ಮೈಸೂರಿನ ಕೆಆರ್​ ವೃತ್ತದ ಮಹಾರಾಜರ ಪ್ರತಿಮೆಯಲ್ಲಿ ಬಿರುಕು; ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ

ಅಮೃತ ಶಿಲೆಯಲ್ಲಿ ನಿರ್ಮಾಣವಾಗಿರುವ ನಾಲ್ವಡಿ ಪ್ರತಿಮೆಯ ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಸೀಳು ಬಿಟ್ಟಿದೆ . ಇನ್ನು ಈ ಬಿರುಕು ಕಾಣಿಸಿಕೊಳ್ಳುತ್ತಿದ್ದಂತೆ ಪಾಲಿಕೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ಕೂಡ ತರಲಾಗಿದೆ. ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

news18-kannada
Updated:February 19, 2020, 1:37 PM IST
ಮೈಸೂರಿನ ಕೆಆರ್​ ವೃತ್ತದ ಮಹಾರಾಜರ ಪ್ರತಿಮೆಯಲ್ಲಿ ಬಿರುಕು; ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ
ಮೈಸೂರಿನ ಕೆಆರ್​ ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜರ ಪ್ರತಿಮೆ
  • Share this:
ಮೈಸೂರು (ಫೆ. 19): ಸಾಂಸ್ಕೃತಿಕ ನಗರಿಯ ಹೃದಯ ಭಾಗದಲ್ಲಿರುವ ಪ್ರಸಿದ್ಧ ಕೆ ಆರ್​ ವೃತ್ತದ ನಾಲ್ವಡಿ ಕೃಷ್ಣರಾಜ ಒಡೆಯರ್​ ಪ್ರತಿಮೆಯಲ್ಲಿ ಬಿರುಕು ಮೂಡಿದ್ದು, ಆತಂಕ ಸೃಷ್ಟಿಸಿದೆ. 

ಯದುವಂಶವನ್ನು ಆಳಿದ್ದ ಪ್ರಸಿದ್ಧ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್​ ನೆನಪಿನಾರ್ಥವಾಗಿ ಈ ಪ್ರತಿಮೆಯನ್ನು ಸರ್​ ಎಂ ವಿಶ್ವೇಶ್ವರಯ್ಯ  ಉದ್ಘಾಟಿಸಿದ್ದರು. ಈ ಐತಿಹಾಸಿಕ ಪ್ರತಿಮೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಆದರೂ ಮೈಸೂರು ಪಾಲಿಕೆ ಈ ಬಗ್ಗೆ ನಿರ್ಲಕ್ಷ್ಯ ತಾಳಿದೆ.

Mysore City
ಮೈಸೂರು ನಗರದ ಒಂದು ದೃಶ್ಯ

ಅಮೃತ ಶಿಲೆಯಲ್ಲಿ ನಿರ್ಮಾಣವಾಗಿರುವ ನಾಲ್ವಡಿ ಪ್ರತಿಮೆಯ ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಸೀಳು ಬಿಟ್ಟಿದೆ . ಇನ್ನು ಈ ಬಿರುಕು ಕಾಣಿಸಿಕೊಳ್ಳುತ್ತಿದ್ದಂತೆ ಪಾಲಿಕೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ಕೂಡ ತರಲಾಗಿದೆ. ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನು ಓದಿ: ದಾವಣಗೆರೆ ಪಾಲಿಕೆ: ಬಿಜೆಪಿಯ ಅಜಯ್ ಕುಮಾರ್ ನೂತನ ಮೇಯರ್; ಕಾಂಗ್ರೆಸ್​ನಿಂದ ಮತದಾನ ಬಹಿಷ್ಕಾರ

ಪ್ರತಿಮೆ ಸರಿಪಡಿಸುವಿಕೆಯಲ್ಲಿ ಇದೇ ರೀತಿ ನಿರ್ಲಕ್ಯ ಮಾಡಿದರೆ, ಇದು ಮುರಿದು ಬೀಳುವ ಸಾಧ್ಯತೆ ಕೂಡ ಇದೆ. ಇದರಿಂದ ಪ್ರತಿಮೆ ಸೌಂದರ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಎಚ್ಚೆತ್ತು ಅಧಿಕಾರಿಗಳು ಇದರ ದುರಸ್ತಿಗೆ ಮತ್ತು ನವೀಕರಣಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
First published: February 19, 2020, 1:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading