ನವದೆಹಲಿ(ಸೆ.10): ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದ ಕೊಲೆಗಳೇ ನಡೆದು ಹೋಗುತ್ತವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅದು ಕೂಡ ಆತನ ಗೆಳೆಯರೇ ಈ ಕೃತ್ಯ ಎಸಗಿದ್ದಾರೆ. ಕೊಲೆಯಾದ ವ್ಯಕ್ತಿ ತನ್ನ ಗೆಳೆಯರಿಗೆ ಒಂದು ಸಾವಿರ ರೂಪಾಯಿ ಸಾಲ ಕೊಟ್ಟಿದ್ದನು ಎನ್ನಲಾಗಿದೆ. ಅದನ್ನು ವಾಪಸ್ ಕೊಡುವಂತೆ ಕೇಳಿದಾಗ, ಆ ಇಬ್ಬರು ಗೆಳೆಯರು ಆತನನ್ನು ಕೊಲೆ ಮಾಡಿದ್ದಾರೆ. ಅಮನ್ ಕೊಲೆಯಾದ 19 ವರ್ಷದ ಯುವಕ. ಈತ ದೆಹಲಿಯ ಒಂದು ಪುಟ್ಟ ಚಪ್ಪಲಿ ತಯಾರಿಕೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಗೆಳೆಯರಿಂದಲೇ ಚಾಕು ಇರಿತಕ್ಕೆ ಒಳಗಾದ ಯುವಕನನ್ನು ಕೂಡಲೇ ಪರ್ವೇಶ್ ಚಂದ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಅಮನ್ ಮೃತಪಟ್ಟಿದ್ದ. ಕೊಲೆಗೈದ ಆರೋಪಿಗಳನ್ನು ಸುಹೈಲ್ ಮತ್ತು ಫರ್ಹಾನ್ ಎಂದು ಗುರುತಿಸಲಾಗಿದೆ.
ಸುಹೈಲ್ ಹೇರ್ ಡ್ರೆಸರ್ ಆಗಿ ಕೆಲಸ ಮಾಡುತ್ತಿದ್ದರೆ, ಫರ್ಹಾನ್ ಟೈಲರ್ ಆಗಿದ್ದ ಎಂದು ತಿಳಿದು ಬಂದಿದೆ. ಸದ್ಯ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸವಸಾಗರ ಜಲಾಶಯದಿಂದ ಮತ್ತೆ ಭಾರಿ ಪ್ರಮಾಣದ ನೀರು ಬಿಡುಗಡೆ; ಕೃಷ್ಣಾ ನದಿ ತೀರದಲ್ಲಿ ಆತಂಕ
ಮೃತ ಅಮನ್ ತಮಗೆ 1 ಸಾವಿರ ರೂಪಾಯಿ ನೀಡಿದ್ದು, ಸ್ವಲ್ಪ ದಿನಗಳ ಬಳಿಕ ಆ ಹಣವನ್ನು ವಾಪಸ್ ಕೇಳಿದ್ದ ಎಂದು ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದಾರೆ. ಕೆಲವು ದಿನಗಳ ಬಳಿಕ ಹಣದ ವಿಚಾರವಾಗಿ ಮೂವರ ನಡುವೆ ಜಗಳವಾಗಿತ್ತು. ಆಗ ಹಿರಿಯರು ಬುದ್ಧಿ ಮಾತು ಹೇಳಿ ಕಳುಹಿಸಿದ್ದರು. ಆದರೆ ಫರ್ಹಾನ್ ಮತ್ತು ಸುಹೈನ್ ಇಬ್ಬರೂ ಸಹ ಅಮನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು.
ಹೀಗಾಗಿ ಇಬ್ಬರೂ ಸಹ ಒಂದು ಯೋಜನೆಯನ್ನು ಹಾಕಿಕೊಂಡು, ಮಂಗಳವಾರ ರಾತ್ರಿ 10 ಗಂಟೆಗೆ ಅಮನ್ನನ್ನು ಸುಭಾಷ್ ಪಾರ್ಕ್ ಬಡಾವಣೆಗೆ ಕರೆದರು. ಅದರಂತೆ ಅಮನ್ ಸ್ಥಳಕ್ಕೆ ಬಂದಾಗ, ಅವರಲ್ಲಿ ಒಬ್ಬ ಅಮನ್ನ್ನು ಹಿಡಿದುಕೊಂಡರೆ, ಮತ್ತೊಬ್ಬ ಚಾಕುವಿನಿಂದ ಇರಿದಿದ್ದ. ಅಮನ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ, ಅವರಿಬ್ಬರೂ ಅಲ್ಲಿಂದ ಓಡಿ ಹೋದರು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ