Belagavi Politics: ಖಾನಾಪುರ ಕ್ಷೇತ್ರದಲ್ಲಿ ಕಮಲ ಕಲಿಗಳ ಮಧ್ಯೆ ಕ್ರೆಡಿಟ್ ವಾರ್; ಬೆಳಗಾವಿ ಬಿಜೆಪಿಯಲ್ಲಿ ಕಿಚ್ಚು ಹಚ್ಚಿದ ಮಾಜಿ ಶಾಸಕನ ಆಡಿಯೋ

ಅರವಿಂದ್ ಪಾಟೀಲ್ ಎಂಇಎಸ್ (MES) ತೊರೆದು ಇತ್ತೀಚಿಗಷ್ಟೇ ಬಿಜೆಪಿ (BJP) ಸೇರಿದ್ದಾರೆ. ಸೋನಾಲಿ ಸರ್ನೋಬತ್ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆಯಾಗಿದ್ದಾರೆ‌. ಇಬ್ಬರ ಜಿದ್ದಾಜಿದ್ದಿಯಿಂದ 22 ಗ್ರಾಮಗಳಿಗೆ ಪಡಿತರ ವಿತರಣೆಗೆ ಸಮಸ್ಯೆ ಉಂಟಾಗಿದೆ.

ಅರವಿಂದ್ ಪಾಟೀಲ್ ಮತ್ತು ಸೋನಾಲಿ ಸರ್ನೋಬತ್

ಅರವಿಂದ್ ಪಾಟೀಲ್ ಮತ್ತು ಸೋನಾಲಿ ಸರ್ನೋಬತ್

  • Share this:
ಬೆಳಗಾವಿ ಜಿಲ್ಲೆಯ ಖಾನಾಪುರ (Khanapura, Belagavi) ಮರಾಠಿ ಭಾಷಿಕರ ಪ್ರಾಬಲ್ಯ ಹೊಂದಿರುವ ಕ್ಷೇತ್ರ. ಪಡಿತರ ವಿತರಣೆ ವಿಚಾರವಾಗಿ ಇಲ್ಲಿ ಕಮಲ ನಾಯಕರ (BJP Leaders) ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಮಲ‌ ನಾಯಕರ ಪ್ರತಿಷ್ಠೆಯ ಫೈಟ್‌ಗೆ ಕಾಡಂಚಿನ ಗ್ರಾಮಸ್ಥರು ಹೈರಾಣಾಗಿದ್ದಾರೆ. ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ನಡುವಿನ ತಿಕ್ಕಾಟ ಬಹಿರಂಗಗೊಂಡಿದೆ‌. ಮಾಜಿ ಶಾಸಕ ಅರವಿಂದ್ ಪಾಟೀಲ್ (Former  MLA Aravind Patil), ಸೋನಾಲಿ ಸರ್ನೋಬತ್ (BJP Ticket Aspirants Sonali Sarnobath) ನಡುವೆ ಸಮರ ಶುರುವಾಗಿದೆ. ಅರವಿಂದ್ ಪಾಟೀಲ್ ಎಂಇಎಸ್ (MES) ತೊರೆದು ಇತ್ತೀಚಿಗಷ್ಟೇ ಬಿಜೆಪಿ (BJP) ಸೇರಿದ್ದಾರೆ. ಸೋನಾಲಿ ಸರ್ನೋಬತ್ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆಯಾಗಿದ್ದಾರೆ‌. ಇಬ್ಬರ ಜಿದ್ದಾಜಿದ್ದಿಯಿಂದ 22 ಗ್ರಾಮಗಳಿಗೆ ಪಡಿತರ ವಿತರಣೆಗೆ ಸಮಸ್ಯೆ ಉಂಟಾಗಿದೆ.

ಟಿಎಪಿಸಿಎಂಎಸ್ ನಂದಗಡ ವತಿಯಿಂದ ಲೋಂಡಾ ಗ್ರಾಮ ಕೇಂದ್ರವಾಗಿರಿಸಿ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಇದರಿಂದ 22 ಗ್ರಾಮದ ಜನ ಲೋಂಡಾಗೆ ಬಂದು ಪಡಿತರ ಪಡೆಯಲು ಅನಾನೂಕುಲ ಆಗ್ತಿತ್ತು. ಹೀಗಾಗಿ ಗ್ರಾಮಸ್ಥರ ಪರ ಖಾನಾಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೋನಾಲಿ ಸರ್ನೋಬತ್ ಡಿಸಿಗೆ ಮನವಿ ಸಲ್ಲಿಸಿದ್ದರು. ಮನವಿ ಹಿನ್ನೆಲೆಯಲ್ಲಿ ಹತ್ತಿರದ 8 ಗ್ರಾಮಗಳಲ್ಲಿ ಪಡಿತರ ಕೇಂದ್ರ ತೆರೆದು ಪಡಿತರ ವಿತರಣೆಗೆ ಜಿಲ್ಲಾಡಳಿತ ಸೂಚನೆ ನೀಡಿತ್ತು.

ಇದನ್ನೂ ಓದಿ:  Siddaramaiah: ಧರ್ಮ ಒಡೆದ ಬಗ್ಗೆ ಸಿದ್ದರಾಮಯ್ಯ ಪಶ್ಚಾತ್ತಾಪ ? ರಂಭಾಪುರೀ ಶ್ರೀಗಳ ಹೇಳಿಕೆ, ರಾಜಕೀಯದಲ್ಲಿ ಸಂಚಲನ

Credit war between Khanapura BJP Leaders Former MLA Aravind Patil Audio leak csb mrq
ಬಿಜೆಪಿ ಧ್ವಜ


ತಹಶೀಲ್ದಾರ್​ಗೆ ಪತ್ರ ಬರೆದಿದ್ದಕ್ಕೆ ಪಾಟೀಲ್ ಕಿಡಿ

ಈ ಸಂಬಂಧ ಬೆಳಗಾವಿ ಆಹಾರ ಇಲಾಖೆ ಜಂಟಿ ನಿರ್ದೇಶಕರು ಖಾನಾಪುರ ತಹಶೀಲ್ದಾರ್‌ಗೆ ಪತ್ರ ಬರೆದಿದ್ದಾರೆ. ಜುಲೈ 18ರಂದು ಪತ್ರ ಬರೆಯುತ್ತಿದ್ದಂತೆ ಅರವಿಂದ್ ಪಾಟೀಲ್ ಕಿಡಿಕಾರಿದ್ದಾರೆ. ಪಡಿತರ ವಿತರಣೆ ಸಂಬಂಧ ಸೊಸೈಟಿ ಮೆಂಬರ್ ಈಶ್ವರಪ್ಪ ಸಾರಿಕೋಪ್ಪಗೆ ಅರವಿಂದ್ ಪಾಟೀಲ್ ಫೋನ್ ಮಾಡಿ ಆವಾಜ್ ಹಾಕಿದ್ದಾರೆ.

ನೀನ್ಯಾರು? ಫೋನ್ ಮಾಡಿ ಅವಾಜ್

ಪಡಿತರ ವಿತರಣೆ ಮಾಡುವಂತೆ ಫೋನ್ ಮಾಡಲು ನೀನ್ಯಾರು? ಎಂದು ತರಾಟೆ ತೆಗೆದುಕೊಂಡಿದ್ದಾರೆ. ಸೋನಾಲಿ ಸರ್ನೋಬತ್ ಮೇಡಂ ಹೇಳಿದ್ದಾರೆ ಅದಕ್ಕೆ ಫೋನ್ ಮಾಡಿದ್ದೆ ಎಂದು ಸಮಜಾಯಿಷಿ ನೀಡ್ತಿದ್ದಂತೆ, ಮೇಡಂ ಯಾರು? ಅವರಿಗೂ ಖಾನಾಪುರಕ್ಕೂ (Khanapura Assembly Constituency) ಏನು ಸಂಬಂಧ ಎಂದು ಅರವಿಂದ್ ಪಾಟೀಲ ಆವಾಜ್ ಹಾಕಿದ್ದಾರೆ. ಮಾಜಿ ಶಾಸಕನ ವೈರಲ್ ಆಡಿಯೋ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ  (Belagavi BJP) ಕಿಚ್ಚು ಹೊತ್ತಿಸಿದೆ.

ಸೋನಾಲಿ ಸರನೋಬತ್ ಪ್ರತಿಕ್ರಿಯೆ

ಅರವಿಂದ್ ಪಾಟೀಲ್ ಆಡಿಯೋ ವೈರಲ್ ಆಗ್ತಿದ್ದಂತೆ ಸೋನಾಲಿ ಸರನೋಬಾತ್ ಪ್ರತಿಕ್ರಿಯಿಸಿದ್ದಾರೆ. ನನಗೆ ಖಾನಾಪುರ ಕ್ಷೇತ್ರದ ಮಹಿಳಾ ಪ್ರಭಾರಿ ಜವಾಬ್ದಾರಿ ನೀಡಿದ್ದಾರೆ. ಖಾನಾಪುರ ಕ್ಷೇತ್ರದಲ್ಲಿ ಶೇ. 50 ರಷ್ಟು ಮಹಿಳಾ ಮತದಾರರಿದ್ದಾರೆ. ಹೀಗಾಗಿ ಖಾನಾಪುರ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಿಂದ ಸಂಘಟನೆ ಮಾಡ್ತಿದ್ದೇನೆ. ಖಾನಾಪುರ ಕ್ಷೇತ್ರದಲ್ಲಿ ಪ್ರತಿ ಹಳ್ಳಿಗೆ ಡೋರ್ ಟು ಡೋರ್ ಹೋಗ್ತಿದ್ದೇನೆ.

Credit war between Khanapura BJP Leaders Former MLA Aravind Patil Audio leak csb mrq
ಬಿಜೆಪಿ ಧ್ವಜ


ಹಳೆಯ ಬಿಜೆಪಿ ಕಾರ್ಯಕರ್ತರ ಸಹಾಯದಿಂದ ಪಕ್ಷ ಸಂಘಟನೆ ಮಾಡ್ತಿದ್ದೇನೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಪಡಿತರ ವಿತರಣೆ ಕೆಲಸ ಮಾಡಿರಲಿಲ್ಲ. ನಾವು ಸರ್ವೇ ಮಾಡಿ ಮನವಿ ಮಾಡಿದಾಗ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.

ಕ್ಷೇತ್ರದಲ್ಲಿ ನನ್ನ ಮನೆ, ಕಚೇರಿ ಇದೆ

ನಂದಗಡ ಸೊಸೈಟಿಯಿಂದ ಪಡಿತರ ವಿತರಣೆ ಕಾರ್ಯ ಆಗಬೇಕಿತ್ತು ಅದು ಆಗಿಲ್ಲ. ನಮ್ಮ ನಾಯಕರ ಮಧ್ಯೆ ಭಿನ್ನಮತ ಏನಿಲ್ಲ. ಖಾನಾಪುರ ಕ್ಷೇತ್ರದಲ್ಲಿ 240 ಹಳ್ಳಿಗಳು ಬರುತ್ತೆ, ಎಲ್ಲರೂ ಲೋಂಡಾಗೆ ಬರಲು ಕಷ್ಟ ಆಗುತ್ತೆ. 26 ಹಳ್ಳಿಗಳ ಪಡಿತರ ವಿತರಣೆ 8 ಸೆಂಟರ್ ಪಾಯಿಂಟ್ ಮಾಡಿ ವಿತರಣೆ ಮಾಡಲು ಹೇಳಿದ್ದಾರೆ.

ಇದನ್ನೂ ಓದಿ:  Veer Savarkar: ಸಾವರ್ಕರ್ ವಿವಾದಕ್ಕೆ ಬಿಗ್ ಟ್ವಿಸ್ಟ್; ಈ ಸುದ್ದಿಯಿಂದ ಕಾಂಗ್ರೆಸ್​ಗೆ ತೀವ್ರ ಮುಖಭಂಗ

ನಂದಗಡದಿಂದ 8 ಕೇಂದ್ರಗಳಿಗೆ ವಿತರಣೆ ಮಾಡಲು ನಮ್ಮ ಮನವಿ ಇದೆ. ಅರವಿಂದ್ ಪಾಟೀಲ್ ಬಿಜೆಪಿ ಸೇರಿದ್ದಕ್ಕೆ ಸ್ವಾಗತಿಸುವೆ‌‌. ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಇದ್ದೇನೆ, ಟಿಕೆಟ್ ಕೇಳುವೆ. ನನ್ನ ಕಚೇರಿ, ಮನೆ ಅಲ್ಲೇ ಇದೆ ಎಂದು ತಿರುಗೇಟು ನೀಡಿದರು.
Published by:Mahmadrafik K
First published: