• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಪ್ರೀತಿಗಾಗಿ ನಡೆದಿತ್ತು ಆ ಭಯಾನಕ‌ ಕೊಲೆ; ರುಂಡ ಒಂದೆಡೆ ಬಿದ್ದಿದ್ರೆ, ಕೈ-ಕಾಲು ಮತ್ತೊಂದೆಡೆ

Crime News: ಪ್ರೀತಿಗಾಗಿ ನಡೆದಿತ್ತು ಆ ಭಯಾನಕ‌ ಕೊಲೆ; ರುಂಡ ಒಂದೆಡೆ ಬಿದ್ದಿದ್ರೆ, ಕೈ-ಕಾಲು ಮತ್ತೊಂದೆಡೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ಏ. 10 ರಂದು ದೇವರಗುಡಿಹಾಳ ಅರಣ್ಯ ಪ್ರದೇಶದಲ್ಲಿ ಅರ್ಧ ಮರ್ಧ ಸುಟ್ಟ ರುಂಡ ಪತ್ತೆಯಾಗಿತ್ತು. ಇದಾದ ಬಳಿಕ ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಡ, ಕೈ ಕಾಲುಗಳು ದೊರೆತಿದ್ದವು. ದೊರೆತ ರುಂಡ-ಮುಂಡಗಳು ಸಂಪೂರ್ಣ ಸುಟ್ಟು ಹೋಗಿದ್ದರಿಂದ ಮೃತನ ಗುರುತು ಸಿಗದೇ ಪೊಲಿಸರ ನಿದ್ದೆ ಹಾಳು ಮಾಡಿತ್ತು.

ಮುಂದೆ ಓದಿ ...
  • Share this:

ಧಾರವಾಡ(ಏ.04): ಹೆಣ್ಣು ಮಾಯೆ ಎನ್ನುವುದನ್ನು ನಾವೆಲ್ಲ ಕೇಳಿದ್ದೇವೆ. ಅದೆಷ್ಟೋ ಪ್ರಕರಣಗಳಲ್ಲಿ ಈ ಮಾತು ಸಾಬೀತು ಕೂಡ ಸಹ ಆಗಿದೆ. ಆದ್ರೆ, ಧಾರವಾಡ ಜಿಲ್ಲೆಯಲ್ಲಿ ನಡೆದ ಬರ್ಬರ ಕೊಲೆಯಿಂದ ಈ ಮೇಲಿನ ಮಾತಿಗೆ ಮತ್ತಷ್ಟು ಪುಷ್ಟಿ ದೊರೆತಿದೆ. ಪ್ರೀತಿಗೆ ಅಣ್ಣ ಅಡ್ಡಿ ಪಡಿಸಿದ ಅನ್ನೊ ಒಂದೇ ಒಂದು ಕಾರಣಕ್ಕೆ ತಂಗಿಯ ಅಣ್ಣನನ್ನು ಪ್ರಿಯತಮನೇ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದವರು ಕಂಬಿ ಹಿಂದೆ ಹಳಿಸುವ ಮೂಲಕ ಪ್ರಕರಣಕ್ಕೆ ಪೊಲೀಸರು ಇತಿಶ್ರೀ ಹಾಡಿದ್ದಾರೆ.


ಪ್ರೀತಿಗೆ ಅಡ್ಡಿಪಡಿಸಿದ ಅನ್ನೊ ಒಂದೇ ಕಾರಣಕ್ಕೆ ಆ ವ್ಯಕ್ತಿಯನ್ನು ಬರ್ಬರವಾಗಿ ಕೊಂದು, ಅಂಗಾಂಗಗಳನ್ನ ಬೇರ್ಪಡಿಸಿ, ಅರ್ಧಂಬರ್ಧ ಸುಟ್ಟು, ಅಂಗಾಗಗಳನ್ನು ಬೇರೆ ಬೇರೆಡೆ ಚಲ್ಲಾಪಿಲ್ಲಿ ಮಾಡಿದ್ರು. ರುಂಡ ಒಂದು ಕಡೆ ಸಿಕ್ಕರೆ, ಮುಂಡ ಮತ್ತೊಂದು ಕಡೆ ದೊರೆತಿತ್ತು. ಈ ಪ್ರಕರಣದಿಂದ ವಾಣಿಜ್ಯ ನಗರಿ ಜನತೆಯನ್ನು ಬೆಚ್ಚಿ ಬಿದಿದ್ರು. ದೇವರಗುಡಿಹಾಳ ಅರಣ್ಯದಲ್ಲಿ ಬಿದ್ದ ರುಂಡವನ್ನು ಮೇಕೆ‌ಕಾಯುವ ನೋಡಿ ಭಯಭೀತನಾಗಿ ಗ್ರಾಮಕ್ಕೆ ಓಡೋಡಿ ಬಂದು ಗ್ರಾಮಸ್ಥರಲ್ಲಿ ಹೇಳಿದ್ದ. ಗ್ರಾಪಂ ಸದಸ್ಯರು ಕೊಲೆಯಾದ ಯುವಕನ ರುಂಡ‌ ನೋಡಿ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರಿಗೆ ಮಾಹಿತಿ‌ ನೀಡಿದ್ದರು.


ಕಳೆದ ಏ. 10 ರಂದು ದೇವರಗುಡಿಹಾಳ ಅರಣ್ಯ ಪ್ರದೇಶದಲ್ಲಿ ಅರ್ಧ ಮರ್ಧ ಸುಟ್ಟ ರುಂಡ ಪತ್ತೆಯಾಗಿತ್ತು. ಇದಾದ ಬಳಿಕ ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಡ, ಕೈ ಕಾಲುಗಳು ದೊರೆತಿದ್ದವು. ದೊರೆತ ರುಂಡ-ಮುಂಡಗಳು ಸಂಪೂರ್ಣ ಸುಟ್ಟು ಹೋಗಿದ್ದರಿಂದ ಮೃತನ ಗುರುತು ಸಿಗದೇ ಪೊಲಿಸರ ನಿದ್ದೆ ಹಾಳು ಮಾಡಿತ್ತು. ಆದ್ರೆ ‌ಕೊಲೆಗಾರ ಎಷ್ಟೆ ಚಾಲಾಕಿ‌ ಇದ್ರು ತನ್ನ ಸುಳಿವನ್ನು ಬಿಟ್ಟುಕೊಟ್ಟಿದ್ದ. ಆ ಸುಳಿವನ್ನು ಬೆನ್ನತಿದ್ದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಜಿಲ್ಲೆಯ ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ ಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.


Bangalore: ಆಸ್ಪತ್ರೆ ಸೇರಿದ ಐದೇ ನಿಮಿಷಕ್ಕೆ ಪ್ರಾಣ ಬಿಟ್ಟ ಸೋಂಕಿತ; ಬೆಡ್ ಸಿಗದೆ ಕಂಗಾಲಾದ ಮತ್ತೊಂದು ಕುಟುಂಬ; ಕರುಳು ಹಿಂಡುವ ಬೆಂಗಳೂರಿನ ಕಥೆಗಳಿವು...!


ಆರೋಪಿ ನಿಯಾಜ ಅಹ್ಮದ ಕಟಗಾರ ಹಾಗೂ ಮೃತನ ತಂಗಿ ಶಯನಾ ಕಾಟವೆ ಪರಸ್ಪರ ಪ್ರೀತಿ ಮಾಡುತ್ತಾ ಇರುತ್ತಾರೆ. ಆದ್ರೆ, ಇಬ್ಬರ ಪ್ರೀತಿಗೆ ಶನಾಯಳ ಅಣ್ಣ ರಾಕೇಶ ಕಾಟವೆ ವಿರೋಧ ವ್ಯಕ್ತಪಡಿಸುತ್ತಾ ಬರುತ್ತಿದ್ದನು. ಆದರೂ ಸಹಿತ ಇವರಿಬ್ಬರ ಪ್ರೇಮ ಮುಂದುವರೆದಿತ್ತು. ಈ ಹಿಂದೆ ಈ ವಿಷಯವಾಗಿ ಹಲವು ಬಾರಿ ಜಗಳಗಳು ಉಂಟಾಗಿದ್ದವು. ಆದರೆ, ಕೊಲೆ ಮಾಡುವ ಮಟ್ಟಿಗೆ ಜಗಳ ನಡೆದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಇಬ್ಬರ ಪ್ರೀತಿಗೆ ರಾಕೇಶ ತೀವ್ರ ವಿರೋಧ ವ್ಯಕ್ತಪಡಿಸಿದ್ದ  ಎನ್ನಲಾಗಿದೆ.


ಈತನನ್ನ ಹೀಗೆ ಬಿಟ್ರೆ ನಮ್ಮ ಪ್ರೀತಿಗೆ ಅಡ್ಡಪಡಿಸುತ್ತಾನೆ ಅನ್ನೋ ಕಾರಣಕ್ಕೆ  ನಿಯಾಜ ಅಹ್ಮದ ಕಟಗಾರ,‌ ತೌಸಿಫ್ ಚಿನ್ನಾಪೂರ, ಅಲ್ತಾಫ್ ಮುಲ್ಲಾ ಹಾಗೂ ಅಮನ ಗಿರಣಿವಾಲೆ ಎಂಬುವರನ್ನು  ರಾಕೇಶನ ಕೊಲೆಗೆ ಸ್ಕೆಚ್ ಹಾಕುತ್ತಾರೆ. ಬಳಿಕ ರಾಕೇಶನನ್ನು ಮನೆಯೊಂದಕ್ಕೆ ಕರೆಸಿ, ಆತನನ್ನು ಬರ್ಬರವಾಗಿ ಕೊಲೆಗೈದು, ರುಂಡ ಹಾಗೂ ದೇಹವನ್ನು ಬೇರ್ಪಡಿಸುತ್ತಾರೆ. ನಂತರ ಆತನ  ರುಂಡವನ್ನು ದೇವರಗುಡಿಹಾಳ ಅರಣ್ಯ ಪ್ರದೇಶದಲ್ಲಿ ಎಸೆದು ಹೊಳಗುತ್ತಾರೆ. ಮುಂಡ, ಕೈ ಕಾಲುಗಳನ್ನು ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸೆಸು ಹೋಗಿರುತ್ತಾರೆ. ಆದರೆ, ಕೊಲೆಯಾದ ರಾಕೇಶ ಎನ್ನುವುದು ಗೊತ್ತಾಗದ ರೀತಿಯಲ್ಲಿ ಬೇರ್ಪಡಿಸಿದ್ದು ಪೊಲೀಸ್ ತನಿಖೆಯಿಂದ ಬಯಲಾಗಿದೆ.


ಈ ಪ್ರಕರಣಕ್ಕೆ‌ ಸಂಬಂಧಿಸಿದಂತೆ ತನಿಖೆ ಕೈಗೊಂಡ ನಮ್ಮ ಸಿಬ್ಬಂದಿಗಳು ಈಗಾಗಲೇ ಪ್ರಮುಖ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕೊಲೆಗೆ ಪ್ರೀತಿಯೆ ಕಾರಣವಾಗಿದೆ. ತನ್ನ ತಂಗಿಯನ್ನು ಪ್ರೀತಿಸಬೇಡ ಎಂದ ಅಣ್ಣನನ್ನು ಕೊಲೆ ‌ಮಾಡಿದ್ದಾರೆ. ಆದ್ರೆ ಇನ್ನೂ ಪ್ರಕರಣ ತನಿಖೆ ಹಂತದಲ್ಲಿದೆ ಎಂದು ಧಾರವಾಡ ಎಸ್ಪಿ ಕೃಷ್ಣಕಾಂತ ಹೇಳಿದ್ದಾರೆ.


ಅಷ್ಟಕ್ಕೂ ಮೃತ ರಾಕೇಶ ಶನಾಯ್ ಳ ಅಸಲಿ ಅಣ್ಣನಲ್ಲ. ಈತನನ್ನ ಶನಾಯ್ ತಂದೆ ದತ್ತು ಪಡೆದಿದ್ರು ಅನ್ನೊ ಮಾತಿದೆ. ಅಲ್ದೆ, ದತ್ತು ಪಡೆದ ತಂದೆ ತಾಯಿ ತೀರಿದ‌ಮೇಲೆ ರಾಕೇಶ ರಾಜಸ್ಥಾನದಲ್ಲೇ ಸೆಟಲ್ ಆಗಿದ್ದ ಅನ್ನೊ ಮಾತುಗಳೂ ಇವೆ. ಇನ್ನು ಈ ಪ್ರಕರಣ ತನಿಖಾ ಹಂತದಲ್ಲಿದ್ದು, ಇನ್ನೂ ಹಲವರ ಬಂಧನ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಕೇಶ ಕಾಟವೆ ತಂಗಿ ಶಯನಾಳ ಪಾತ್ರ ಏನು ಎಂಬುದು ತನಿಖೆಯಿಂದ ಬಹಿರಂಗೊಳ್ಳಬೇಕಾಗಿದೆ. ಅಷ್ಟೇ ಅಲ್ಲದೇ ಯಾವ ರೀತಿಯಲ್ಲಿ ಕೊಲೆಗೆ ಸಂಚು ರೂಪಿಸಿದ್ದರು ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕಾಗಿದೆ.

top videos
    First published: