ಬೆಂಗಳೂರು (ಆ. 10): ಕೊರೋನಾ ಭೀತಿಯಿಂದಾಗಿ ಕೆಲವರು ಮನೆಯಿಂದ ಹೊರಗೆ ಬರಲೂ ಭಯಪಡುತ್ತಿದ್ದಾರೆ. ಇನ್ನು ಕೆಲವರು ತಾವು ಮಜಾ ಮಾಡಿ, ಬೇರೆಯವರಿಗೆ ತೊಂದರೆ ಕೊಡಲೆಂದೇ ರಸ್ತೆಗೆ ಇಳಿಯುತ್ತಾರೆ. ಇದೇ ರೀತಿ ಬೇರೆಯವರಿಗೆ ತೊಂದರೆ ನೀಡುತ್ತಾ ಬೆಂಗಳೂರಿನ ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ನಾಲ್ವರು ಯುವಕರನ್ನು ಬಂಧಿಸಲಾಗಿದೆ. ರಸ್ತೆಯಲ್ಲಿ ಅಪಾಯಕಾರಿಯಾಗಿ ವೀಲಿಂಗ್ ಮಾಡುತ್ತಾ, ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಬ್ಯಾಟರಾಯನಪುರ ಸಂಚಾರಿ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ. ನೈಸ್ ರಸ್ತೆಯಲ್ಲಿ ಅಪಾಯಕಾರಿಯಾಗಿ ವೀಲಿಂಗ್ ಮಾಡುತ್ತಾ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಯುವಕರು ತಮ್ಮದೇ ಗುಂಪು ಕಟ್ಟಿಕೊಂಡು ಬಾಜಿ ನಡೆಸುತ್ತಿದ್ದರು. ಯುವಕರ ಮೊಬೈಲ್ನಲ್ಲಿ ಹಲವಾರು ಮಂದಿ ವೀಲಿಂಗ್ ಮಾಡುವ ವಿಡಿಯೋಗಳು ಪತ್ತೆಯಾಗಿತ್ತು. ವಿಡಿಯೋ ಪರಿಶೀಲನೆ ನಡೆಸಿ ಇತರರಿಗೆ ಬಲೆ ಬೀಸಿರುವ ಪೊಲೀಸರು ವೀಲಿಂಗ್ ಮಾಡಲು ಬಳಸುತ್ತಿದ್ದ 3 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Kerala Rains: ವಿಪರೀತ ಮಳೆಯಿಂದ ಕೇರಳದ 6 ಜಿಲ್ಲೆಗಳಲ್ಲಿಂದು ಹೈ ಅಲರ್ಟ್; ಇಡುಕ್ಕಿ ಭೂಕುಸಿತದ ಸಾವಿನ ಸಂಖ್ಯೆ 43ಕ್ಕೆ ಏರಿಕೆ
ಬೆಂಗಳೂರಿನ ಚಂದನ್, ಸುಮಂತ್, ಲಿಖಿತ್ ಮತ್ತು ವಿನಯ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ವಿರುದ್ಧ 3 ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೈಸ್ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದರೂ ತಮ್ಮ ವೀಲಿಂಗ್ ಕ್ರೇಜ್ ತೀರಿಸಿಕೊಳ್ಳಲು ಯುವಕರು ನೈಸ್ ರೋಡ್ಗೆ ತೆರಳುತ್ತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ