• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಚಾಮರಾಜನಗರದಲ್ಲಿ ಹೆತ್ತ ಕಂದಮ್ಮನನ್ನೇ  ಕೊಂದಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Crime News: ಚಾಮರಾಜನಗರದಲ್ಲಿ ಹೆತ್ತ ಕಂದಮ್ಮನನ್ನೇ  ಕೊಂದಿದ್ದ ತಾಯಿಗೆ ಜೀವಾವಧಿ ಶಿಕ್ಷೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ ಚಿಕ್ಕಮಾಲಾಪುರದ ಚಂದ್ರಮ್ಮ  ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಳು.  2015 ರ ಮೇ 10 ರಂದು ಈಕೆಗೆ ಗಂಡು ಮಗು ಜನಿಸಿತ್ತು. ಆದರೆ ಅಂದೇ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ  ಪರಾರಿಯಾಗಿದ್ದ ಚಂದ್ರಮ್ಮ, ತನ್ನ ನವಜಾತ ಶಿಶುವನ್ನು ಚಿಕ್ಕಮಾಲಾಪುರಕ್ಕೆ ತೆಗೆದುಕೊಂಡು ಹೋಗಲು ಹೆದರಿದ್ದಳು.

ಮುಂದೆ ಓದಿ ...
  • Share this:

ಚಾಮರಾಜನಗರ: (ಸೆಪ್ಟೆಂಬರ್ 4):  ತನ್ನ ಕರುಳ ಕುಡಿಯನ್ನೇ  ಬ್ಲೇಡ್​​ನಿಂದ ಕೊಯ್ದು ಕೊಂದಿದ್ದ ತಾಯಿಗೆ ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಹನೂರು ತಾಲ್ಲೂಕಿನ ಚಿಕ್ಕಮಾಲಾಪುರದ ಚಂದ್ರಮ್ಮ ಎಂಬಾಕೆ  ತನ್ನ ನವಜಾತ ಶಿಶುವನ್ನು ಕೊಂದ ಅಪರಾಧಕ್ಕೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾಳೆ. 


ಪ್ರಕರಣ ಸಂಬಂಧ ಕಳೆದ ಐದು ವರ್ಷಗಳಿಂದ ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಈಗ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ  ನ್ಯಾಯಾಧೀಶ ವಿನಯ್‌ ಅವರು ಆರೋಪಿ ಚಂದ್ರಮ್ಮಳಿಗೆ ಜೀವಾವಧಿ ಶಿಕ್ಷೆ ಜತೆಗೆ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್ ‌ಉಷಾ ವಾದ ಮಂಡಿಸಿದ್ದರು.


ಅಂತರರಾಜ್ಯ ಬೈಕ್ ಕಳ್ಳನ ಬಂಧಿಸುವಲ್ಲಿ ಅಥಣಿ ಪೋಲಿಸರು ಯಶಸ್ವಿ; ಆರೋಪಿಯಿಂದ 15 ವಾಹನಗಳ ಜಪ್ತಿ


ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ ಚಿಕ್ಕಮಾಲಾಪುರದ ಚಂದ್ರಮ್ಮ  ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಳು.  2015 ರ ಮೇ 10 ರಂದು ಈಕೆಗೆ ಗಂಡು ಮಗು ಜನಿಸಿತ್ತು. ಆದರೆ ಅಂದೇ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ  ಪರಾರಿಯಾಗಿದ್ದ ಚಂದ್ರಮ್ಮ, ತನ್ನ ನವಜಾತ ಶಿಶುವನ್ನು ಚಿಕ್ಕಮಾಲಾಪುರಕ್ಕೆ ತೆಗೆದುಕೊಂಡು ಹೋಗಲು ಹೆದರಿದ್ದಳು. ಹೀಗಾಗಿ ಕರುಳಬಳ್ಳಿ ಕತ್ತರಿಸುವ ಬ್ಲೇಡ್‌ನಿಂದ ಮಗುವನ್ನು ಕೊಲೆ ಮಾಡಿ  ಕಾಮಗೆರೆಯ ಕೆರೆಗೆ ಎಸೆದು ಹೋಗಿದ್ದಳು.


ಮಗು ಕೆರೆಯಲ್ಲಿ ಸತ್ತು ಬಿದ್ದಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೊಳ್ಳೇಗಾಲ ಗ್ರಾಮಾಂತರ  ಪೊಲೀಸರು, ಮಗುವಿನ ತಾಯಿ ಚಂದ್ರಮ್ಮಳನ್ನು  ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಚಂದ್ರಮ್ಮಳ ವಿರುದ್ಧ ಕೊಳ್ಳೇಗಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಅಂದಿನ  ಸರ್ಕಲ್ ‌ಇನ್‌ಸ್ಪೆಕ್ಟರ್‌ ಸಿದ್ದಯ್ಯ  ನ್ಯಾಯಾಲಯಕ್ಕೆ  ದೋಷಾರೋಪ ಪಟ್ಟಿ ಸಲ್ಲಿಸಿದ್ದರು.


ಪ್ರಕರಣ ವಿಚಾರಣೆ  ಹೆಚ್ಚುವರಿ ಜಿಲ್ಲಾ ಮತ್ತು ಸತ್ರ  ನ್ಯಾಯಾಧೀಶ ವಿನಯ್‌ ನಡೆಸಿದ ಜಿಲ್ಲಾ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಚಂದ್ರಮ್ಮಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Published by:Latha CG
First published: