ಆರ್ಮಿ ಆಫೀಸರ್ ಹೆಸರಿನಲ್ಲಿ ವ್ಯಕ್ತಿಗೆ ಮೋಸ : ವಂಚಕನ ಪತ್ತೆಗೆ ಬಲೆ ಬೀಸಿದ ಪೊಲೀಸರು

ಅನುಮಾನಗೊಂಡ ಮಧು ಸೂರ್ಯನಗರ ಪೊಲೀಸರಿಗೆ ಕಾರು ಖರೀದಿಯ ಬಗ್ಗೆ ತಿಳಿಸಿದಾಗ ವಂಚಕನ ಬಣ್ಣ ಬಯಲಾಗಿದೆ. ಘಟನೆ ಸಂಬಂಧ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಕೈಗೊಂಡು ವಂಚಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ

news18-kannada
Updated:August 9, 2020, 9:26 AM IST
ಆರ್ಮಿ ಆಫೀಸರ್ ಹೆಸರಿನಲ್ಲಿ ವ್ಯಕ್ತಿಗೆ ಮೋಸ : ವಂಚಕನ ಪತ್ತೆಗೆ ಬಲೆ ಬೀಸಿದ ಪೊಲೀಸರು
ವಂಚಕ
  • Share this:
ಆನೇಕಲ್(ಆಗಸ್ದ್​. 09): ಆತ ಕಡಿಮೆ ಬೆಲೆ ಕಾರು ಸಿಕ್ಕಿತು ಅಂತಾ ಖರೀದಿಸಲು ಅತುರದಲ್ಲಿದ್ದ. ಅದು ದೇಶದ ಹೆಮ್ಮಯ ಸೈನಿಕನ ಕಾರನ್ನು ಖರೀದಿಸುವ ಖುಷಿಯಲ್ಲಿದ್ದ. ಅದೇ ಖುಷಿಯಲ್ಲಿ ಐದು ಸಾವಿರ ಹಣವನ್ನು ಆನ್​ಲೈನ್ ಮೂಲಕ ಕಾರು ಮಾಲೀಕನಿಗೆ ವರ್ಗಾಯಿಸಿದ್ದ. ಆದರೆ, ಕಾರು ಮಾರುವುದಾಗಿ ಓಎಲ್ಎಕ್ಸ್ ನಲ್ಲಿ ಜಾಹೀರಾತು ನೀಡಿರುವ ವ್ಯಕ್ತಿ ವಂಚಕ ಎಂದು ತಿಳಿದ ಮೇಲೆ ಒಂದು ಕ್ಷಣ ಅವಾಕ್ಕಾಗಿದ್ದಾನೆ. 

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮದ ವಾಸಿ  ಮಧು ಎಂಬಾತ ಹಳೆಯ ಕಾರು ಖರೀದಿಸಲು ಓಎಲ್ಎಕ್ಸ್​​ನಲ್ಲಿ ಹುಡುಕಾಟ ನಡೆಸಿದ್ದಾನೆ. ಆಗ 2016 ಮಾಡೆಲ್ ನೀಲಿ ಬಣ್ಣದ ಮಾರುತಿ ಸುಜುಕಿ ಅಲ್ಟೋ 800 ಕಾರು ಕಾರು ಕೇವಲ 60 ಸಾವಿರಕ್ಕೆ ಮರಾಟ ಮಾಡಲಾಗುವುದು ಎಂದು ಬೆಲೆ ನಮೂದು ಮಾಡಿರುವುದು ಕಂಡಿದೆ. ಆಸಕ್ತಿವುಳ್ಳವರು ನಂಬರ್ ಗೆ ಕರೆ ಮಾಡುವಂತೆ ನಮೂದಿಸಿದ್ದಾರೆ.

ನೋಡಲು ಕಾರು ಅಂದವಾಗಿದೆ ಜೊತೆಗೆ ಬೆಲೆಯು ಕಡಿಮೆ ಇದೆ ಎಂದು ಮಧು ಮೇಲೆ ಇರುವ ನಂಬರ್​​ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ಹಿಂದಿಯಲ್ಲಿ ಹಲೋ ಎಂದಿದ್ದಾನೆ. ಇತ್ತ ಹಿಂದಿ ಬಾರದ ಮಧು ತನ್ನ ಸ್ನೇಹಿತನಿಗೆ ಮಾತನಾಡುವಂತೆ ತಿಳಿಸಿದ್ದಾನೆ. ನನ್ನ ಹೆಸರು ಮನೋಹರ್ ಸಿಂಗ್ ನಾನು ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ವರ್ಗಾವಣೆಯಾಗಿದೆ. ಹಾಗಾಗಿ ತನ್ನ ಕಾರನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸುತ್ತಾನೆ.

ಇಷ್ಟು ಚೆನ್ನಾಗಿರುವ ಕಾರು ಇಷ್ಟು ಕಡಿಮೆ ಬೆಲೆಗೆ ಯಾಕೆ ಮಾರಾಟ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಸದ್ಯ ನಾನು ಉತ್ತರಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನನ್ನ ಕಾರು ಬೆಳ್ಳಂದೂರು ಆರ್ಮಿ ಕ್ಯಾಂಪ್​​ನಲ್ಲಿ ಬಳಕೆಯಾಗದೇ ಇದೆ. ಹಾಗಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಿತ್ತಿದ್ದೆನೆ. ನಿಮಗೆ ಅನುಮಾನವಿದ್ದರೆ ಕಾರಿನ ದಾಖಲೆಗಳು, ಕಾರಿನ ಪೋಟೋ ಜೊತೆಗೆ ಆರ್ಮಿ ಸಮವಸ್ತ್ರದಲ್ಲಿರುಯವ ಪೋಟೋಗಳನ್ನು ಮೊಬೈಲ್​​ ಕಳುಹಿಸಿದ್ದಾನೆ.

ದಾಖಲೆಗಳನ್ನು ಆನ್​ಲೈನ್​​ನಲ್ಲಿ ಪರಿಶೀಲನೆ ನಡೆಸಿದಾಗ ಎಲ್ಲವೂ ಸರಿಯಾಗಿತ್ತು. ಜೊತೆಗೆ ಪೋಟೋದಲ್ಲಿ ಕಾರು ಸಹ ನೋಡಲು ಹೊಸ ಕಾರಿನ ರೀತಿಯಲ್ಲಿ ಇತ್ತು. ಅಂತಿಮವಾಗಿ 60 ಸಾವಿರಕ್ಕೆ ಬೆಲೆ ಹೊಂದಿಸಲಾಗಿದೆ. ಇನ್ನೇನಿದ್ದರು ಹಣ ನೀಡುವುದು ಕಾರು ಪಡೆಯುವುದು ಅಷ್ಟೆ. ಇಲ್ಲಿ ನಿಜವಾದ ಮೋಸದಾಟ ಶುರುವಾಗಿದೆ. ಆರ್ಮಿ ಆಫೀಸರ್ ಎಂದು ಹೇಳಿಕೊಂಡ ವ್ಯಕ್ತಿ ವಿಡಿಯೋ ಕಾಲ್ ಮೂಲಕ ಮಾತನಾಡಿದ ವ್ಯಕ್ತಿ ಮೊದಲು ಹಣವನ್ನು ಕ್ಯಾಶ್ ಮೂಲಕ ನೀಡಿ ಕಾರು ಪಡೆದುಕೊಳ್ಳುವಂತೆ ತಿಳಿಸುತ್ತಾನೆ.

ಕೆಲಹೊತ್ತಿನ ಬಳಿಕ ನೀವು ಕಾರು ಪಡೆದುಕೊಳ್ಳಲು ಆರ್ಮಿ ಅಧಿಕಾರಿಗಳು ನಿಮ್ಮನ್ನು ಒಳ ಬಿಡುವುದಿಲ್ಲ. ನಮ್ಮ ಕಡೆಯವರಿಗೆ ತಿಳಿಸಿ ನೀವು ಇರುವ ಕಡೆ ಕಾರು ಡೆಲಿವರಿ ಮಾಡುವುದಾಗಿ ತಿಳಿಸುತ್ತಾನೆ. ಜೊತೆಗೆ ಕಾರು ಡೆಲಿವರಿ ನೀಡುವವನಿಗೆ 1500 ರೂಪಾಯಿ ಹಣ ಕಳುಹಿಸುವಂತೆ ತಿಳಿಸಿದ್ದಾನೆ. ಅದರಂತೆ ಮಧು ಆತ ಹೇಳಿದ ನಂಬರಿಗೆ ಹಣ ಕಳುಹಿಸುತ್ತಾನೆ. ಅರ್ಧ ಗಂಟೆ ಬಳಿಕ ಮತ್ತೆ ಪೋನ್ ಮಾಡಿದ ವ್ಯಕ್ತಿ. 1500 ರೂಪಾಯಿ ಸಾಕಾಗುವುದಿಲ್ಲ 5 ಸಾವಿರ ಕಳುಹಿಸಿ ಎಂದು ತಿಳಿಸುತ್ತಾನೆ. ತನ್ನ ಅಕೌಂಟ್​ನಲ್ಲಿ ಹಣವಿಲ್ಲದಿದ್ದರು ಹೇಗೂ ಕಾರು ಸಿಗುತ್ತದೆ ಎಂದು ಸ್ನೇಹಿತರ ಬಳಿ ಹಣ ಹಾಕಿಸಿಕೊಂಡು ಆತ ಹೇಳಿದ ಅಕೌಂಟಿಗೆ ಹಣ ವರ್ಗಾಯಿಸುತ್ತಾನೆ.

ಇದನ್ನೂ ಓದಿ : ಮಲಪ್ರಭಾ ನದಿಯಲ್ಲಿ ತಗ್ಗಿದ ಪ್ರವಾಹ ಭೀತಿ ; ಘಟಪ್ರಭಾ ನದಿ ಪಾತ್ರದಲ್ಲಿ ಮುಂದುವರೆದ ಆತಂಕ..!ಅರ್ಧ ಗಂಟೆ ಬಳಿಕ ಮತ್ತೆ ಪೋನ್ ಮಾಡಿದ ವ್ಯಕ್ತಿ ಕೊರಮಂಗಲ ಬಳಿ ಪೊಲೀಸರು ಕಾರನ್ನು ಹಿಡಿದುಕೊಂಡಿದ್ದಾರೆ. ಕಾರು ಬಿಡಿಸಿಕೊಂಡು ಬರಲು 15 ಸಾವಿರ ಕೇಳುತ್ತಿದ್ದಾರೆ ಎಂದು ಮತ್ತೆ ಹಣ ಕಳುಹಿಸುವಂತೆ  ಕೇಳಿದ್ದಾನೆ. ಆರ್ಮಿ ಅಧಿಕಾರಿಗೆ ಸೇರಿದ ಕಾರನ್ನು ಪೊಲೀಸರು ಹಿಡಿದುಕೊಂಡಿದ್ದಾರೆ ಎಂದಾಕ್ಷಣ ಅನುಮಾನ ಶುರುವಾಗಿದೆ.

ಅನುಮಾನಗೊಂಡ ಮಧು ಸೂರ್ಯನಗರ ಪೊಲೀಸರಿಗೆ ಕಾರು ಖರೀದಿಯ ಬಗ್ಗೆ ತಿಳಿಸಿದಾಗ ವಂಚಕನ ಬಣ್ಣ ಬಯಲಾಗಿದೆ. ಘಟನೆ ಸಂಬಂಧ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಕೈಗೊಂಡು ವಂಚಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ
Published by: G Hareeshkumar
First published: August 9, 2020, 9:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading