HOME » NEWS » State » CRIME NEWS A BOY MURDERED BY UNKNOWN PERSONS IN LOVE CASE AT HUBLI SAKLB LG

Crime News: ಪ್ರೀತಿಗೆ ಅಡ್ಡಿಪಡಿಸ್ತಿದಾನೆಂದು ಯುವಕನ ಬರ್ಬರ ಹತ್ಯೆ; ನಾಲ್ವರು ಆರೋಪಿಗಳು ವಶಕ್ಕೆ

ತನ್ನ ಪ್ರೀತಿಗೆ ರಾಕೇಶ್ ಅಡ್ಡಿಯಾಗಿದ್ದಾನೆಂದು ನಿಯಾಜ್ ಅಹ್ಮದ್ ಕಟಿಗಾರ ಕುಪಿತಗೊಂಡಿದ್ದ. ರಾಕೇಶ್ ನನ್ನು ಕೊಲೆ ಮಾಡಿದರೆ ತನ್ನ ಪ್ರೀತಿಗೆ ಯಾರೂ ಅಡ್ಡಿಪಡಿಸಲ್ಲವೆಂದು ಬಗೆದ ನಿಯಾಜ್ ಅಹ್ಮದ್ ಕಟಿಗಾರ, ರಾಕೇಶ್ ನ ಕೊಲೆಗೆ ಸ್ಕೆಚ್ ಹಾಕಿದ್ದ.

news18
Updated:April 20, 2021, 7:40 AM IST
Crime News: ಪ್ರೀತಿಗೆ ಅಡ್ಡಿಪಡಿಸ್ತಿದಾನೆಂದು ಯುವಕನ ಬರ್ಬರ ಹತ್ಯೆ; ನಾಲ್ವರು ಆರೋಪಿಗಳು ವಶಕ್ಕೆ
ಸಾಂದರ್ಭಿಕ ಚಿತ್ರ.
  • News18
  • Last Updated: April 20, 2021, 7:40 AM IST
  • Share this:
ಹುಬ್ಬಳ್ಳಿ(ಏ.20): ತನ್ನ ಪ್ರೀತಿಗೆ ಅಡ್ಡ ಬರುತ್ತಿದ್ದಾನೆಂದು ಯುವಕನೊಬ್ಬನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರುಂಡ - ಮುಂಡ ಬೇರ್ಪಡಿಸಿ ಯುವಕನ ಬರ್ಬರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ನಂತರ ಸಮಗ್ರ ಮಾಹಿತಿ ನೀಡೋದಾಗಿ ಧಾರವಾಡ ಎಸ್.ಪಿ. ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಸದ್ಯಕ್ಕೆ ಏನೂ ಹೇಳಲು ಆಗೋದಿಲ್ಲ. ಈಗಾಗಲೇ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿ ಮೂಲದ ನಿಯಾಜ್ ಅಹ್ಮದ್ ಕಟಿಗಾರ (21), ತೌಸೀಫ್ ಚೆನ್ನಾಪುರ (21), ಅಲ್ತಾಫ್ ಮುಲ್ಲಾ (24) ಹಾಗೂ ಅಮನ್ ಗಿರಣಿವಾಲೆ (19) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಏಪ್ರಿಲ್ 10 ರಂದು ಪ್ರಕರಣ ದಾಖಲಾಗಿತ್ತು. ರಾಕೇಶ್ ಕಠಾರೆ (33) ಎಂಬಾತನ ಬರ್ಬರ ಹತ್ಯೆ ಮಾಡಲಾಗಿತ್ತು.

CoronaVirus: ಅಂಗಲಾಚಿದ್ರೂ ಸಿಗಲಿಲ್ಲ ಆಕ್ಸಿಜನ್; ಉಸಿರಾಟದ ಸಮಸ್ಯೆಯಿಂದ ನರಳಾಡಿ ಪ್ರಾಣ ಬಿಟ್ಟ ವ್ಯಕ್ತಿ!

ಕೊಲೆಗೈದು ಅಂಗಾಂಗ ಬೇರ್ಪಡಿಸಿ ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿದ್ದ ಆರೋಪಿಗಳು, ಅಂಗಾಂಗ ಸುಟ್ಟು ಹಾಕಲು ಯತ್ನಿಸಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಸಿದ್ದರು. ನಂತರ ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗಿ ತಲೆಮರೆಸಿಕೊಂಡಿದ್ದರು. ಮೃತ ರಾಕೇಶ್ ಕಠಾರೆ ತಂಗಿಯನ್ನು ನಿಯಾಜ್ ಅಹ್ಮದ್ ಪ್ರೀತಿಸಿದ್ದ ಎನ್ನಲಾಗಿದೆ. ಆದರೆ ರಾಕೇಶ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಎನ್ನಲಾಗಿದೆ.

ತನ್ನ ಪ್ರೀತಿಗೆ ರಾಕೇಶ್ ಅಡ್ಡಿಯಾಗಿದ್ದಾನೆಂದು ನಿಯಾಜ್ ಅಹ್ಮದ್ ಕಟಿಗಾರ ಕುಪಿತಗೊಂಡಿದ್ದ. ರಾಕೇಶ್ ನನ್ನು ಕೊಲೆ ಮಾಡಿದರೆ ತನ್ನ ಪ್ರೀತಿಗೆ ಯಾರೂ ಅಡ್ಡಿಪಡಿಸಲ್ಲವೆಂದು ಬಗೆದ ನಿಯಾಜ್ ಅಹ್ಮದ್ ಕಟಿಗಾರ, ರಾಕೇಶ್ ನ ಕೊಲೆಗೆ ಸ್ಕೆಚ್ ಹಾಕಿದ್ದ. ತನ್ನ ಸಹಚರ ರ ಜೊತೆಗೂಡಿ ನಿರ್ಜನ ಪ್ರದೇಶದಲ್ಲಿ ರಾಕೇಶ್ ನ ಕೊಲೆ ಕೃತ್ಯ ಎಸಗಿ ಪರಾರಿಯಾಗಿದ್ದ ಎನ್ನಲಾಗಿದೆ.

ಕೊಲೆ ಪ್ರಕರಣಕ್ಕೆ ಪ್ರೀತಿಯೂ ತಳುಕು ಹಾಕಿಕೊಂಡಿರೋ  ಹಿನ್ನೆಲೆಯಲ್ಲಿ ಯುವತಿಯನ್ನೂ ಠಾಣೆಗೆ ಕರೆಯಿಸಿ ವಿಚಾರಣೆಗೆ ಗುರಿಪಡಿಸಲಾಗಿದೆ. ಯುವತಿಯ ವಿಚಾರಣೆ ನಡೆಸಿದ ನಂತರ, ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ. ತನಿಖೆ ಮುಗಿದ ಮೇಲೆ ಸಮಗ್ರ ಮಾಹಿತಿ ನೀಡ್ತೇನೆ ಎಂದು ಹುಬ್ಬಳ್ಳಿಯಲ್ಲಿ ಎಸ್.ಪಿ. ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.
Youtube Video
ಮಣ್ಣು ಕುಸಿದು ಕಾರ್ಮಿಕನಿಗೆ ಗಂಭೀರ ಗಾಯ

ಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿತವಾಗಿ ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾದ ಘಟನೆ ಹುಬ್ಬಳ್ಳಿಯ ಕೊಯಿನ್ ರಸ್ತೆಯಲ್ಲಿ ನಡೆದಿದೆ. ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ವೇಳೆ ಅವಘಡಕಾಮಗಾರಿ ಮಾಡುತ್ತಿದ್ದ ವೇಳೆ ಮಣ್ಣು ಕುಸಿತವಾಗಿದೆ.  ಕೆಳಗಡೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಣ್ಣಿನಲ್ಲಿ ಸಿಲುಕಿಕೊಂಡಿದ್ದಾನೆ. ತಕ್ಷಣ ಕಾರ್ಮಿಕನನ್ನು ಇತರೆ ಕಾರ್ಮಿಕರು ರಕ್ಷಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಕಾರ್ಮಿಕನನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.
Published by: Latha CG
First published: April 20, 2021, 7:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories