HOME » NEWS » State » CRIME NEWS BELAGAVI MAN RETURNED HOME AFTER 10 YEARS WHO IS IN CHITRADURGA REHABILITATION CENTER VTC SCT

ಬೆಳಗಾವಿಯಲ್ಲಿ ಸತ್ತಿದ್ದಾನೆ ಎಂದುಕೊಂಡಿದ್ದ ಮಗ 10 ವರ್ಷಗಳ ಬಳಿಕ ಮರಳಿ ಬಂದ!

ಯಾವುದೋ ಸಣ್ಣ ವಿಷಯಕ್ಕೆ ಹೆಂಡತಿಯ ಜೊತೆ ಜಗಳ ಮಾಡಿಕೊಂಡಿದ್ದ ಬೆಳಗಾವಿಯ ಲಕ್ಷ್ಮಣ್ ಕಳೆದ 10‌ ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ. ಬಳಿಕ, ಯಲ್ಲಪ್ಪ ಮಾನಸಿಕ ಅಸ್ವಸ್ಥನಾಗಿ ಚಿತ್ರದುರ್ಗ ನಗರದ ಬೀದಿ ಬದಿಯಲ್ಲಿ ಸುತ್ತುತ್ತಾ ಬಳಲುತ್ತಿದ್ದ.

news18-kannada
Updated:January 23, 2021, 9:41 AM IST
ಬೆಳಗಾವಿಯಲ್ಲಿ ಸತ್ತಿದ್ದಾನೆ ಎಂದುಕೊಂಡಿದ್ದ ಮಗ 10 ವರ್ಷಗಳ ಬಳಿಕ ಮರಳಿ ಬಂದ!
10 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ
  • Share this:
ಚಿತ್ರದುರ್ಗ (ಜ. 23): ಆತ ಮನೆಯಲ್ಲಿ ತನ್ನ ಪತ್ನಿಯ ಜೊತೆ ಜಗಳ ಮಾಡಿಕೊಂಡಿದ್ದ . ಕೌಟುಂಬಿಕ ಕಲಹಕ್ಕೆ ಆತ ಮನೆ ಬಿಟ್ಟು ಹತ್ತು ವರ್ಷಗಳೇ ಉರುಳಿದ್ದವು. ಕೌಟುಂಬಿಕ ಕಲಹದಿಂದ ಆತ ಊರು ಬಿಟ್ಟು ಮಾನಸಿಕ ಅಸ್ವಸ್ಥನಾಗಿದ್ದ. ವರ್ಷಗಟ್ಟಲೆ ಮಗನನ್ನು ಹುಡುಕಿದ್ದ ಪೋಷಕರು ಆತ ಸತ್ತೇ ಹೋಗಿದ್ದಾನೆ ಎಂದು ಸುಮ್ಮನಾಗಿದ್ದರು. ಆದರೆ
ಚಿತ್ರದುರ್ಗದಲ್ಲಿ ಸೇಫಾಗಿದ್ದ ಆ ವ್ಯಕ್ತಿ ಇದೀಗ ಮತ್ತೆ ಮರಳಿ ತನ್ನ ಮನೆಯನ್ನು ಸೇರಿದ್ದು, ಸಂಸಾರದಲ್ಲಿ ಸಂತಸ ಮೂಡಿದೆ. 

ಈತನ  ಹೆಸರು ಲಕ್ಷ್ಮಣ ಯಲ್ಲಪ್ಪ ಹುಬ್ಬಳ್ಳಿ. ಈತ ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ಸಮೀಪದ ಕಡ್ಲೆಗೊಬ್ಬ ನಿವಾಸಿ. ಕಳೆದ ಹತ್ತು ವರ್ಷಗಳ ಹಿಂದೆ ಮದುವೆಯಾಗಿ ಸುಖ ಸಂಸಾರಿಯಾಗಿದ್ದ. ಮಂಡ್ಯ, ಮತ್ತು ಮೈಸೂರಿನ ಕಡೆ ಕಾರ್ಮಿಕನಾಗಿ ಕೆಲಸ ಮಾಡಿಕೊಂಡು ಸಂಸಾರ ನಡೆಸ್ತಿದ್ದ. ಆದರೆ ಯಾವುದೋ ಸಣ್ಣ ವಿಷಯಕ್ಕೆ ಹೆಂಡತಿಯ ಜೊತೆ ಜಗಳ ಮಾಡಿಕೊಂಡಿದ್ದ ಲಕ್ಷ್ಮಣ್ ಕಳೆದ 10‌ ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ. ಬಳಿಕ, ಯಲ್ಲಪ್ಪ ಮಾನಸಿಕ ಅಸ್ವಸ್ಥನಾಗಿ ಚಿತ್ರದುರ್ಗ ನಗರದ ಬೀದಿ ಬದಿಯಲ್ಲಿ ಸುತ್ತುತ್ತಾ ಬಳಲುತ್ತಿದ್ದ. ಆಗ ಚಿತ್ರದುರ್ಗದ ನಿರಾಶ್ರಿತ ಕೇಂದ್ರದ ಅಧೀಕ್ಷಕ ಮಹದೇವಯ್ಯ ಮತ್ತು ತಂಡದವರು ಈತನನ್ನು ರಕ್ಷಣೆ ಮಾಡಿ, ಗೋನೂರು ನಿರಾಶ್ರಿತರ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲದೆ, ಪ್ರತಿ ದಿನ ಆತನ ಆರೋಗ್ಯದ ಮೇಲೆ ನಿಗಾ ವಹಿಸಿ, ನುರಿತ ವೈದ್ಯರ ಬಳಿ  ಚಿಕಿತ್ಸೆ ಕೊಡಿಸಿದ್ದರು.

ಇದನ್ನೂ ಓದಿ: Mission Paani: ಭಾರತದಲ್ಲಿ ಶುದ್ಧ ನೀರೇ ಇಲ್ಲವಾದರೆ ಏನಾದೀತು?; ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ ಖಚಿತ

ಕಳೆದ ಹತ್ತು ವರ್ಷಗಳಿಂದ ಇದೇ ನಿರಾಶ್ರಿತರ ಕೇಂದ್ರದಲ್ಲಿದ್ದ ಲಕ್ಷ್ಮಣ್ ಗೆ, ಮಾನಸಿಕ ತಜ್ಞರ ಚಿಕಿತ್ಸೆಯಿಂದ ಕೊಂಚ ಮಟ್ಟಿಗೆ ಜ್ಞಾನ ಬಂದಿತ್ತು. ಇದರಿಂದ ಕುಟುಂಬದ ಕುರಿತು ಮಾಹಿತಿ ನೀಡಿದ್ದ. ಆ ಮಾಹಿತಿ ಆಧರಿಸಿ ನಿರಾಶ್ರಿತರ ಕೇಂದ್ರದ ಅಧಿಕಾರಿ ಮಹದೇವಯ್ಯ ಲಕ್ಷ್ಮಣ್ ಯಲ್ಲಪ್ಪ ಪ್ಯಾಮಿಲಿ ಸಂಪರ್ಕಿಸಿ ಕುಟುಂಬದ ಜೊತೆ ಕಳುಹಿಸಿ ಕೊಟ್ಟಿದ್ದಾರೆ. ಇನ್ನು, ನಿರಾಶ್ರಿತ ಕೇಂದ್ರದ ಅಧಿಕಾರಿಗಳು ಬೆಳಗಾವಿ ಜಿಲ್ಲೆಯ ರಾಮದುರ್ಗ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ, ವಾಟ್ಸಪ್ ಮೂಲಕ ಲಕ್ಷ್ಮಣ್ ಫೋಟೋ ಕಳುಹಿಸಿದ್ದರು. ಇದರಿಂದ ಇಂದು ಚಿತ್ರದುರ್ಗ ಬಳಿಯ ಗೋನೂರು ಸಮೀಪದ ನಿರಾಶ್ರಿತರ ಕೇಂದ್ರಕ್ಕೆ ಲಕ್ಷ್ಮಣ ಯಲ್ಲಪ್ಪನ ಕುಟುಂಬಸ್ಥರು ಆಗಮಿಸಿ, ಲಕ್ಷ್ಮಣನನ್ನು ಕಂಡು ಸಂತಸಗೊಂಡಿದ್ದರು. ನಂತರ ಕೇಂದ್ರದಲ್ಲಿದ್ದ ಸ್ನೇಹಿತರಿಗೆ ಧನ್ಯವಾದ ತಿಳಿಸಿ, ಸಂಬಂಧಿಕರ ಜೊತೆ ಮರಳಿ ಮನೆಗೆ ತೆರಳಿದ್ದರು.
Youtube Video

ಒಟ್ಟಾರೆ, ಕ್ಷುಲ್ಲಕ ಕಾರಣಕ್ಕೆ ಹತ್ತು ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥನಾಗಿ, ಮನೆ ಬಿಟ್ಟು ಬಂದಿದ್ದ ಲಕ್ಷ್ಮಣ್,  ನಿರಾಶ್ರಿತ ಕೇಂದ್ರದ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಹಕಾರದಿಂದ ಮತ್ತೆ ಮರಳಿ ಗೂಡು ಸೇರಿದ್ದು, ಅವನ ಸಂಸಾರದಲ್ಲಿ ಮತ್ತೆ ಸಂತಸ ಮನೆ ಮಾಡಿದೆ. ಹಾಗೇ, ನಿರಾಶ್ರಿತ ಕೇಂದ್ರದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.(ವರದಿ : ವಿನಾಯಕ ತೊಡರನಾಳ್)
Published by: Sushma Chakre
First published: January 23, 2021, 9:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories