ಬೆಂಗಳೂರಿನಲ್ಲಿ ಎಟಿಎಂ ಒಡೆದು, ಲಕ್ಷಾಂತರ ರೂ. ದೋಚಿದ ದರೋಡೆಕೋರರು

Bangalore Crime: ಬೆಂಗಳೂರಿನ ಕೆ.ಆರ್ ಪುರದ ಎಟಿಎಂಗೆ ನಿನ್ನೆ ಸಂಜೆ 8 ಲಕ್ಷ ರೂ. ಹಣವನ್ನು ತುಂಬಲಾಗಿತ್ತು. ನಿನ್ನೆ ರಾತ್ರಿಯೇ ಎಟಿಎಂಗೆ ನುಗ್ಗಿದ್ದ ದರೋಡೆಕೋರರು ಅದರಲ್ಲಿದ್ದ ಹಣ ದೋಚಿದ್ದಾರೆ. ಇಂದು ಬೆಳಗ್ಗೆ ಸಾರ್ವಜನಿಕರು ಎಟಿಎಂಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

news18-kannada
Updated:October 2, 2020, 3:48 PM IST
ಬೆಂಗಳೂರಿನಲ್ಲಿ ಎಟಿಎಂ ಒಡೆದು, ಲಕ್ಷಾಂತರ ರೂ. ದೋಚಿದ ದರೋಡೆಕೋರರು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ. 2): ಕೊರೋನಾದಿಂದಾಗಿ ಜನರು ಮನೆಯಿಂದ ಹೊರಬರಲು ಯೋಚಿಸುವಂತಹ ಪರಿಸ್ಥಿತಿ ಇದೆ. ಆದರೂ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳೇನೂ ಕಡಿಮೆಯಾಗಿಲ್ಲ. ಲಾಕ್​ಡೌನ್ ಅವಧಿಯಲ್ಲೂ ಕೂಡ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದ್ದವು. ಇದೀಗ ನಗರದಲ್ಲಿ ಅಪರಾಧ ಪ್ರಕರಣಗಳು ಮತ್ತಷ್ಟು ಹೆಚ್ಚಾಗಿದ್ದು, ನಿನ್ನೆ ರಾತ್ರಿ ಎಟಿಎಂ ಯಂತ್ರವನ್ನು ಒಡೆದು ಲಕ್ಷಾಂತರ ರೂ. ಮೌಲ್ಯದ ಹಣ ಎತ್ತೊಯ್ದಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರದಲ್ಲಿ ನಡೆದಿದೆ. ಇಲ್ಲಿನ ಭಟ್ಟರಹಳ್ಳಿ ಬಳಿ ಇತ್ತೀಚಿಗೆ ಆಕ್ಸಿಸ್ ಬ್ಯಾಂಕ್​ಗೆ ಸೇರಿದ ಹೊಸ ಎಟಿಎಂ ಆರಂಭಿಸಲಾಗಿತ್ತು. ಕಳೆದ ರಾತ್ರಿ ಎಟಿಎಂಗೆ ಬಂದ ದುಷ್ಕರ್ಮಿಗಳ ಗುಂಪೊಂದು ವೆಲ್ಡಿಂಗ್ ಕಟರ್ ಮೂಲಕ ಎಟಿಎಂ ಯಂತ್ರ ಒಡೆದು ಹಣ ದೋಚಿ ಎಸ್ಕೇಪ್ ಆಗಿದ್ದಾರೆ.

ಎಟಿಎಂಗೆ ನಿನ್ನೆ ಸಂಜೆ 8 ಲಕ್ಷ ರೂ. ಹಣವನ್ನು ತುಂಬಲಾಗಿತ್ತು. ನಿನ್ನೆ ರಾತ್ರಿಯೇ ಎಟಿಎಂಗೆ ನುಗ್ಗಿದ್ದ ದರೋಡೆಕೋರರು ಅದರಲ್ಲಿದ್ದ ಹಣ ದೋಚಿದ್ದಾರೆ. ಇಂದು ಬೆಳಗ್ಗೆ ಸಾರ್ವಜನಿಕರು ಎಟಿಎಂಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ದುಷ್ಕರ್ಮಿಗಳು ಎಟಿಎಂಗೆ ನುಗ್ಗಿದ್ದು ವೆಲ್ಡಿಂಗ್ ಗ್ಯಾಸ್ ಬಳಸಿ ಎಟಿಎಂ ಯಂತ್ರವನ್ನ ಕೊರೆದು ಹಾಕಿದ್ದಾರೆ. ಬಳಿಕ ಎಟಿಎಂನಲ್ಲಿದ್ದ ಲಕ್ಷಾಂತರ ಮೌಲ್ಯದ ನಗದು ದೋಚಿ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ತಮಿಳುನಾಡು ದಂಪತಿಯಿಂದ ಕಿಡ್ನಾಪ್ ಆಗಿದ್ದ ಬಾಲಕಿಯನ್ನು ಪತ್ತೆಹಚ್ಚಿದ್ದು ಕನ್ನಡ ಭಾಷೆ!

ಈ ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳಕ್ಕೆ ಎಸಿಪಿ ಮನೋಜ್ ಕುಮಾರ್, ಕೆ ಆರ್ ಪುರ ಇನ್ಸ್‌ಪೆಕ್ಟರ್ ಅಂಬರೀಶ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಲ್ಕು ತಿಂಗಳ ಹಿಂದೆ ಆರಂಭವಾದ ಈ ಎಟಿಎಂಗೆ ಸೂಕ್ತ ಭದ್ರತಾ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ಎಟಿಎಂಗೆ ರಾತ್ರಿ ವೇಳೆ ಸೆಕ್ಯುರಿಟಿ ಇರಲಿಲ್ಲ. ಹಾಗೂ ಅಲಾರಾಂ ಸಹ ಇರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಕೆ ಆರ್ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಭದ್ರತಾ ಲೋಪ ಮತ್ತು ದರೋಡೆಕೋರರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
Published by: Sushma Chakre
First published: October 2, 2020, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading