೆದಿದ್ದ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಿವಾಹಿತನಾಗಿದ್ದ ಬಸವರಾಜ್ ಆಲ್ಕೋಹಾಲ್​ನಲ್ಲಿ ವಿಷ ಬೆರೆಸಿ ಪ್ರೇಯಸಿಗೆ ಕುಡಿಸಿದ್ದ. ಆದರೆ, ಆಕೆಯೊಂದಿಗೇ ಸಾಯುವುದಾಗಿ ಮಾತು ಕೊಟ್ಟಿದ್ದ ಆತ ಮಾತ್ರ ಸ್ವಲ್ಪ ವಿಷ ಕುಡಿದು ಬಚಾವಾಗಿದ್ದ. ಮೃತಳಾದ ರೇಣುಕಾ ಮುಖದ ಮೇಲೆ ಗಾಯಗಳೂ ಆಗಿದ್ದು, ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಪ್ರೇಯಸಿಗೆ ಜಾಸ್ತಿ ವಿಷ ಕುಡಿಸಿ ರಕ್ತ ಕಾರಿಕೊಂಡು ಸಾಯುವಂತೆ ಮಾಡಿದ್ದ ಬಸವರಾಜ್ ತಾನು ಕಡಿಮೆ ವಿಷ ಕುಡಿದು ನಾಟಕವಾಡಿದ್ದ. ಮೃತ ಮಹಿಳೆ ಮುಖದ ಮೇಲೆ ಗಾಯಗಳಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಇನ್ನು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ರೇಣುಕಾಳ ಸೋದರ, ನನ್ನ ಅಕ್ಕನನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಬಸವರಾಜ್ ಸಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ರೇಣುಕಾಳ ಸಹೋದರ ಲಕ್ಕಪ್ಪ ದೂರು ದಾಖಲಿಸಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಹೊರಭಾಗದಲ್ಲಿ 2 ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಗಂಗೂರು ಗ್ರಾಮದ 36 ವರ್ಷದ ರೇಣುಕಾ ಝಳಕಿ ಹಾಗೂ ಹಡಲಗೇರಿ ಗ್ರಾಮದ 40 ವರ್ಷದ ಬಸವರಾಜ್ ಕಿಲಾರಹಟ್ಟಿ ಅನೈತಿಕ ಸಂಬಂಧ ಹೊಂದಿದ್ದರು. ಇಬ್ಬರಿಗೂ ಬೇರೊಬ್ಬರೊಂದಿಗೆ ಮದುವೆಯಾಗಿ ಮಕ್ಕಳೂ ಇದ್ದರು. ಇಬ್ಬರೂ ಬಿದಕುಂದಿ ಗ್ರಾಮದ ಹೊರವಲಯದಲ್ಲಿ ಸೇರಿ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದರು. ಈ ವೇಳೆ ಬಸವರಾಜ್ ಕುಡಿದ ಅಮಲಿನಲ್ಲಿದ್ದ, ಕಡಿಮೆ ವಿಷ ಕುಡಿದಿದ್ದ. ಆದರೆ, ರೇಣುಕಾ ಹೆಚ್ಚು ವಿಷ ಸೇವಿಸಿದ್ದರಿಂದ ಸ್ಥಳದಲ್ಲೆ ಅಸ್ವಸ್ಥಗೊಂಡು ಒದ್ದಾಡಿ ಪ್ರಾಣ ಬಿಟ್ಟಿದ್ದಳು.

ಇದನ್ನೂ ಓದಿ: Crime News: ವಿಷ ಕುಡಿದು ಪ್ರಿಯಕರನ ತೊಡೆ ಮೇಲೇ ಪ್ರಾಣ ಬಿಟ್ಟ ವಿವಾಹಿತೆ; ಇದು ಅಂತಿಂಥಾ ಲವ್ ಸ್ಟೋರಿಯಲ್ಲ!

ಆಕೆಯನ್ನು ತೊಡೆ ಮೇಲೆ ಮಲಗಿಸಿಕೊಂಡಿದ್ದ ಬಸವರಾಜ್ ನಾನೂ ನಿನ್ನ ಜೊತೆ ಬರುತ್ತೇನೆ ಎಂದು ಕೂಗಾಡುತ್ತಿದ್ದ. ಅಷ್ಟರಲ್ಲೇ ಕುರಿಗಾಯಿಗಳು ಗುಡ್ಡದಲ್ಲಿ ಗಲಾಟೆ ಕೇಳಿ ನೋಡಲು ಬಂದಾಗ ರೇಣುಕಾ ರಕ್ತದ ಮಡುವಿನಲ್ಲಿ ಬಸವರಾಜ್ ಮಡಿಲಲ್ಲಿ ಮಲಗಿದ್ದಳು. ಅದನ್ನು ಅವರು ವಿಡಿಯೋ ಮಾಡಿಕೊಂಡಿದ್ದರು. ಬಸವರಾಜ್ ತೊಡೆ ಮೇಲೆಯೇ ಬಾಯಿಂದ ರಕ್ತಕಾರಿ ಒದ್ದಾಡಿದ ರೇಣುಕಾ ಅಲ್ಲೇ ಸಾವನ್ನಪ್ಪಿದ್ದಳು. ಒದ್ದಾಡುತ್ತಿದ್ದರೂ ಆಕೆಯನ್ನು ಆಸ್ಪತ್ರೆಗೆ ದಾಖಲಿಸದೆ ತೊಡೆ ಮೇಲೆಯೆ ಮಲಗಿಸಿಕೊಂಡಿದ್ದ ಬಸವರಾಜ್ ಮೇಲೆ ಈಗ ದೂರು ದಾಖಲಾಗಿದೆ.

ಎಮ್ಮೆ ಮಾರಾಟ ಮಾಡುವ ಬ್ರೋಕರ್ ಕೆಲಸ ಮಾಡುತ್ತಿದ್ದ ಬಸವರಾಜ್ ರೇಣುಕಾಗೆ ಎಮ್ಮೆ ಕೊಡಿಸೋ ವಿಚಾರದಲ್ಲಿ ಪರಿಚಯವಾಗಿ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Bangalore Crime: ಮಾಜಿ ಕಾರ್ಪೋರೇಟರ್ ರೇಖಾ ಕೊಲೆ ಪ್ರಕರಣ; ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್ವಿಜಯಪುರದ ಗಂಗೂರು ಗ್ರಾಮದ 36 ವರ್ಷದ ರೇಣುಕಾ ಝಳಕಿ ಹಾಗೂ ಹಡಲಗೇರಿ ಗ್ರಾಮದ 40 ವರ್ಷದ ಕುಡುಕ ಬಸವರಾಜ್ ಕಿಲಾರಹಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಬೇರೊಬ್ಬರೊಂದಿಗೆ ಮದುವೆಯಾಗಿ ರೇಣುಕಾಗೆ 3 ಮಕ್ಕಳು, ಬಸವರಾಜ್ ಗೆ 6 ಮಕ್ಕಳು ಇದ್ದರೂ ಅನೈತಿಕ ಸಂಬಂಧ ಹೊಂದಿದ್ದರು.
Youtube Video

ಬುಧವಾರ ಸಂಜೆ ಇಬ್ಬರೂ ಬಿದಕುಂದಿ ಗ್ರಾಮದ ಹೊರವಲಯದಲ್ಲಿ ಸೇರಿ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದರು. ಈ ವೇಳೆ ಬಸವರಾಜ್ ಕುಡಿದ ಅಮಲಿನಲ್ಲಿದ್ದ ಮತ್ತು ಕಡಿಮೆ ವಿಷ ಕುಡಿದಿದ್ದ.ಆದರೆ, ರೇಣುಕಾ ಹೆಚ್ಚು ವಿಷ ಸೇವಿಸಿದ್ದರಿಂದ ಸ್ಥಳದಲ್ಲೆ ಅಸ್ವಸ್ಥಗೊಂಡು ಒದ್ದಾಡಿದ್ದಳು. ಈ ವೇಳೆ ಆಕೆಯನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಂತೈಸುತ್ತಿದ್ದ ಪ್ರಿಯಕರ ಬಸವರಾಜ್ ತೊಡೆ ಮೇಲೆಯೇ ರೇಣುಕಾ ರಕ್ತ ಕಾರಿಕೊಂಡು, ಒದ್ದಾಡಿ ಸಾವನ್ನಪ್ಪಿದ್ದಳು.
Published by: Sushma Chakre
First published: June 25, 2021, 2:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories