ಮಂಡ್ಯ: ರಾಜ್ಯ ಬಿಜೆಪಿ ಸರ್ಕಾರ (State BJP Government) ಭ್ರಷ್ಟಾಚಾರದಲ್ಲಿ ಮುಳುಗಿದೆ ಅಂತ ಆರೋಪಿಸಿ ರಾಜ್ಯ ಕಾಂಗ್ರೆಸ್ (KPCC) ಇದೇ ಮಾರ್ಚ್ 9ರಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ಕೊಟ್ಟಿದೆ. ಇದೀಗ ಕಾಂಗ್ರೆಸ್ (Congress) ಕರೆಕೊಟ್ಟಿರುವ ಕರ್ನಾಟಕ ಬಂದ್‌ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (C.T. Ravi) ವ್ಯಂಗ್ಯವಾಡಿದ್ದಾರೆ. ಮಂಡ್ಯದಲ್ಲಿ (Mandya) ಮಾತನಾಡಿದ ಸಿಟಿ ರವಿ, ಬಿಜೆಪಿ ಶಾಸಕ (BJP MLA) ಮಾಡಾಳು ವಿರೂಪಾಕ್ಷಪ್ಪ (Madalu Virupakshappa) ಲಂಚ ವಿಚಾರಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ (DK Shivakumar) ಜೈಲಿಗೆ (Jail) ಹೋದ ವಿಚಾರ ಪ್ರಸ್ತಾಪಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು (KPCC President) ತಿಹಾರ್ ಜೈಲಿಗೆ (Tihar Jail)ಸ್ವಾತಂತ್ರ್ಯ ಹೋರಾಟ ಮಾಡಿ ಹೋಗಿದ್ದರಾ? ಕಾಂಗ್ರೆಸ್ ನಡೆಸುವ ಪ್ರತಿಭಟನೆ ದಿನ ಕೆಪಿಸಿಸಿ ಅಧ್ಯಕ್ಷರು ಜೈಲಿಗೆ ಹೋಗಿದ್ದು ಯಾಕೆ ಅಂತ ಹೇಳಲಿ ಅಂತ ಸಿಟಿ ರವಿ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಸಿಟಿ ರವಿ ಸವಾಲು
ಮಾಡಾಳು ವಿರೂಪಾಕ್ಷಪ್ಪ ಲಂಚ ವಿಚಾರಕ್ಕೆ ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಪ್ರತಿಭಟನೆ ದಿನ ಕೆಪಿಸಿಸಿ ಅಧ್ಯಕ್ಷರು ಜೈಲಿಗೆ ಹೋಗಿದ್ದು ಏಕೆಂದು ಹೇಳಲಿ. ಹಿಂದೆ ಅವರ ಸರ್ಕಾರ ಇದ್ದಾಗ ಸಮಾಜ ಕಲ್ಯಾಣ ಇಲಾಖೆ ಸಚಿವರ ವಿಡಿಯೋ ಸ್ಪೋಟವಾಗಿತ್ತು ಅದರ ಬಗ್ಗೆ ಹೇಳಲಿ, ವಿಧಾನಸೌಧಕ್ಕೆ ಚಾಮರಾಜನಗರದ ಸಚಿವರೊಬ್ಬರು ಟಿಫನ್ ಬಾಕ್ಸ್ ನಲ್ಲಿ ಹಣ ತಂದಿದ್ದರು ಅದರ ಬಗ್ಗೆ ಹೇಳಲಿ ಅಂತ ಸವಾಲು ಹಾಕಿದ್ದಾರೆ.
ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ
ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದಿರುವ ಸಿಟಿ ರವಿ, ಬಿಜೆಪಿ ಬದಲು ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಾನೂನು ಸತ್ತಂತೆ ಇರ್ತಿತ್ತು ಎಂದಿದ್ದಾರೆ. ಬಿಜೆಪಿ ಸರ್ಕಾರದಿಂದ ಲೋಕಾಯುಕ್ತ, ಕಾನೂನಿಗೆ ಬಲ ಬಂದಿದೆ ಅಂತ ಸಿಟಿ ರವಿ ಹೇಳಿದ್ರು. ಕಾಂಗ್ರೆಸ್ ಮಿನಿ ಬಂದ್ ನಲ್ಲಿ ರೀಡೋ ಪ್ರಕರಣದ ಬಗ್ಗೆ ಪ್ರಸ್ತಾಪಿಸಲಿ. ಅಂತ ಸವಾಲು ಹಾಕಿದ ಅವರು, ಕೆಂಪಣ್ಣ ಆಯೋಗದ ವರದಿಯಂತೆ ಸರ್ಕಾರಕ್ಕೆ 8 ಸಾವಿರ ಕೋಟಿ ನಷ್ಟ ಆಗಿದೆ. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಳ್ವಿಕೆ ಇತ್ತು. ರೀಡೂ ಪ್ರಕರಣದ ರೂವಾರಿ ಯಾರು ಎಂದು ಹೇಳಲಿ ಎಂದ್ರು.
ಇದನ್ನೂ ಓದಿ: Laxmi Hebbalkar: 'ನಾನು ಬಂದಿದ್ದೇನೆ, ಈಗ್ಯಾಕೆ ನಾಯಿ ತರಹ ಒದ್ದಾಡ್ತೀಯಾ ತಾಯಿ' ನಾಲಿಗೆ ಹರಿಬಿಟ್ಟ ಜಾರಕಿಹೊಳಿ
“ಡಿಕೆಶಿ ರೈತರಿಗೆ ಟಿಪ್ಸ್ ಕೊಡಲಿ”
ಡಿಕೆಶಿ ಎಕರೆಗೆ 2 ಕೋಟಿ ಆದಾಯ ಮಾಡಿದ್ದಾರಂತೆ. ಅದು ಹೇಗೆ ಎಂದು ತಿಳಿಸಲಿ ಎಂದ ಸಿಟಿ ರವಿ, ಡಿಕೆಶಿ ಹೇಳಿದ್ರೆ ಅದನ್ನ ಕೇಳಿ ನಮ್ಮ ರೈತರೆಲ್ಲಾ ಉದ್ದಾರ ಆಗಿಬಿಡ್ತಾರೆ ಅಂತ ವ್ಯಂಗ್ಯವಾಡಿದ್ರು.
ಟಿಪ್ಪು ವಿರುದ್ಧ ಸಿಟಿ ರವಿ ಆಕ್ರೋಶ
ಇನ್ನು ಟಿಪ್ಪು ಮೈಸೂರು ಹುಲಿ ಎಂಬ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಟಿ ರವಿ, ಟಿಪ್ಪು ಮೈಸೂರು ಹುಲಿ ಅಲ್ಲ, ಆತ ಸಂಚು ಕೋರ, ಮೋಸಗಾರನ ಮಗ ಎಂದರು. ಟಿಪ್ಪುವಿನ ಬಗ್ಗೆ ಇತಿಹಾಸದಲ್ಲಿ ಗಿಳಿ ಪಾಠ ಮಾಡಲಾಗಿದೆ. ಟಿಪ್ಪುವಿನ ತಂದೆ ಹೈದರಾಲಿ ಒಬ್ಬ ಮೋಸಗಾರ ಅಂತ ಹೇಳಿದ್ರು.
“ಟಿಪ್ಪುವನ್ನು ಕೊಂದಿದ್ದಕ್ಕೆ ದಾಖಲೆ ಇದೆ”
ಮೈಸೂರು ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಅವರನ್ನ ಮೋಸದಿಂದ ಹೈದರಾಲಿ ಸೆರೆ ಮನೆಯಲ್ಲಿಟ್ಟಿದ್ದ. ಟಿಪ್ಪು ಒಬ್ಬ ಸಂಚುಕೋರನ ಮಗ ಎಂದು ಇತಿಹಾಸದಲ್ಲಿ ಹೇಳಬೇಕಿತ್ತು. ಆದರೆ ಸತ್ಯವನ್ನು ಇತಿಹಾಸದಲ್ಲಿ ಹೇಳಲೇ ಇಲ್ಲ. ಉರಿಗೌಡ ಮತ್ತು ದೊಡ್ಡ ನಂಜೇಗೌಡ ಟಿಪ್ಪುವನ್ನ ಕೊಂದಿದ್ದಕ್ಕೆ ಅನೇಕ ದಾಖಲೆ ಇವೆ. ಇದು ಒಕ್ಕಲಿಗರ ಶೌರ್ಯ, ಆದ್ರೆ ಈ ಶೌರ್ಯವನ್ನ ಅದುಮಿಡುವ ಕೆಲಸ ಮಾಡಲಾಗಿದೆ ಅಂತ ಆರೋಪಿಸಿದ್ರು.
“ಶ್ರೀರಂಗಪಟ್ಟಣ ಮಸೀದಿ ಸರ್ವೆ ಮಾಡಿಸಲಿ”
ಜಾಮೀಯ ಮಸೀದಿ ಅಂತಿದ್ದಾರಲ್ಲ ಅದನ್ನ ಸರ್ವೆ ಮಾಡಿಸಲಿ. ಒಂದು ವೇಳೆ ಅದು ಮಂದಿರ ಅನ್ನೋದಾದ್ರೆ ಟಿಪ್ಪು ಒಬ್ಬ ಮತಾಂಧ ಅನ್ನೋದನ್ನ ಒಪ್ಪಿಕೊಳ್ಳಬೇಕು ಅಥವಾ ಅದು ಮಸೀದಿ ಅಂದ್ರೆ ನಾನು ಬೇಶರಥ್ ಕ್ಷೇಮೆ ಕೇಳ್ತಿನಿ ಅಂತ ಸಿಟಿ ರವಿ ಸವಾಲು ಹಾಕಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ