HOME » NEWS » State » CRIME NEWS BELAGAVI POLICE SAVED TEENAGE GIRL WHO ARE KIDNAPED BY PROSTITUTION GANG CSB SCT

Crime News: ಬೆಳಗಾವಿಯಲ್ಲಿ ವೇಶ್ಯಾವಾಟಿಕೆ ದಂಧೆಕೋರರ ಕೈಗೆ ಸಿಲುಕಿದ್ದ ಯುವತಿಯ ರಕ್ಷಣೆ

Belagavi Crime: ವೇಶ್ಯಾವಾಟಿಕೆ ಜಾಲದಿಂದ ಬೆಳಗಾವಿ ಪೊಲೀಸರು ರಕ್ಷಿಸಿದ ಪೊಲೀಸರು ರಕ್ಷಿಸಿದ ಇಬ್ಬರು ಯುವತಿಯರಲ್ಲಿ ಒಬ್ಬಳು ಕರ್ನಾಟಕ ಮೂಲದವಳು. ಇನ್ನೋರ್ವ ಯುವತಿ ಉತ್ತರ ಪ್ರದೇಶದ ಗಜಿಯಾಬಾದ್ ಮೂಲದವಳು.

news18-kannada
Updated:February 25, 2021, 9:35 AM IST
Crime News: ಬೆಳಗಾವಿಯಲ್ಲಿ ವೇಶ್ಯಾವಾಟಿಕೆ ದಂಧೆಕೋರರ ಕೈಗೆ ಸಿಲುಕಿದ್ದ ಯುವತಿಯ ರಕ್ಷಣೆ
ಯುವತಿಯನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ ಬೆಳಗಾವಿ ಪೊಲೀಸರು
  • Share this:
 ಬೆಳಗಾವಿ (ಫೆ. 25): ಕಿಡ್ನಾಪ್ ಆಗಿ ಮಾಂಸದ ದಂಧೆಕೋರರ ಜಾಲದಲ್ಲಿ ಸಿಲುಕಿದ್ದ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದು, 3 ವರ್ಷ ನರಕಯಾತೆಯಿಂದ ಮುಕ್ತವಾದ ಆಕೆ ತನ್ನ ಪೋಷಕರ ಮಡಿಲು ಸೇರಿದ್ದಾಳೆ. ಬೆಳಗಾವಿ ಎಪಿಎಂಸಿ ಇನ್​ಸ್ಪೆಕ್ಟರ್ ಜಾವೀದ್ ಮುಶಾಪುರಿ ತಂಡದ ಕಾರ್ಯಾಚರಣೆ ವೇಳೆ ರಕ್ಷಣೆಗೆ ಒಳಗಾಗಿದ್ದ ಯುವತಿ ಇದೀಗ ಉತ್ತರ ಪ್ರದೇಶಕ್ಕೆ ವಾಪಾಸ್ ಆಗಿದ್ದಾಳೆ. ಮಗಳನ್ನು ಕಳೆದುಕೊಂಡು 3 ವರ್ಷಗಳಿಂದ ನೋವು ಅನುಭವಿಸುತ್ತಿದ್ದ ಕುಟುಂಬಸ್ಥರು ಇದೀಗ ಸಂತಸಗೊಂಡಿದ್ದಾರೆ.

ದೇಶದಲ್ಲಿ ಅದೆಷ್ಟೋ ಯುವತಿಯರು ವೇಶ್ಯಾವಾಟಿಕೆ ದಂಧೆಕೋರರ ಕೈಗೆ ಸಿಲುಕಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇದೇ ಫೆಬ್ರವರಿ 7ರಂದು ಠಾಣೆ ಇನ್​ಸ್ಪೆಕ್ಟರ್ ಜಾವೀದ್ ಮುಸಾಪುರಿ ನೇತೃತ್ವದ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ ಬೆಳಗಾವಿ ಸದಾಶಿವ ನಗರದ ಮನೆಯಲ್ಲಿ ದಾಳಿ ನಡೆಸಿತ್ತು. ಆಗ ಮಾಂಸ ದಂಧೆ ಮಾಡುತ್ತಿದ್ದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಮಾರುತಿ, ಸಿದ್ಧಪ್ಪ ಎಂಬುವವರನ್ನು ಬಂಧಿಸಿದ್ದರು. ಅವರ ಕಪಿಮುಷ್ಠಿಯಲ್ಲಿದ್ದ ಇಬ್ಬರು ಯುವತಿಯನ್ನು ರಕ್ಷಿಸಿದ್ದರು.

ಇಬ್ಬರು ಯುವತಿಯರನ್ನು ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆಯ ಉಜ್ವಲಾ ಮಹಿಳೆಯರ ರಕ್ಷಣೆ ಕೇಂದ್ರದಲ್ಲಿ ಇಡಲಾಗಿತ್ತು. ಇದರಲ್ಲಿ ಓರ್ವ ಯುವತಿ ಉತ್ತರ ಪ್ರದೇಶದ ಗಜಿಯಾಬಾದ್ ಮೂಲದವಳು. ಹೀಗೆ ಮಾಂಸದ ದಂಧೆಕೋರರ ಕೈಯಲ್ಲಿ ಸಿಲುಕಿದ್ದ ಯುವತಿಯನ್ನು ಬೆಳಗಾವಿ ಎಪಿಎಂಸಿ ಪೊಲೀಸರು ಸುರಕ್ಷಿತವಾಗಿ ಅವರ ತಂದೆ ಕೈಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೈಕ್​ಗೆ ಕಾರು ಡಿಕ್ಕಿ: ಇಬ್ಬರು ಫೂಡ್ ಡೆಲಿವರಿ ಹುಡುಗರ ಸಾವು

ಪೊಲೀಸರು ರಕ್ಷಿಸಿದ ಇಬ್ಬರು ಯುವತಿಯರಲ್ಲಿ ಓರ್ವ ಯುವತಿ ಕರ್ನಾಟಕ ಮೂಲದವಳು. ಇನ್ನೋರ್ವ ಯುವತಿ ಉತ್ತರ ಪ್ರದೇಶದ ಗಜಿಯಾಬಾದ್ ಮೂಲದವಳು ಎಂಬುದು ಬೆಳಕಿಗೆ ಬಂದಿತು. ಆದರೆ, ಕರ್ನಾಟಕ ಮೂಲದ ಯುವತಿಯ ಕೌನ್ಸಲಿಂಗ್ ಮಾಡಿ ಅವರ ಪೋಷಕರ ಕೈಗೆ ಹಸ್ತಾಂತರಿಸಲಾಯಿತು. ಗಜಿಯಾಬಾದ್ ಮೂಲದ ಯುವತಿಯ ಕುಟುಂಬಸ್ಥರನ್ನು ಹುಡುಕುವುದೇ ಕಷ್ಟವಾಗಿತ್ತು. ಯಾಕೆಂದರೆ ಆ ಯುವತಿ ಕುಟುಂಬ ಬಿಟ್ಟು 3 ವರ್ಷವಾಗಿತ್ತು. ಹೀಗಾಗಿ ಮೊದಲಿಗೆ ಯುವತಿಯನ್ನ ಮಹಿಳಾ ಕಲ್ಯಾಣ ಸಂಸ್ಥೆಯ ಉಜ್ವಲಾ ಮಹಿಳೆಯರ ರಕ್ಷಣೆ ಕೇಂದ್ರದ ಸಂಯೋಜಕಿ ಸುರೇಖಾ ಪಾಟೀಲ್ ಎರಡು ವಾರಗಳ ಕಾಲ ಕೌನ್ಸಿಂಗ್ ಗೆ ಒಳಪಡಿಸಿದರು.

ಆಕೆಯ ಮನಪರಿವರ್ತನೆ ಆದ ಬಳಿಕ ಯುವತಿಯಿಂದ ಕುಟುಂಬಸ್ಥರ ಮಾಹಿತಿ ಕಲೆ ಹಾಕಿ ತನಿಖೆ ನಡೆಸಿದ್ದಾಗ ಯುವತಿ ಕಿಡ್ನಾಪ್ ಆಗಿರುವ ಕೇಸ್ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಆಗ ಗಜಿಯಾಬಾದ್ ಪೊಲೀಸರ ಮೂಲಕ ಅವರ ಕುಟುಂಬಸ್ಥರನ್ನು ಸಂಪರ್ಕಿಸಿ, ಈ ಯುವತಿಯನ್ನ ಬೆಳಗಾವಿ ಪೊಲೀಸರು ಗಾಜಿಯಾಬಾದ್ ಪೊಲೀಸರ ಮೂಲಕ ಪೋಷಕರಿಗೆ ಒಪ್ಪಿಸಿದ್ದಾರೆ.
ದಂಧೆಕೋರರ ಕೈಯಲ್ಲಿ ಸಿಕ್ಕು ನರಕಯಾತನೆ ಅನುಭವಿಸುತ್ತಿದ್ದ ಯುವತಿಯರನ್ನು ಇನ್​ಸ್ಪೆಕ್ಟರ್​ ಜಾವೇದ್ ಮುಶಾಪುರಿ ಮತ್ತು ಉಜ್ವಲಾ ಕೇಂದ್ರದ ಸುರೇಖಾ ಪಾಟೀಲ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಬೆಳಗಾವಿ ಪೊಲೀಸ್ ಆಯುಕ್ತ ತ್ಯಾಗರಾಜನ್ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.
Published by: Sushma Chakre
First published: February 25, 2021, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories