Bengaluru Crime News: ಬೆಂಗಳೂರು ಯುವತಿಯ ಶೂಟೌಟ್​ ಪ್ರಕರಣ​; ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ

Bangalore Crime: ಶುಭಶ್ರೀಗೆ ಶೂಟ್ ಮಾಡಿ, ಆತ್ಮಹತ್ಯೆಗೆ ಯತ್ನಿಸಿರುವ ಆರೋಪಿ ಅಮರೇಂದ್ರ 17 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದ. ಆ ಡೆತ್​ನೋಟ್ ಅನ್ನು ಜೇಬಿನೊಳಗೆ ಇಟ್ಟುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

news18-kannada
Updated:February 26, 2020, 9:55 AM IST
Bengaluru Crime News: ಬೆಂಗಳೂರು ಯುವತಿಯ ಶೂಟೌಟ್​ ಪ್ರಕರಣ​; ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ
ಶುಭಶ್ರೀ- ಅಮರೇಂದ್ರ ಪಟ್ನಾಯಕ್
  • Share this:
ಬೆಂಗಳೂರು (ಫೆ. 26): ಬೆಂಗಳೂರಿನ ಮಾರತ್ತಹಳ್ಳಿಯ ಮುನೇಕೊಳಲು ಬಳಿ ಮಂಗಳವಾರ ಸಂಜೆ ಯುವತಿಗೆ ಗುಂಡು ಹಾರಿಸಿ, ಪರಾರಿಯಾಗಿದ್ದ ಯುವತಿಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆಕೆಯನ್ನು ಕೊಲ್ಲಲು ಪ್ರಯತ್ನಿಸಿದ್ದ ಯುವಕನೇ ಈಗ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.

ಬೆಂಗಳೂರಿನಲ್ಲಿ ವಾಸವಾಗಿರುವ ಒರಿಸ್ಸಾ ಮೂಲದ ಶುಭಶ್ರೀ ಪ್ರಿಯದರ್ಶಿನಿ 2 ವರ್ಷಗಳಿಂದ ನಿಮ್ಹಾನ್ಸ್​ನಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಸಂಜೆ ಆಕೆ ಕೆಲಸ ಮುಗಿಸಿ, ವಾಪಾಸ್ ಬಂದಾಗ ಆಕೆಯ ಪಿಜಿ ಎದುರೇ ನಾಡ ಪಿಸ್ತೂಲ್​ನಲ್ಲಿ ಗುಂಡು ಹಾರಿಸಲಾಗಿತ್ತು. ಒಂದು ಬಾರಿ ಆಕೆಯ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಪಿಸ್ತೂಲ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಶುಭಶ್ರೀಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.

ಇದನ್ನೂ ಓದಿ: Bangalore Crime: ಬೆಂಗಳೂರಿನಲ್ಲಿ ಮೊಳಗಿದ ಗುಂಡಿನ ಸದ್ದು; ಯುವತಿಗೆ ಶೂಟ್ ಮಾಡಿ ಆರೋಪಿ ಪರಾರಿ

ನಿನ್ನೆ ಸಂಜೆ ಶುಭಶ್ರೀಗೆ ಗುಂಡು ಹಾರಿಸಿದ್ದ ಆರೋಪಿ ಅಮರೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನ ಹುಡುಕಾಟಕ್ಕೆ 2 ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಆದರೆ, ಇಂದು ಬೆಳಗ್ಗೆ ಆತ ತೀವ್ರವಾಗಿ ಗಾಯಗೊಂಡಿರುವ ಸ್ಥಿತಿಯಲ್ಲಿ ಮಾರತ್ತಹಳ್ಳಿಯ ರಿಂಗ್​ ರೋಡ್​ನಲ್ಲಿ ಪತ್ತೆಯಾಗಿದ್ದಾನೆ. ಆರೋಪಿ ಅಮರೇಂದ್ರನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಸೂಸೈಡ್ ನೋಟ್ ಬರೆದಿಟ್ಟ ಆರೋಪಿ:

ಆರೋಪಿ ಅಮರೇಂದ್ರ ಪಟ್ನಾಯಕ್ ಕೂಡ ಒರಿಸ್ಸಾ ಮೂಲದವನಾಗಿದ್ದು, ಶುಭಶ್ರೀಗೆ ಮೊದಲೇ ಪರಿಚಿತನಾಗಿದ್ದ. ಶುಭಶ್ರೀಗೆ ಶೂಟ್ ಮಾಡಿ, ಆತ್ಮಹತ್ಯೆಗೆ ಯತ್ನಿಸಿರುವ ಆರೋಪಿ ಅಮರೇಂದ್ರ 17 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದ.  ಆ ಡೆತ್​ನೋಟ್ ಅನ್ನು ಜೇಬಿನೊಳಗೆ ಇಟ್ಟುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೊನೆ ಪುಟದಲ್ಲಿ ನಿನಗೆ ಒಳ್ಳೆಯದಾಗಲಿ ಎಂದು ಶುಭಶ್ರೀಗೆ ಹಾರೈಸಿದ್ದ. ಶುಭಶ್ರೀಗೆ ಪ್ರಜ್ಞೆ ಬಂದ ನಂತರ ಆಕೆ ಹೇಳಿಕೆ ನೀಡಿದ ಬಳಿಕ ಪ್ರಕರಣದ ಬಗ್ಗೆ ಸ್ಪಷ್ಟತೆ ಸಿಗಲಿದೆ. ಅಪಘಾತ ಸ್ಥಿತಿಯಲ್ಲಿ ಆರೋಪಿ ಪತ್ತೆಯಾಗಿದ್ದು, ಆತನ ಕತ್ತು ಸೇರಿದಂತೆ ದೇಹದ ಮೇಲೆ ಗಂಭೀರ ಗಾಯಗಳಾಗಿವೆ.
First published:February 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading