ಸಿಪಿಐ (ಎಂ) ಕೇಂದ್ರ ಸಮಿತಿಯು ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಎಲ್ಲಾ ಪಕ್ಷದ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಈಗ, ಈ ನಿರ್ಧಾರದಲ್ಲಿ ಹೊಸತೇನಿದೆ ಎಂದು ಯಾರಾದರೂ ಕೇಳಬಹುದು? ಸಾಮಾನ್ಯವಾಗಿ ಕಮ್ಯುನಿಸ್ಟ್ ಪಕ್ಷವು ಪ್ರತಿವರ್ಷ ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ. ತನ್ನ ಪಕ್ಷದವರಿಗೆ ಇಂತಹ ನಿರ್ದೇಶನ ನೀಡುತ್ತಿರುವುದು ಇದೇ ಮೊದಲು. ಈ ವರ್ಷದ ಸಮಿತಿಯ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಯಿತು ಮತ್ತು ಅನುಮೋದಿಸಲಾಗಿದೆ ಎಂದು ವರದಿಯಾಗಿದೆ.
ಹಿರಿಯ ನಾಯಕ ಮತ್ತು ಸಮಿತಿಯ ಸದಸ್ಯ ಸುಜನ್ ಚಕ್ರವರ್ತಿ, "ಪಕ್ಷದ ಎಲ್ಲಾ ಕಚೇರಿಗಳಲ್ಲೂ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತೇವೆ ಮತ್ತು ಧ್ವಜಾರೋಹಣ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಆದ್ದರಿಂದ ಇದು ಮೊದಲ ಬಾರಿಗೆ ತೆಗೆದುಕೊಂಡಿರುವ ನಿರ್ಧಾರವೇನಲ್ಲ. ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿ ಕಚೇರಿಯಲ್ಲೂ ಆಚರಿಸುತ್ತೇವೆ ಎಂದು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಅವಿಭಜಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) "ಯೇ ಆಜಾದಿ ಜುತಾ ಹೈ" (ಈ ಸ್ವಾತಂತ್ರ್ಯ ಸುಳ್ಳು) ಎಂಬ ಘೋಷಣೆಯನ್ನು ಎತ್ತಿದ ಏಳು ದಶಕಗಳ ನಂತರ ಇಂತಹ ನಿರ್ಧಾರಕ್ಕೆ ಬರಲಾಗಿದೆ. 1964 ರಲ್ಲಿ ಸಿಪಿಐ ವಿಭಜನೆಯ ನಂತರ ಸಿಪಿಐ (ಎಂ) ಅಸ್ತಿತ್ವಕ್ಕೆ ಬಂದಿತು.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನ ನಂತರ ಸಿಪಿಐ (ಎಂ) ಪಕ್ಷದ ಬಗ್ಗೆ ಸಾರ್ವಜನಿಕರಲ್ಲಿ ಮೂಡಿರುವ ತಪ್ಪು ಗ್ರಹಿಕೆಯನ್ನು ಬದಲಿಸಲು ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಪಕ್ಷದ ಒಳಗಿನವರು ಮಾಹಿತಿ ನೀಡಿದ್ದಾರೆ. "ಯೇ ಆಜಾದಿ ಜೂತಾ ಹೈ" ಘೋಷಣೆಯನ್ನು ಎಡಪಂಥೀಯ ವಿರೋಧಿ ಶಕ್ತಿಗಳು ಕಮ್ಯುನಿಸ್ಟ್ ಸಿದ್ದಾಂತದ ವಿರುದ್ಧ ಬಳಸಿದ್ದಾರೆ ಈ ಧೋರಣೆಯನ್ನು ಬದಲಾಯಿಸಬೇಕಾಗಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆ ಹೊತ್ತಿನಲ್ಲಿ ಟಿಎಂಸಿ ಹಾಗೂ ಬಿಜೆಪಿ ನಡುವೆ ನಡೆದ ಪೈಪೋಟಿ ಸಿಪಿಎಂ ಪಕ್ಷವನ್ನು ಮಂಕು ಮಾಡಿತ್ತು. ಅಲ್ಲದೇ ಎಡ ಪಕ್ಷಗಳು ದೇಶ ವಿರೋಧಿಗಳು ಎನ್ನುವ ಭಾವನೆ ಬಿತ್ತುವಲ್ಲಿ ಎರಡೂ ಪಕ್ಷಗಳು ಸಫಲವಾಗಿದ್ದವು. ಇದು ಬಂಗಾಳವನ್ನು ಎರಡು ದಶಕಗಳಿಗೂ ಹೆಚ್ಚು ಕಾಳ ಆಳಿದ ಪಕ್ಷಕ್ಕೆ ಬಾರೀ ಹೊಡೆತ ನೀಡಿತ್ತು. ರಾಷ್ಟ್ರ ವಿಚಾರ ಬಂದಾಗ ನಾವು ಕೂಡ ಎಲ್ಲರಿಗೂ ಸರಿ ಸಮಾನರು ಎನ್ನುವ ವಿಚಾರ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಈ ಕ್ರಮ ಎಂದು ಹೇಳಲಾಗುತ್ತಿದೆ.
ಪಶ್ಚಿಮ ಬಂಗಾಳವು 30 ವರ್ಷಗಳಿಂದ ಕೆಂಪು ಕೋಟೆಯಾಗಿತ್ತು, ಆದರೆ ರಾಜ್ಯದ ವಿರೋಧ ಪಕ್ಷದ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಆದ ಕಾರಣ ಈ ಬಾರಿಯ ಸ್ವಾತಂತ್ರ್ಯ ದಿನಕ್ಕೆ ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ: ಯುಪಿ ಚುನಾವಣೆ ಮೇಲೆ ಕಣ್ಣು: ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಲಿದೆ ಎಂದ ಬಿಜೆಪಿ ನಾಯಕ
ಭಾರತ ಸ್ವಾತಂತ್ರ್ಯ ಪಡೆದ 52 ವರ್ಷ ನಾಗ್ಪುರದಲ್ಲಿ ಆರ್ ಎಸ್ ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಕೇಂದ್ರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಇರಲಿಲ್ಲ. ಅಲ್ಲಿ ಹಾರಾಡುತ್ತಿದ್ದದ್ದು ಭಗವಾ ಧ್ವಜ, ಅವರು ನಮಸ್ಕರಿಸುತ್ತಿದ್ದದ್ದು ಅದಕ್ಕೆ ಹೊರತು ತ್ರಿವರ್ಣ ಧ್ವಜಕ್ಕಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ 2017 ರಲ್ಲಿ ವಿವಾದದ ಕಿಡಿ ಹೊತ್ತಿಸಿದ್ದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ