• Home
  • »
  • News
  • »
  • state
  • »
  • Mandya Politics: ಸುಮಲತಾ Vs ಅನ್ನದಾನಿ: ಸಾವಿನ ನೆರವು ಕೊಡಿಸೋದರಲ್ಲಿ ಕ್ರೆಡಿಟ್​ ಪಾಲಿಟಿಕ್ಸ್

Mandya Politics: ಸುಮಲತಾ Vs ಅನ್ನದಾನಿ: ಸಾವಿನ ನೆರವು ಕೊಡಿಸೋದರಲ್ಲಿ ಕ್ರೆಡಿಟ್​ ಪಾಲಿಟಿಕ್ಸ್

ಶಾಸಕ ಅನ್ನದಾನಿ, ಸಂಸದೆ ಸುಮಲತಾ ಅಂಬರೀಶ್

ಶಾಸಕ ಅನ್ನದಾನಿ, ಸಂಸದೆ ಸುಮಲತಾ ಅಂಬರೀಶ್

ಬಾಲಕಿ ಮೃತಪಟ್ಟ ದಿನದಂದು 25 ಲಕ್ಷ ನೆರವು ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದಾಗಿ ಅನ್ನದಾನಿ ಹೇಳಿದ್ದಾರೆ. ಇತ್ತ ಸುಮಲತಾ ಅಂಬರೀಶ್, ಸಿಎಂ ಬಳಿ ನಾನು ಮನವಿ ಮಾಡಿದ್ದರಿಂದ ತಕ್ಷಣ ನೆರವು ಘೋಷಣೆ ಮಾಡಿದ್ರು ಎಂದು ಹೇಳುತ್ತಿದ್ದಾರೆ.

  • Share this:

ಮಂಡ್ಯದಲ್ಲಿ ಮತ್ತೊಮ್ಮೆ ಕ್ರೆಡಿಟ್ ಪಾಲಿಟಿಕ್ಸ್ (Mandya Credit Politics) ಆರಂಭಗೊಂಡಿದೆ. ಲೈಂಗಿಕ ದೌರ್ಜನ್ಯದಿಂದ ಮೃತಪಟ್ಟ ಮಳವಳ್ಳಿಯ (Malvalli, Mandya) ಬಾಲಕಿ ಕುಟುಂಬಕ್ಕೆ ನೆರವು ಕೊಡಿಸುವ ವಿಚಾರದ ಕ್ರೆಡಿಟ್ ತೆಗೆದುಕೊಳ್ಳಲು ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh) ಮತ್ತು ಶಾಸಕ ಅನ್ನದಾನಿ (MLA Annadani) ಅವರ ನಡುವೆ ಕ್ರೆಡಿಟ್ ವಾರ ಶುರುವಾಗಿದೆ. ನಾನು ಮನವಿ ಮಾಡಿಕೊಂಡಿದ್ದರಿಂದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಬಾಲಕಿಯ ಕುಟುಂಬಕ್ಕೆ ನೆರವು ನೀಡಿದ್ದಾರೆ ಎಂದು ಶಾಸಕ ಅನ್ನದಾನಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಗೆ ಸುಮಲತಾ ಅಂಬರೀಶ್ ಬೆಂಬಲಿಗರು ಅಸಮಾಧಾನ ಹೊರ ಹಾಕಿದ್ದಾರೆ.


ಬಾಲಕಿ ಮೃತಪಟ್ಟ ದಿನದಿಂದಲೂ ಸುಮ್ಮನಿದ್ದ ಅನ್ನದಾನಿ ಈಗ ಕ್ರೆಡಿಟ್ ಪಡೆಯಲು ಮುಂದಾಗಿದ್ದಾರೆ. ಸುಮಲತಾ ಅಂಬರೀಶ್ ಅವರು ಸಿಎಂ ಬಳಿ ಮಾತನಾಡಿದ ಬಳಿಕ ಹತ್ತು ಲಕ್ಷ ಹಣ ನೀಡಲಾಗಿದೆ. ಶಾಸಕ ಅನ್ನದಾನಿ ಇದರ ಕ್ರೆಡಿಟ್ ಪಡೆಯಲು ಹೋಗಿ ಜನಗಳ ಮುಂದೆ ಮುಖಭಂಗ ಅನುಭವಿಸಿದ್ದಾರೆ ಎಂದು ಸಂಸದರ ಬೆಂಬಲಿಗ ಬೇಲೂರು ಸೋಮಶೇಖರ್ ಆಕ್ರೋಶ ಹೊರ ಹಾಕಿದ್ದಾರೆ.


ಕ್ರೆಡಿಟ್ ವಾರ್


ಬಾಲಕಿ ಮೃತಪಟ್ಟ ದಿನದಂದು 25 ಲಕ್ಷ ನೆರವು ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದಾಗಿ ಅನ್ನದಾನಿ ಹೇಳಿದ್ದಾರೆ. ಇತ್ತ ಸುಮಲತಾ ಅಂಬರೀಶ್, ಸಿಎಂ ಬಳಿ ನಾನು ಮನವಿ ಮಾಡಿದ್ದರಿಂದ ತಕ್ಷಣ ನೆರವು ಘೋಷಣೆ ಮಾಡಿದ್ರು ಎಂದು ಹೇಳುತ್ತಿದ್ದಾರೆ. ಹಾಗಾಗಿ ಇಬ್ಬರ ನಡುವೆ ಕ್ರೆಡಿಟ್ ಶುರುವಾಗಿದೆ.


ಜೆಡಿಎಸ್ ಶಾಸಕ ಅನ್ನದಾನಿ ಠಕ್ಕರ್


ಸುಮಲತಾ ಆರೋಪಕ್ಕೆ ಜೆಡಿಎಸ್ ಶಾಸಕ ಅನ್ನದಾನಿ ಠಕ್ಕರ್ ಕೊಟ್ಟಿದ್ದಾರೆ. ಕಮಿಷನ್ ಪಡೆಯುವವರಿಗೆ ಮಾತ್ರ ಕಮಿಷನ್ ವಿಚಾರ ಗೊತ್ತಿರುತ್ತದೆ. ನನಗೆ ಕಮಿಷನ್ ವಿಚಾರ ಗೊತ್ತಿಲ್ಲ ಎಂದರು. ಸುಮಲತಾ ಸಿನಿಮಾ ರಂಗದಲ್ಲಿನ ಹಣ ಬಿಟ್ಟು ಇನ್ನೂ ಯಾವ ಹಣವನ್ನು ಮುಟ್ಟಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಸವಾಲ್ ಹಾಕಿದ್ರು.


ರವೀಂದ್ರ ಶ್ರೀಕಂಠಯ್ಯಗೆ ದುರಹಂಕಾರ ಅಂದ್ರು ಸುಮಲತಾ


ರವೀಂದ್ರ ಶ್ರೀಕಂಠಯ್ಯ ನೀಡಿದ ಹೇಳಿಕೆಗೆ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ. ರವೀಂದ್ರ ಶ್ರೀಕಂಠಯ್ಯಗೆ ಮೈತುಂಬ ದುರಹಂಕಾರ ತುಂಬಿದೆ ಎಂದು ವಾಗ್ದಾಳಿ ನಡೆಸಿದರು. ಮೈತುಂಬ ದುರಂಹಕಾರ ತುಂಬಿದ್ದಾಗ ವಿವೇಚನೆಗೆ ಜಾಗವೆಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಜನಗಳೇ ಅವರನ್ನ ಸರಿಯಾಗಿ ಬುದ್ದಿ ಹೇಳಿ ಟಾಟಾ ಬಾಯ್ ಬಾಯ್ ಮಾಡಿ ಕಳಿಸುತ್ತಾರೆ ಎಂದು ಭವಿಷ್ಯ ನುಡಿದರು.


ಇದನ್ನೂ ಓದಿ:  Cabinet Expansion: ಸಚಿವ ಸಂಪುಟ ವಿಸ್ತರಣೆ ವೇಳೆ ಬೆಳಗಾವಿಗೆ ಬಂಪರ್‌? 


ನಾನು ಏಟ್ರಿಯಾ ಹೋಟೆಲ್​​ಗೆ  ಹೋಗಿರುವ ವಿಡಿಯೋ ಇದೆ ಎಂದು ಹೇಳುತ್ತಾರೆ. ಏಟ್ರಿಯಾ ಹೋಟೆಲ್ ಮಾಲೀಕರು 40 ವರ್ಷದಿಂದ ನಮ್ಮ ಫ್ಯಾಮಿಲಿ ಫ್ರೆಂಡ್ ಆಗಿದ್ದಾರೆ ಎಂದು ತಿಳಿಸಿದರು.


ನಿನ್ನೆ 10 ಲಕ್ಷ ರೂಪಾಯಿಯ ಚೆಕ್​ ಹಸ್ತಾಂತರ


ಮಂಡ್ಯ ಜಿಲ್ಲೆಯ ಮಳವಳ್ಳಿಯ (Malavalli, Mandya) ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಇಂದು ಹತ್ಯೆಯಾದ ಬಾಲಕಿ ಮನೆಗೆ ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh), ಸಚಿವ ಗೋಪಾಲಯ್ಯ (Minister Gopalaiah) ಭೇಟಿ ನೀಡಿ ಸಾಂತ್ವಾನ ಹೇಳಿದ್ದರು.


mp sumalatha ambareesh slams jds mla raveendra srikanthaiah mrq
ಸುಮಲತಾ ಅಂಬರೀಶ್


ಇದನ್ನೂ ಓದಿ:  Nikhil Kumaraswamy: ವಿಧಾನಸಭೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ; ಹೆಚ್​ಡಿಕೆ ಸುಳಿವು

 ನೊಂದ ಕುಟುಂಬಕ್ಕೆ ಹತ್ತು ಲಕ್ಷದ ನೆರವಿನ ಚೆಕ್ ನೀಡಿದ್ದಾರೆ. ಬಾಲಕಿ ಮನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah), ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Former Minister Zameer Ahmed Khan) ಕೂಡಾ ಭೇಟಿ ನೀಡಿ ಸಾಂತ್ವಾನ ಹೇಳಿದ್ರು. ಜಮೀರ್ ಅಹ್ಮದ್ ಖಾನ್ ಬಾಲಕಿ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದರು. ಮಾಧ್ಯಮಗಳ ಮಾತಾಡಿದ ಜಮೀರ್ ಅಹ್ಮದ್ ಖಾನ್ ಆರೋಪಿಯನ್ನ ಬೀದಿಯಲ್ಲಿ ಕತ್ತರಿಸಿ ತುಂಡು ತುಂಡು ಮಾಡಬೇಕು ಎಂದು ಆಗ್ರಹಿಸಿದ್ದರು.

Published by:Mahmadrafik K
First published: