ಹಳ್ಳಿಗೆ ಬಂತು ಚಲಿಸಲಾಗದ ರೈಲು... ಮಕ್ಕಳಿಗೆ ಆಕರ್ಷಣೆಯ ಕೇಂದ್ರಬಿಂದು!

news18
Updated:July 11, 2018, 6:42 PM IST
ಹಳ್ಳಿಗೆ ಬಂತು ಚಲಿಸಲಾಗದ ರೈಲು... ಮಕ್ಕಳಿಗೆ ಆಕರ್ಷಣೆಯ ಕೇಂದ್ರಬಿಂದು!
news18
Updated: July 11, 2018, 6:42 PM IST
-ಪುಟ್ಟಪ್ಪ, ನ್ಯೂಸ್ 18ಕನ್ನಡ

ಮೈಸೂರು ( ಜುಲೈ 11) : 
ಮೈಸೂರಿನ ನಂಜನಗೂಡು ತಾಲ್ಲೂಕಿನ ಹಾರೋಪುರ ಗ್ರಾಮದಲ್ಲಿ ಈ ವಿಭಿನ್ನ ಪ್ರಯತ್ನ ನಡೆದಿದೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳಿಗೆ ಬಣ್ಣ ಹೊಡೆಸಲಾಗಿದೆ. ಆದರೆ ಇದು ಸಾಮಾನ್ಯವಾಗಿ ಶಾಲೆಗೆ ಹೊಡೆಸುವ ಬಣ್ಣವಲ್ಲ ಬದಲಿಗೆ ನಮ್ಮ ದೇಶದ ಹೆಮ್ಮೆಯ ಪ್ರಯಾಣವಾದ ರೈಲಿನ ಬಣ್ಣವನ್ನ ಇಲ್ಲಿ ಪರಿಕಲ್ಪನೆಯ ಮೂಲಕ ಬಿಡಿಸಲಾಗಿದೆ.ಸಂಪೂರ್ಣ ತ್ರಿಡಿ ಬಣ್ಣಗಳನ್ನ ಬಳಸಿ ಪೇಯಿಂಟ್‌ ಮಾಡಿರುವ ಈ ಶಾಲೆಯ ಹೊರ ಆವರಣ ಒಂದು ರೈಲಿನ ಚಿತ್ರದಂತೆ ಭಾಸವಾಗುತ್ತಿದೆ. ದೂರದಿಂದ ನೋಡಿದ್ರೆ ರೈಲೆ ಬಂದು ನಿಂತಿದೇಯೇನೋ ಅನ್ನೋ ಭಾವನೆ ಬರುತ್ತೆ. ಈ ಬಣ್ಣಗಳನ್ನ ಕಂಡ ಮಕ್ಕಳು ಸಖತ್‌ ಖುಷ್‌ ಆಗಿದ್ದಾರೆ.


ಇನ್ನು ಹಾರೋಪುರ ಶಾಲೆಗೆ ಈ ರೈಲು ಬರೋಕೆ ಇಲ್ಲಿನ ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರ ದೂರದೃಷ್ಠಿ ಕಾರಣವಗಿದೆ. ಸ್ವತಹ ಶಿಕ್ಷಕರೇ ಈ ಶಾಲೆಗೆ ಕಲರ್ಫುಲ್ ಆಗಿ ಪೇಂಟಿಂಗ್ ಮಾಡಿದ್ದು, ಸ್ಥಳಿಯರ ಸಹಾಯದಿಂದ ಈ ರೈಲಿನ ಚಿತ್ರ ಬಿಡಿಸಿದ್ದಾರೆ. ಮೂರು ಕೊಠಡಿ ಇರುವ ಶಾಲೆಯಲ್ಲಿ 50ಕ್ಕು ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮೂರು ಕೊಠಡಿಗಳನ್ನ ಸೇರಿಸಿಕೊಂಡ ಟ್ರೈನ್ ಮಾದರಿಯ ಶಾಲೆಯನ್ನಾಗಿಸಿದ್ದಾರೆ.
Loading...

ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಕೋಟಿ ಕೋಟಿ ಹಣ ಬೇಕಾಗಿಲ್ಲ, ಕೇವಲ ಕಲ್ಪನೆಯಿದ್ದರೆ ಅದನ್ನ ವಾಸ್ತವ ರೂಪಕ್ಕೆ ತರಬಹುದು ಅನ್ನೋದು ಈ ಚಿತ್ರದಿಂದ ಸಾಬೀತಾಗಿದೆ. ಈ ಬಣ್ಣದ ಶಾಲೆಗೆ ಇನ್ನಷ್ಟು ಮಕ್ಕಳು ಓದೋಕೆ ಬರಲಿ ಅನ್ನೋದೆ ಈ ಚಿತ್ರದ ಉದ್ದೇಶ ಅಂತಾರೇ ಚಿತ್ರ ಬಿಡಿಸಿದ ಶಿಕ್ಷಕ.

ಒಂದೆಡೆ ಹಾಜರಾತಿ ಕೊರೆತೆಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಆತಂಕದಲ್ಲಿದ್ರೆ. ವಿಭಿನ್ನ ಹಾಗೂ ಸದಾಭಿರುಚಿಯ ಚಿಂತನೆಯುಳ್ಳ ಶಿಕ್ಷಕರಿಂದ ಸರ್ಕಾರಿ ಶಾಲೆಗಳು ಅಭಿವೃದ್ದಿಯತ್ತ ಸಾಗುತ್ತಿವೆ. ಹಾರೋಪುರದ ಈ ಶಾಲೆಯ ಬಣ್ಣ ಎಲ್ಲೆಡೆ ಹರಡಲಿ ಅನ್ನೋದೆ ಈ ಶಿಕ್ಷಕರ ಆಶಯ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...