ಹಾವೇರಿ: ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (BJP National General Secretary C T Ravi) ಕಾಂಗ್ರೆಸ್ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಕಣ್ಣಿದ್ದು ಕುರುಡರಂತೆ, ಕಿವಿಯಿದ್ದು ಕಿವುಡರಂತೆ ಹಾಗೂ ಮಾತಿದ್ದು ಮೂಗರಂತೆ ಎಂದು ಕೆಲವರು ಜಾಣ ಕುರುಡುರಂತೆ ವರ್ತಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ (PM Modi) ದುಡ್ಡಲ್ಲಿ ಸಿದ್ದರಾಮಯ್ಯ ಜಾತ್ರೆ ಮಾಡಿದರು. ಅನ್ನಭಾಗ್ಯ (Anna Bhagya) ಇವರ ಮನೆಯಲ್ಲಿ ಕೊಟ್ಟರು ಅನ್ನೋ ರೀತಿ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಮಾತನಾಡುತ್ತಾರೆ. ಆಮೇಲೆ ಮೋದಿ ಬಂದು ಲೆಕ್ಕಾ ಕೊಟ್ಟು ಹೇಳಿದರು. ಇವಾಗ ಸೀಲ್ ಯಾರದ್ದು ಹಾಕಬೇಕೊ ಮೋದಿಯವರದ್ದು ಹಾಕಬೇಕು. ಆದರೆ ಇವರು ತಮ್ಮ ಲೇಬಲ್ ಹಾಕಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರು ಮಾನ ಮರ್ಯಾದೆ ನಾಚಿಕೆ ಬಿಟ್ಟು ನನ್ನ ಕಾಲದಲ್ಲಿ ಆಗಿದ್ದು ಎಂದು ಹೇಳುತ್ತಾರೆ. ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ವಿಮಾನ ನಿಲ್ದಾಣ ಮಾಡಿದರು. ಆದರೆ ಸಿದ್ದರಾಮಯ್ಯನವರು ಏನ್ ಅಂತಾರೆ ನಾನೇ ಮಾಡಿದ್ದು ಅಂತಾರೆ ಎಂದು ಹೇಳಿದರು.
ಎಲ್ಲದ್ಕಕೂ ನಮ್ಮದು ಅಂತ ಬರ್ತಾರೆ
ಏನ್ ಮಾಡಿದರು ನಾವು ಮಾಡಿದ್ದು ಮಾಡಿದ್ದು ಅಂತಾರೆ, ಹೀಗಾಗಿ ಎಲ್ಲದಕ್ಕೂ ಬಂದು ನಂದು ಎಲ್ಲಿ ಇಡ್ಲಿ ಅಂತಾರೆ. ವಿಧಾನಸೌಧಕ್ಕೆ ಚೆಂಡು ಹೂ ಹಾಕಿಕೊಂಡು ಬಂದು ಜನರ ಕಿವಿಗೆ ಇಡಬಹುದು ಅಂತ ತಿಳಿದುಕೊಂಡಿದ್ದಾರೆ.
ಕಾಂಗ್ರೆಸ್ನವರ ಸುಳ್ಳಿಗೆ ಮಿತಿಗೆ ಇಲ್ಲ. ನಮ್ಮ ಸರ್ಕಾರ ಯಾವುದೇ ಯೋಜನೆ ತಂದ್ರೆ ಅದು ನಮ್ಮದು ಎಂದು ಹೇಳಿಕೊಂಡು ಬರುತ್ತಾರೆ. ಉಕ್ರೇನ್ನಿಂದ ಭಾರತೀಯರನ್ನು ಕರೆತಂದಿದ್ದು ನಾವೇ, ನಾನೇ ಮಹದೇವಪ್ಪನ ಮತ್ತು ಜಾರ್ಜ್ ಅವರನ್ನ ಕಳಿಸಿದ್ದೆ ಅಂತ ಹೇಳಿದರೂ ಹೇಳಬಹುದು ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿಯೂ ಬುಲ್ಡೋಜರ್ ಚಾಲೂ ಮಾಡ್ತೀವಿ
ಬಿಜೆಪಿಗೂ ಕಾಂಗ್ರೆಸ್ ವ್ಯತ್ಯಾಸ ಇದೆ. ಮುಸ್ಲಿಮರು ಶಿಶುನಾಳ ಷರೀಫ್ ಅವರೊಂದಿಗೆ ಗುರುತಿಸಿಕೊಂಡದೇ ನೀವೂ ನಮ್ಮವರೇ. ಬಿನ್ ಲಾಡೆನ್ ರೀತಿ ಗುರುತಿಸಿಕೊಂಡರೆ ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ನಾವು ಸಿದ್ಧರಿದ್ದೇವೆ. ಬೆಂಕಿ ಹಾಕೋದಕ್ಕೆ ಬಂದರೆ ಯೋಗಿ ಆದಿತ್ಯನಾಥ್ ರೀತಿ ಕರ್ನಾಟಕದಲ್ಲಿ ಬುಲ್ಡೋಜರ್ ಚಾಲೂ ಮಾಡಲಾಗುವುದು ಎಂದು ಹೇಳಿದರು.
ಆಯ್ಕೆ ನಿಮ್ಮದು ಎಂದ ಸಿ.ಟಿ.ರವಿ
ಇಬ್ರಾಹಿಂ ಸುತಾರಾಂ ನಮ್ಮ ಜನ ಬಂದ್ರು ಅಂತಾ ಪ್ರೀತಿಯಿಂದ ತಬ್ಬಿಕೊಳ್ಳುತ್ತೇವೆ. ಅವಾಗ ನಿಮ್ದುಕೆ ಹಬ್ಬ ನಮ್ದುಕೆ ಅಗುತ್ತದೆ. ನಮ್ದುಕೆ ಹಬ್ಬ ನಿಮ್ದುಕೆ ಆಗುತ್ತೆ. ಏನಾಗಿ ಬರ್ತಿರೊ ನಿಮಗೆ ಬಿಟ್ಟಿದ್ದು. ಒಂದು ವೇಳೆ ನೀವೂ ಬಿನ್ ಲಾಡೆನ್ ಆಗಿ ಬಂದರೆ ಮಟಾಷ್ ಆಗೋದು ಗ್ಯಾರಂಟಿ ಎಂದು ಗುಡುಗಿದರು.
ಇದನ್ನೂ ಓದಿ: CT Ravi: ಮಾಂಸ ತಿಂದಿದ್ದು ನನಗೆ ನೆನಪು ಇರಲಿಲ್ಲ; ವಿವಾದ ಭುಗಿಲೆದ್ದ ಬೆನ್ನಲ್ಲೇ ಸಿ ಟಿ ರವಿ ಸ್ಪಷ್ಟನೆ
ಸಿದ್ದರಾಮಯ್ಯ ಬಂದ್ರೆ ಮಾತ್ರ ಕೆಲಸ ಮಾಡ್ತೀನಿ
ಕೋಲಾರದಿಂದ ಸ್ಪರ್ಧೆಗೆ ಸಿದ್ದರಾಮಯ್ಯ ಹಿಂದೇಟು ಹಿನ್ನೆಲೆ ಶಾಸಕ ಶ್ರೀನಿವಾಸಗೌಡ ಬಹಿರಂಗವಾಗಿ ಬೇಸರ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಬಂದ್ರೆ ಮಾತ್ರ ಕೆಲಸ ಮಾಡ್ತೇನೆ, ಇಲ್ಲ ಅಂದ್ರೆ ರಾಜಕೀಯ ನಿವೃತ್ತಿಯಾಗುತ್ತೆ ಅಂತ ಘೋಷಿಸಿದ್ದಾರೆ.
ನಾನಂತೂ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಿಲ್ಲ. ನನ್ನನು ಕರೆದು ಮಾತಾಡಿದ ಬಳಿಕ ಕ್ಷೇತ್ರ ಬಿಟ್ಟು ಕೊಟ್ಟಿದ್ದೇನೆ. ಈಗ ನನ್ನನು ಏನೂ ಕೇಳದೆ ಈ ನಿರ್ಧಾರ ತೆಗೆದುಕೊಂಡರೆ ಅಂತ ಬೇಸರ ಹೊರ ಹಾಕಿದ್ರು.
ಪುಲಿಕೇಶಿನಗರ ‘ಕೈ’ಟಿಕೆಟ್ ಫೈಟ್
ಬೆಂಗಳೂರಿನ ಪುಲಿಕೇಶಿನಗರ ಕಾಂಗ್ರೆಸ್ ಟಿಕೆಟ್‌ಗಾಗಿ ಬಿಗ್ ಫೈಟ್ ನಡೆಯುತ್ತಿದೆ. ಅಖಂಡ ಶ್ರೀನಿವಾಸಮೂರ್ತಿ ಕ್ಷೇತ್ರದ ಮೇಲೆ ಕೆ.ಎಚ್ ಮುನಿಯಪ್ಪ, ಪರಮೇಶ್ವರ್ ಕಣ್ಣಿಟ್ಟಿದ್ದಾರೆ. ಜೊತೆಗೆ ಸಂಪತ್ ರಾಜ್, ಪ್ರಸನ್ನ ಕುಮಾರ್ ಕೂಡ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸ್ತಿದ್ದಾರೆ. ಕ್ಷೇತ್ರ ಕೈ ತಪ್ಪುವ ಭೀತಿಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿ, ಸಿದ್ದು ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ರು. ಬಳಿಕ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ, ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಅಂತ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ