ನಮ್ಮ ಮೆಟ್ರೋ ಕಾಮಗಾರಿ ವೇಳೆ ತಪ್ಪಿದ ಭಾರೀ ಅನಾಹುತ: 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್

ಕೂದಲೆಳೆ ಅಂತರದಲ್ಲಿ ನೂರಾರು ಕಾರ್ಮಿಕರು ಪಾರಾಗಿದ್ದಾರೆ. ನಮ್ಮ ಮೆಟ್ರೋ ಕಾಮಗಾರಿ ವೇಳೆ ಭಾರೀ ಅನಾಹುತವೊಂದು ತಪ್ಪಿದೆ. ಬರೋಬ್ಬರಿ ನಲವತ್ತು ಅಡಿ ಎತ್ತರದಿಂದ ಕ್ರೇನ್ ಕೆಳಗೆ ಬಿದ್ದಿದೆ. ಈ ಅವಘಡಕ್ಕೆ ಸಿಬ್ಬಂದಿಗಳ ನಿರ್ಲಕ್ಷ್ಯ ಎಂದು ಹೇಳಲಾಗುತ್ತಿದೆ.

ನಲವತ್ತು ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್

ನಲವತ್ತು ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್

  • Share this:
ಬೆಂಗಳೂರು: ನಮ್ಮ ಮೆಟ್ರೋ (Namma Metro) ರೈಲು ಬೆಂಗಳೂರಿ(Bengaluru)ನ ನಗರದ ಜೀವನಾಡಿಯಾಗಿ ಬದಲಾಗುತ್ತಿದೆ. ನಗರದ ಎಲ್ಲ ಭಾಗಗಳಿಗೂ ಮೆಟ್ರೋ ರೈಲು ತಲುಪಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಸ್ಥಳದಲ್ಲಿ ಪದೇ ಪದೇ ಅವಘಡಗಳು ನಡೆಯುತ್ತಿದ್ದು, ಕಾರ್ಮಿಕರು ಹೆದರಿಕೊಂಡು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದೀಗ ಮತ್ತೊಂದು ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ನೂರಾರು ಕಾರ್ಮಿಕರು ಪಾರಾಗಿದ್ದಾರೆ. ನಮ್ಮ ಮೆಟ್ರೋ ಕಾಮಗಾರಿ ವೇಳೆ ಭಾರೀ ಅನಾಹುತವೊಂದು ತಪ್ಪಿದೆ. ಬರೋಬ್ಬರಿ ನಲವತ್ತು ಅಡಿ ಎತ್ತರದಿಂದ ಕ್ರೇನ್ ಕೆಳಗೆ ಬಿದ್ದಿದೆ. ಈ ಅವಘಡಕ್ಕೆ ಸಿಬ್ಬಂದಿಗಳ ನಿರ್ಲಕ್ಷ್ಯ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕ ಆಗಮಿಸದ ಮೆಟ್ರೋ ಅಧಿಕಾರಿಗಳು

ಸಿಲ್ಕ್ ಬೋರ್ಡ್  to ಕೆ ಆರ್ ಪುರಂ (silk board to kr puram) ಮಾರ್ಗವಾಗಿ ನಮ್ಮ ಮೆಟ್ರೋ ಫೇಸ್-2 ಕಾಮಗಾರಿ ನಡೆಯುತ್ತಿದೆ. ಇಂದು ಬೆಳಗ್ಗೆ ಸುಮಾರು 6.30ಕ್ಕೆ ಮೆಟ್ರೋ ಸಗ್ಮೆಂಟ್ಸ್ ಜೋಡಿಸುವ ಮಿಷನ್ ಅರ್ಧಕ್ಕೆ ಕಟ್ ಆಗಿ ಕೆಳಗೆ ಬಿದ್ದಿದೆ. ಸ್ಥಳದಲ್ಲಿದ್ದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಕುಸಿದಿರುವ ಲಾಂಚಿಂಗ್ ಗಾರ್ಡ್ ಮಷೀನ್ ಮೇಲಕ್ಕೆ ಎತ್ತುವ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದಾರೆ. ಅಸಂಬಲ್ ಜೋಡಿಸುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಇಂಜಿನೀಯರ್ ಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದ್ರೆ ಘಟನೆ ನಡೆದು ಆರು ಗಂಟೆಗಳಾದ್ರೂ ಯಾವ ಮೆಟ್ರೋ ಅಧಿಕಾರಿಗಳು ಆಗಮಿಸಿಲ್ಲ.

ಹೊರ ಬಂದ ಊರ್ಜಾ ಯಂತ್ರ

ಸೆಪ್ಟೆಂಬರ್ 22ರಂದು ಬೆಂಗಳೂರಿನ ನಮ್ಮ ಮೆಟ್ರೊ ಎರಡನೆಯ ಹಂತದ ಕಾಮಗಾರಿಯ ಕಂಟೋನ್ಮೆಂಟ್ ನಿಂದ ಶಿವಾಜಿ ನಗರ ಮೆಟ್ರೋ ನಿಲ್ದಾಣ ವರೆಗೆ ಊರ್ಜ ಯಂತ್ರವು ಸುರಂಗ ಮಾರ್ಗ ಕೊರೆದು ಶಿವಾಜಿ ನಗರ ಮೆಟ್ರೋ ನಿಲ್ದಾಣದಲ್ಲಿ ಹೊರ ಬರೋದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಕ್ಷಿಸಿದ್ದರು. ನಮ್ಮ ಮೆಟ್ರೊ' ಹಂತ-2ರ ಕಾಳೇನ ಅಗ್ರಹಾರ-ನಾಗವಾರ ಮಾರ್ಗದ ಯೋಜನೆಯಲ್ಲಿ, ಕಂಟೋನ್ ಮೆಂಟ್ ನಿಲ್ದಾಣದಿಂದ ಶಿವಾಜಿನಗರವರೆಗೆ 855 ಮೀಟರ್ ಸುರಂಗವನ್ನು ಕೊರೆದು ಊರ್ಜಾ ಯಂತ್ರ ಹೊರ ಬಂದಿತ್ತು.

ಇದನ್ನೂ ಓದಿ: Bengaluru: ಮೆಟ್ರೋ ಕಾಮಗಾರಿ ವೇಳೆ 30 ಅಡಿ ಮಣ್ಣು ಕುಸಿತ, ಸರಿಯಾಗಿ ಬಾವಿ ಮುಚ್ಚದಿದ್ದಕ್ಕೆ ಅವಘಡ..!

30 ಅಡಿ ಕುಸಿದ ಮಣ್ಣು

ಟ್ಟಿಗೆರೆಯಿಂದ  ನಾಗವಾರದವರೆಗೆ(Gottigere-Nagawara) ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಟ್ರ್ಯಾನಿ ರಸ್ತೆಯಲ್ಲಿದ್ದ ಬಾವಿಯೊಂದನ್ನು ಮುಚ್ಚಲಾಗಿತ್ತು. ಆದರೆ ಈಗ ಏಕಾಏಕಿ ಬಾವಿ(Well) ಕುಸಿದಿದ್ದು, ಸುಮಾರು 30 ಅಡಿ ಮಣ್ಣು ಕುಸಿದಿದೆ ಎಂದು ತಿಳಿದು ಬಂದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇತ್ತೀಚೆಗಷ್ಟೇ ಟಿಬಿಎಂ ಸುರಂಗ ಕೊರೆದು ಹೊರಬಂದಿತ್ತು.  ಟನಲ್ ಪ್ರೆಶರ್ ಗೆ ಮಣ್ಣು ಕುಸಿದು ಭಾರೀ ಸಮಸ್ಯೆ ಎದುರಾಗಿದೆ.  ಮುಚ್ಚಿದ್ದ ಬಾವಿ ಮಣ್ಣು ಕುಸಿದು ಕೆಳಗೆ ಬಿದ್ದಿದೆ. ಮುಂಜಾನೆ 3 ಗಂಟೆಗೆ ಈ ಘಟನೆ ನಡೆದಿದೆ. ಮಾಲೀಕ ಮುಬೀನ್​  ಎಂಬವರಿಗೆ ಸೇರಿದ ಜಾಗ ಎಂದು ತಿಳಿದು ಬಂದಿದೆ. ಬಿಎಂಆರ್​ಸಿಎಲ್​ ಅಧಿಕಾರಿಗಳೇ ಈ ಅವಘಡಕ್ಕೆ ಕಾರಣ ಎಂದು ಜಾಗದ ಮಾಲೀಕರು ಆರೋಪಿಸುತ್ತಿದ್ದಾರೆ. ಹೀಗಾಗಿ ನಮ್ಮ ಮೆಟ್ರೋ ಈ ಜಾಗ ಪಡೆದು ಇದಕ್ಕೆ ಪರಿಹಾರ ನೀಡಲಿ ಎಂದು ಮಾಲೀಕರು ಪಟ್ಟು ಹಿಡಿದಿದ್ದಾರೆ.

ಕೆಂಗೇರಿವರೆಗೆ ಮೆಟ್ರೋ

ಕಳೆದ ಆಗಸ್ಟ್ 29ರಂದು ನಾಯಂಡನಹಳ್ಳಿಯಿಂದ ಕೆಂಗೇರಿವರೆಗಿನ ಮೆಟ್ರೋ ರೈಲು ಸಂಚಾರ ಉದ್ಘಾಟನೆ ಮಾಡುವ ಮೂಲಕ ಈ ಮಾರ್ಗದಲ್ಲಿ ಓಡಾಡುವ ಸಾವಿರಾರು ಜನರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿವರೆಗಿನ ಒಟ್ಟು 7.5 ಕಿ.ಮಿ. ಉದ್ದದ 6  ನಿಲ್ದಾಣಗಳಿರುವ ಮೆಟ್ರೋ ಸಂಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಸಿರು ನಿಶಾನೆ ತೋರಿಸುವ ಮೂಲಕ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿದ್ದರು.

ಇದನ್ನೂ ಓದಿ:   CCB Arrest Drug Peddlers ಬರ್ತ್ ಡೇ ಗಿಫ್ಟ್, ಸ್ವಿಗ್ಗಿಯಲ್ಲಿ ಗಾಂಜಾ ಸಾಗಾಟ ಮಾಡ್ತಿದ್ದ ಇಬ್ಬರು ಬೆಂಗಳೂರು ಪೊಲೀಸರ ಬಲೆಗೆ

2019 ರಲ್ಲೇ ಈ ಮಾರ್ಗದ ಉದ್ಘಾಟನೆಯಾಗಬೇಕಿತ್ತು. ಆದರೆ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ 2 ವರ್ಷ ತಡವಾಗಿ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. 1,560 ಕೋಟಿ ರೂ. ವೆಚ್ಚದಲ್ಲಿ ಈ ರೈಲು ಮಾರ್ಗ ನಿರ್ಮಾಣಗೊಂಡಿದ್ದು, ಭೂ ಸ್ವಾಧೀನಕ್ಕಾಗಿ 360 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ಸೇವೆ ಆರಂಭದಿಂದ ದಿನಕ್ಕೆ 75 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ. ಇನ್ನು ನಮ್ಮ ಮೆಟ್ರೋ ಯೋಜನೆಯ ಹಂತ-2 ಅಡಿ ನಾಯಂಡಹಳ್ಳಿಯಿಂದ ಕೆಂಗೇರಿಯವರೆಗೆ ರೀಚ್ 2ರ ವಿಸ್ತರಣಾ ಕಾಮಗಾರಿ ಯೋಜನೆ ಇದಾಗಿದೆ.
Published by:Mahmadrafik K
First published: